ಟೌನ್​ ಪ್ಲ್ಯಾನಿಂಗ್​ ಸಹಾಯಕನ ಮನೆ ಮೇಲೆ ಲೋಕಾಯುಕ್ತ ರೇಡ್​.. ಯಾರು ಈ ಮಾರುತಿ ಬಾಗ್ಲಿ?

author-image
Veena Gangani
Updated On
ಟೌನ್​ ಪ್ಲ್ಯಾನಿಂಗ್​ ಸಹಾಯಕನ ಮನೆ ಮೇಲೆ ಲೋಕಾಯುಕ್ತ ರೇಡ್​.. ಯಾರು ಈ ಮಾರುತಿ ಬಾಗ್ಲಿ?
Advertisment
  • ಇಂದು ಭ್ರಷ್ಟರಿಗೆ ಶಾಕ್​ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು
  • ಮೂವರು ಅಧಿಕಾರಿಗಳ ಮನೆ ಮೇಲೆ ಅಧಿಕಾರಿಗಳಿಂದ ದಾಳಿ‌
  • ಟೌನ್​ ಪ್ಲ್ಯಾನಿಂಗ್​ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ ಯಾರು?

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್​ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮೂವರು IAS​​ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲೆಗಳನ್ನ ಪರಿಶೀಲನೆ ಮಾಡಿದ್ದಾರೆ. IAS ಅಧಿಕಾರಿಗಳಾದ ವಾಸಂತಿ ಅಮರ್, ಟೌನ್​ ಪ್ಲ್ಯಾನಿಂಗ್​ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ, ಮತ್ತು ಬಿಬಿಎಂಪಿ ಕಾರ್ಯ ನಿರ್ವಾಹಕ ಎರ್ರಪ್ಪ ರೆಡ್ಡಿ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ, ಜನಾಂಗೀಯ ನಿಂದನೆ

ಈ ಹಿಂದೆ ಈ ಮೂವರು ಅಧಿಕಾರಿಗಳ ವಿರುದ್ಧ ಸರ್ಕಾರಿ ಜಮೀನು ಅಕ್ರಮವಾಗಿ ಬೇರೆಯವರ ಹೆಸರಿಗೆ ವರ್ಗಾಣೆ ಮಾಡಿರೋ ಆರೋಪ ಕೇಳಿ ಬಂದಿತ್ತು. ಅದರಂತೆ ಇವತ್ತು ಎಸ್​ಪಿ ವಂಶಿಕೃಷ್ಣ ನೇತೃತ್ವದ ಟೀಂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ, ದಾಳಿ ವೇಳೆ ಟೌನ್​ ಪ್ಲ್ಯಾನಿಂಗ್​ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ ಮನೆಯಲ್ಲಿ ಚಿನ್ನದ ಬಳೆ, ಚಿನ್ನದ ಕಾಸಿನ ಸರ, ಚಿನ್ನದ ಚೋಕರ್, ಚಿನ್ನದ ಸರ, ಚಿನ್ನದ ಲಾಂಗ್ ಚೈನ್, ಬಂಗಾರದ ಡಾಬು, ಚಿನ್ನದ ಉಂಗುರ, ಚಿನ್ನದ ನೆಕ್ಲೆಸ್, ಚಿನ್ನದ ಮಾಂಗಲ್ಯ ಸರ, ಮಾಂಗಲ್ಯ ಸರ, ಚಿನ್ನದ ಹ್ಯಾಂಗಿಂಗ್ಸ್, ಚಿನ್ನದ ಜುಮುಕಿ, ಚಿನ್ನದ ಬೈತಲೆ, ಬೆಳ್ಳಿ ಕಾಲ್ಗೆಜ್ಜೆ, ಬೆಳ್ಳಿ ಸಾಮಾಗ್ರಿ, ವಾಚ್​ಗಳು, ಕ್ಯಾಶ್ ಸಿಕ್ಕಿವೆ.

publive-image

ಮಾರುತಿ ಬಾಗ್ಲಿ ಹಿನ್ನೆಲೆ ಏನು..?

ಬಾಗ್ಲಿ ಮಾರುತಿ 2010ನೇ ಸಾಲಿನಲ್ಲಿ ಸಹಾಯಕ ನಗರ ಯೋಜಕರಾಗಿ, ಸಹಾಯಕ ನಿರ್ದೇಶಕರ ಕಚೇರಿ ಮೈಸೂರಿನಲ್ಲಿ ನೇಮಕ ಆದರು. ಬಳಿಕ 2016 ನೇ ಸಾಲಿನಲ್ಲಿ ಹೈದ್ರಾಬಾದ್-ಕರ್ನಾಟಕ ವೃಂದದಲ್ಲಿ ನಗರ ಯೋಜಕರ ಹುದ್ದೆಗೆ ಮುಂಬಡ್ತಿ ಹೊಂದಿ ಬಿಡಿಎಗೆ ನಿಯೋಜನೆ ಆದರು.

ತದನಂತರ 2022ನೇ ಸಾಲಿನಲ್ಲಿ ಹೈದ್ರಾಬಾದ್-ಕರ್ನಾಟಕ ವೃಂದದಲ್ಲಿಯೇ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ಹೊಂದಿ ಮಾಲೂರು ಯೋಜನಾ ಪ್ರಾಧಿಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಿಯೋಜನೆ ಆದರು. 2023 ನೇ ಸಾಲಿನಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್​ ರ ವಿಶೇಷ ಕರ್ತವ್ಯಾಧಿಕಾರಿಯಾಗಿ (OSD) ನೇಮಕ ಆದರು.

ಇತ್ತೀಚೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಹಗರಣದಲ್ಲಿ ಮಾರುತಿ ಬಾಗ್ಲಿ ಹೆಸರು ಕೇಳಿ ಬಂದಿದ್ರಿಂದ ಈತನನ್ನು ಸಚಿವರ ವಿಶೇಷ ಕರ್ತವ್ಯಾಧಿಕಾರಿಯಿಂದ ಬಿಡುಗಡೆ ಮಾಡಲಾಯಿತು. ಪ್ರಸ್ತುತ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ ಇವರಿಗೆ ಎಲ್ಲರಿಗೂ ನೀಡುವಂತೆ ಕಚೇರಿ ಕೆಲಸಗಳನ್ನು ನೀಡದೇ ಕೇವಲ ವರ್ಗಾವಣೆ, ಟೆಂಡರ್‌ ವಿಷಯಗಳನ್ನು ಮಾತ್ರ ನಿರ್ವಹಿಸುಂತೆ ಆದೇಶಿಸಲಾಗಿದ್ದು ಈಗಲೂ ಸಹ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರ ಅನಧಿಕೃತ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಿಯಮಾವಳಿಗಳಂತೆ ಹೈದ್ರಾಬಾದ್-ಕರ್ನಾಟಕ ವೃಂದದಲ್ಲಿ ಮುಂಬಡ್ತಿ ಪಡೆದವರು ಕನಿಷ್ಟ 5 ವರ್ಷ ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯಲ್ಲಿನ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಬೇಕು. ಆದರೆ ಬಾಗ್ಲಿ ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯಲ್ಲಿನ ಜಿಲ್ಲೆಗಳಲ್ಲಿ ಒಂದು ದಿನವೂ ಸಹ ಸೇವೆ ಸಲ್ಲಿಸಿಲ್ಲ. ಮಾರುತಿ ಬಾಗ್ಲಿ ಹೈದ್ರಾಬಾದ್-ಕರ್ನಾಟಕ ವೃಂದದಲ್ಲಿ ಅಕ್ರಮವಾಗಿ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ಹೊಂದಿರುವುದನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ಪ್ರಕರಣ ಸಂಖ್ಯೆ 2191-92/2022 ರಲ್ಲಿ ವಜಾ ಮಾಡಿದ್ರೂ ಸಹ ಉಚ್ಚ ನ್ಯಾಯಲಯದಲ್ಲಿ ಪ್ರಕರಣ ಸಂಕ್ಯೆ 20875/2023 ಮತ್ತು 20918/2023 ರಲ್ಲಿ ತಡೆಯಾಜ್ಞೆ ತಂದು ಅಕ್ರಮವಾಗಿ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಮುಂದುವರೆಯುತ್ತಿರುವ ಆರೋಪ ಕೇಳಿ ಬಂದಿತ್ತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಬಾಗ್ಲಿ ಹಾಗೂ ಇತರೆ 4 ಮಂದಿಯನ್ನು ಸಹಾಯಕ ನಿರ್ದೇಶಕರ ಹುದ್ದೆಯಿಂದ ಹಿಂಬಡ್ತಿ ನೀಡುವಂತೆ ಕಡತ ಸಂಖ್ಯೆ ಸಿಆಸುಇ 42 ಹೈಕಉ 2024 ಮತ್ತು ನಅಇ 120 ನಯೋಸೇ 2020 ರಲ್ಲಿ ಅಭಿಪ್ರಾಯ ನೀಡಿದ್ರೂ ಸಹ ನಗರಾಭಿವೃದ್ಧಿ ಇಲಾಖೆ ಕಣ್ಮುಚ್ಚಿ ಕುಳಿತಿರುವ ಆರೋಪ ಇದೆ. ಕಾರಣ ಈತ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದು ಪ್ರಭಾವ ಬಳಸಿರುವ ಆರೋಪ ಕೂಡ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment