ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್​.. 150ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿಯಿಂದ 40 ಕಡೆ ರೇಡ್

author-image
Bheemappa
Updated On
ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್.. ಬೆಳ್ಳಂಬೆಳಗ್ಗೆ ರಾಜ್ಯದ 54 ಕಡೆಗಳಲ್ಲಿ ರೇಡ್; ಎಲ್ಲೆಲ್ಲಿ?​
Advertisment
  • ರಾಜ್ಯದ ಯಾವ್ಯಾವ ನಗರಗಳಲ್ಲಿ ರೇಡ್ ಮಾಡಲಾಗುತ್ತಿದೆ?
  • 150ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ ಆಗ್ತಿದೆ
  • ಲೋಕಾಯುಕ್ತ ಅಧಿಕಾರಿಗಳು ಎಲ್ಲೆಲ್ಲಿ ದಾಳಿ ನಡೆಸುತ್ತಿದ್ದಾರೆ?

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳಿಂದ ಏಕಕಾಲಕ್ಕೆ 7 ನಗರದಲ್ಲಿ 40 ಕಡೆಗಳಲ್ಲಿ ರೇಡ್ ಮಾಡಿದ್ದಾರೆ.

ತುಮಕೂರು, ಮಂಗಳೂರು, ವಿಜಯಪುರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಯಾದಗಿರಿಯ ಶಹಾಪುರದಲ್ಲಿನ ಭ್ರಷ್ಟ ಅಧಿಕಾರಿಗಳ ನಿವಾಸ ಹಾಗೂ ಕಚೇರಿ ಮೇಲೆ ರೇಡ್ ಮಾಡಲಾಗಿದೆ. ಬೆಂಗಳೂರಿನ 12 ಕಡೆ, ಬೆಂಗಳೂರು ಗ್ರಾಮಾಂತರ 8, ಯಾದಗಿರಿ 5, ವಿಜಯಪುರ 4, ಮಂಗಳೂರಿನ 4 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದು ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಯಾವ್ಯಾವ ಅಧಿಕಾರಿಗಳ ಮನೆ ಮೇಲೆ ದಾಳಿ..?

ರಾಜಶೇಖರ್- ನಿರ್ಮಿತಿ ಕೇಂದ್ರದ‌ ನಿರ್ದೇಶಕರು, ತುಮಕೂರು
ಮಂಜುನಾಥ್- ಸರ್ವೇ ಮೇಲ್ವಿಚಾರಕರು, ದ.ಕ ಮಂಗಳೂರು
ರೇಣುಕಾ. ಸಾತರ್ಲೆ- ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಿಜಯಪುರ
ಮುರಳಿ ಟಿವಿ- ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಬೆಂಗಳೂರು ನಗರ
ಹೆಚ್.ಆರ್ ನಟರಾಜ್- ಇನ್ಸ್‌ಪೆಕ್ಟರ್, ಕಾನೂನು ಮಾಪನಶಾಸ್ತ್ರ, ಬೆಂಗಳೂರು
ಅನಂತ್ ಕುಮಾರ್- SDA, ಹೊಸಕೋಟೆ ತಾಲೂಕು ಕಚೇರಿ, ಬೆಂಗಳೂರು ಗ್ರಾಮಾಂತರ
ಉಮಾಕಾಂತ್- ಶಹಾಪುರ ತಾಲೂಕು, ಯಾದಗಿರಿ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment