ಬೆಳ್ಳಂಬೆಳಗ್ಗೆ ‘ಲೋಕ’ ಭ್ರಷ್ಟರ ಬೇಟೆ.. ಕಂತೆ-ಕಂತೆ ನೋಟು, ರಾಶಿ-ರಾಶಿ ಚಿನ್ನಾಭರಣ..!

author-image
Veena Gangani
Updated On
ಬೆಳ್ಳಂಬೆಳಗ್ಗೆ ‘ಲೋಕ’ ಭ್ರಷ್ಟರ ಬೇಟೆ.. ಕಂತೆ-ಕಂತೆ ನೋಟು, ರಾಶಿ-ರಾಶಿ ಚಿನ್ನಾಭರಣ..!
Advertisment
  • ಬೆಳ್ಳಂ ಬೆಳಿಗ್ಗೆ‌ ಲೋಕಾಯುಕ್ತ ಪೊಲೀಸರಿಂದ ಏಕಾಏಕಿ ದಾಳಿ
  • ಕಚೇರಿ, ಮನೆ ಸೇರಿದಂತೆ ನಗರದ ಒಟ್ಟು ಐದು ಕಡೆಗಳಲ್ಲಿ ದಾಳಿ
  • 8 ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸ ಕಚೇರಿಗಳ ಮೇಲೆ ದಾಳಿ

ಇಂದು ರಾಜ್ಯದಾದಂತ್ಯ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಬಿಎಂಪಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರಕಾಶ್​ ಅವರ ಕಚೇರಿ, ಮನೆ ಸೇರಿದಂತೆ ನಗರದ ಒಟ್ಟು ಐದು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕಾರು ಓವರ್​ ಟೇಕ್ ಗಲಾಟೆ.. ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್​ಐಆರ್..!

publive-image

ಅಲ್ಲದೇ ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಆನೇಕಲ್, ಗದಗ, ಧಾರವಾಡ, ಕಲಬುರಗಿ ಜಿಲ್ಲೆಯ ಎಂಟು ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

publive-image

ಇತ್ತ ಕಲಬುರಗಿಯಲ್ಲೂ‌ ಲೋಕಾಯುಕ್ತ ಅಧಿಕಾರಿಗಳು RDPR ಇಲಾಖೆಯ EE ಮನೆ‌ ಮೇಲೆ ರೇಡ್ ಮಾಡಿದ್ದಾರೆ. ಇನ್ನೂ‌ ನಾಲ್ಕು ದಿನಗಳಲ್ಲಿ ಪಿಆರ್‌ಇ ವಿಭಾಗದ ಇಇ ಮಲ್ಲಿಕಾರ್ಜುನ ಅಲಿಪುರ ನಿವೃತಿಯಾಗಲಿದ್ದಾರೆ. ಅವರ ಬೆಂಗಳೂರಿನ ಮನೆ ಹಾಗು ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ನಿವಾಸ, ಕಚೇರಿ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

publive-image

ಗದಗ ಟೌನ್ ಸಿಪಿಐ ಡಿ.ಬಿ ಪಾಟೀಲ್ ಮೇಲೂ ಲೋಕಾಯುಕ್ತ ದಾಳಿಯಾಗಿದೆ. ಗದಗ ನಗರದ ಶಿವಾನಂದ ನಗರದಲ್ಲಿರುವ, ಡಿ.ಬಿ ಪಾಟೀಲ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನಲೆ, ಲೋಕಾಯುಕ್ತ ಡಿಎಸ್​​ಪಿ ಪುಷ್ಪಲತಾ ಪಿಎಸ್ ಪಾಟೀಲ್ ನೇತೃತ್ವದಲ್ಲಿ ಡಿ.ಬಿ ಪಾಟೀಲ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಪರಿಶೀಲನೆ ವೇಳೆ ಸುಮಾರು 3 ಲಕ್ಷ ರೂಪಾಯಿಗೂ ಹೆಚ್ಚು ಹಣ ಪತ್ತೆಯಾಗಿವೆ. ಐದು ನೂರು, ಎರಡು ನೂರು ಮುಖ ಬೆಲೆಯ ನೋಟುಗಳು ಪತ್ತೆಯಾಗಿವೆ. ಒಂದು ಬೆಳ್ಳಿ ಕಾಯಿನ್ ಸೇರಿದಂತೆ ಚಿಲ್ಲರೆ ಹಣವನ್ನು ಲೋಕಾಯುಕ್ತ ಅಧಿಕಾರಿಗಳಿಂದ ಎಣಿಸುತ್ತಿದ್ದಾರೆ.

publive-image

ಧಾರವಾಡದ ಮಲಪ್ರಭಾ ಪ್ರಾಜೆಕ್ಟ್ ಚೀಫ್ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಗರದ ಕೆವಿಜಿ ಬ್ಯಾಂಕ್ ಬಳಿ ಇರುವ ಕ್ವಾಟ್ರಸ್ ಸೇರಿ, ಅಧಿಕಾರಿ ಅಶೋಕ್ ವಲ್ಸಂದ ಕಚೇರಿ ಮೇಲೂ ದಾಳಿ ಮಾಡಿದ್ದಾರೆ. ಲೋಕಾ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ, ಬೆಳಗಾವಿಯ ಮೂಲ ಮನೆ ಹಾಗೂ ಬಾಗಲಕೋಟೆ ಜಿಲ್ಲೆಯ ಕಜ್ಜಿದೋಣಿ ಸೇರಿ ಜಮಖಂಡಿ, ಜಕನೂರು ಮನೆ ಮೇಲೂ ದಾಳಿ ಮಾಡಿ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ಅಶೋಕ್, ಪುತ್ರ ಹಾಗೂ ಪತ್ನಿಯ ಬ್ಯಾಂಕ್ ಅಕೌಂಟ್​ನಲ್ಲಿ ಕೋಟಿ ಕೋಟಿ ರೂ ಇರುವುದು ಗೊತ್ತಾಗಿದೆ. ಮೂವರ ಅಕೌಂಟ್​ನಲ್ಲಿ ಒಟ್ಟಾರೆ 1.5 ಕೋಟಿ ರೂ ಪತ್ತೆಯಾಗಿದೆ.

publive-image

ಚಿಕ್ಕಮಗಳೂರಿನ ನಗರಸಭೆ ಲೆಕ್ಕಾಧಿಕಾರಿ ಲತಾ ಮಣಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಜಯನಗರದಲ್ಲಿರುವ ಲತಾ ಮಣಿ ಮನೆ ಮೇಲೆ ಎರಡು ತಂಡಗಳಾಗಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ.

publive-image

ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಕೆಎನ್‌ಎನ್ಎಲ್ ಧಾರವಾಡ ಮುಖ್ಯ ಇಂಜಿನಿಯರ್ ಆಗಿರುವ ಅಶೋಕ ವಸಂದ್ ಮನೆ ಮೇಲು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೆ‌ಎನ್‌ಎನ್‌ಎಲ್ ಇಂಜಿನಿಯರ್ ಮನೆಯಲ್ಲಿ ಅರ್ಧ ಕೆಜಿ ಚಿನ್ನ, ಎರಡು ಕೆಜಿ ಬೆಳ್ಳಿ ಪತ್ತೆಯಾಗಿವೆ. ನೆಕ್ಲೆಸ್, ಪಾಟ್ಲಿ, ಬಿಲ್ವರ್ ಸೇರಿ ಅರ್ಧ ಕೆಜಿಗೂ ಅಧಿಕ ವಿವಿಧ ಚಿನ್ನಭಾರಣ ಪತ್ತೆಯಾಗಿವೆ. ಬೆಳ್ಳಿ ಪಾತ್ರೆ, ಬೆಳ್ಳಿ ಕೊಡ, ಬೆಳ್ಳಿಯ ದೀಪಸ್ತಂಭ, ಆರತಿ ತಟ್ಟೆ ಸೇರಿ ಎರಡು ಕೆಜಿ ಬೆಳ್ಳಿ ಆಭರಣ ಪತ್ತೆಯಾಗಿವೆ. ಧಾರವಾಡ ಕಚೇರಿ ಹಾಗೂ ಬೆಳಗಾವಿಯ ಮನೆ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment