newsfirstkannada.com

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್; 60 ಕಡೆಗಳಲ್ಲಿ ದಿಢೀರ್ ದಾಳಿ

Share :

Published March 27, 2024 at 9:45am

    ಬಿಬಿಎಂಪಿ ಇಂಜಿನಿಯರ್ ರಂಗನಾಥ್ ಮನೆ ಮೇಲೂ ದಾಳಿ

    ಗ್ರಾಮ ಪಂಚಾಯತಿ ಲೆಕ್ಕ ಸಹಾಯಕನ ಮೇಲೂ ಲೋಕ ದಾಳಿ

    ಮೈಸೂರು, ಕೊಡಗು ಸೇರಿ ಎಲ್ಲೆಲ್ಲಿ ದಾಳಿ ಮಾಡಿದ್ದಾರೆ ಗೊತ್ತಾ?

ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರು 60 ಕಡೆಗಳಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಬೆಂಗಳೂರು, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ನಡೆಸ್ತಿದ್ದಾರೆ.

ಮಂಡ್ಯ: ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಲೆಕ್ಕಸಹಾಯಕನ ಮನೆ, ಕಚೇರಿ ಮೇಲೆ ದಾಳಿಯಾಗಿದೆ. ಅಗಸನಪುರ ಗ್ರಾಮ ಪಂಚಾಯತಿ ಲೆಕ್ಕಸಹಾಯಕ ಕೃಷ್ಣೇಗೌಡ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Breaking: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬೆಂಗಳೂರಲ್ಲಿ ಐದು ಕಡೆ NIA ದಾಳಿ 

ಕೊಡಗು: ಕುಶಾಲನಗರದ ಎರಡು ಕಡೆಗಳಲ್ಲಿ ಲೋಕಾಯುಕ್ತ ದಾಳಿಯಾಗಿದೆ. ಸೋಮವಾರಪೇಟೆ ಇಓ ಜಯಣ್ಣ ಹಾಗೂ ಅಸಿಟೆಂಟ್ ಇಂಜಿನಿಯರ್ ಫಯಾಜ್ ಅಹಮದ್ ಮನೆ ಮೇಲೂ ಲೋಕಾಯುಕ್ತ ದಾಳಿಯಾಗಿದೆ.

ಧಾರವಾಡ: ಅರಣ್ಯ ಇಲಾಖೆ ಅಧಿಕಾರಿ ಮಹೇಶ್ ಹಿರೇಮಠ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸ್ತಿದ್ದಾರೆ.

ಮೈಸೂರು: ಮೈಸೂರು ಲೊಕಾಯುಕ್ತ ಎಸ್.ಪಿ. ಸಜಿದ್ ಕುಮಾರ್ ನೇತೃತ್ವದಲ್ಲಿ 12 ಕಡೆ ದಾಳಿಯಾಗಿದೆ. ಬಿಡದಿಯ ಮಂಚನಾಯಕನಹಳ್ಳಿ ಗ್ರಾಮ ಪಿಡಿಒ ಯತೀಶ್ ನಿವಾಸದ ಮೇಲೆ ದಾಳಿಯಾಗಿದೆ. ಪಿಡಿಒ ಯತೀಶ್ ಅವರನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ. ಮೈಸೂರು, ಚನ್ನಪಟ್ಟಣದಲ್ಲಿ ಮನೆಗಳನ್ನ ಹೊಂದಿರು ಆರೋಪ ಇದೆ. ಬೆಸ್ಕಾಂ ಇಂಜಿನಿಯರ್ ಒಬ್ಬರ ನಿವಾಸದ ಮೇಲೂ ದಾಳಿಯಾಗಿದೆ ಎನ್ನಲಾಗಿದೆ.

ಬೀದರ್: ಏಕಕಾಲಕ್ಕೆ ನಾಲ್ಕು ಕಡೆ ದಾಳಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಕಾರಂಜಾ ಇಲಾಖೆಯ ಅಧಿಕಾರಿಯ ನಿವಾಸಗಳು, ಕಚೇರಿ ಮೇಲೆ ದಾಳಿಯಾಗಿದೆ. ಕಾರಂಜಾ ಅಧಿಕಾರಿ ಶಿವಕುಮಾರ್ ಸ್ವಾಮಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿಯಾಗಿದೆ. ಲೋಕಾಯುಕ್ತ ಎಸ್‌ಪಿ ಆಂಟ್ಯೋನಿ ಜಾನ್ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಎನ್‌ಎಮ್.ಓಲೇಕಾರ್ ನೇತೃತ್ವದಲ್ಲಿ ದಾಳಿಯಾಗಿದೆ.

ಚಿಕ್ಕಬಳ್ಳಾಫುರ: ಚಿಕ್ಕಬಳ್ಳಾಫುರ ಕೆ.ಆರ್.ಡಿ.ಎಲ್ ನ ಇ.ಇ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಎಕ್ಸಿಕ್ಯೂಟೀವ್ ಇಂಜಿನಿಯರ್ ಸದಾಶಿವಯ್ಯಗೆ ಸೇರಿದ ಆಸ್ತಿ-ಪಾಸ್ತಿ ಮೇಲೆ ದಾಳಿಯಾಗಿದೆ. ಬೆಂಗಳೂರಿನ ಬಿಬಿಎಂಪಿಯ ಚೀಫ್ ಇಂಜಿನೀಯರ್ ರಂಗನಾಥ್ ಮನೆ ಮೇಲೆ ದಾಳಿಯಾಗಿದೆ. ಸದಾಶಿವನಗರದ ಮನೆಗೆ 5 ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್; 60 ಕಡೆಗಳಲ್ಲಿ ದಿಢೀರ್ ದಾಳಿ

https://newsfirstlive.com/wp-content/uploads/2024/03/LOKA-RAID.jpg

Load More