/newsfirstlive-kannada/media/post_attachments/wp-content/uploads/2024/07/MYS-MUDA.jpg)
ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮುಡಾ ಕೇಸ್​​, ಫೈನಲ್​ ಸ್ಟೇಜ್​ಗೆ ಬಂದು ನಿಂತಿದೆ. ನಾಳೆ ಅಂದ್ರೆ ಜನವರಿ 25ಕ್ಕೆ ತನಿಖಾ ವರದಿ ಸಲ್ಲಿಸುವಂತೆ ಕೋರ್ಟ್​ ಡೆಡ್​ಲೈನ್​ ನೀಡಿತ್ತು. ಡೆಡ್‌ಲೈನ್ ಹತ್ತಿರ ಬರ್ತಿದ್ದಂತೆ ಲೋಕಾ ಅಧಿಕಾರಿಗಳಲ್ಲಿ ಫುಲ್​ ಟೆನ್ಷನ್​ ಹೆಚ್ಚಿದ್ದು, ಮುಡಾ ಕಚೇರಿಯಲ್ಲಿ ರಾತ್ರಿಯಿಡೀ ಶೋಧ ಕಾರ್ಯ ನಡೆಸಿದ್ದಾರೆ.
ಮೈಸೂರಿನ ಜೆಎಲ್​ಬಿ ರಸ್ತೆಯಲ್ಲಿರುವ ಮುಡಾ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆಯಿಂದ ನಿರಂತರವಾಗಿ ಶೋಧ ನಡೆಸಿದ್ದಾರೆ. ರಾತ್ರಿ ಊಟವನ್ನು ಮುಡಾ ಕಚೇರಿಗೆ ತರಿಸಿಕೊಂಡು ಮಾಡಿದ್ದಾರೆ. 20-11-2020 ರಂದು ನಡೆದ ಸಭೆಯ ನಡಾವಳಿ, ಅಂದಿನ ಸಭೆಯ ಸಿಸಿಟಿವಿ, ಆಡಿಯೋ, ಲಾಗ್ ಬುಕ್ ಸೇರಿ ಹಲವು ವಸ್ತುಗಳ ಬಗ್ಗೆ ಮುಡಾದ ಅಧಿಕಾರಿಗಳಿಂದ ಲೋಕಾಯುಕ್ತ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಮುಡಾ ಹಗರಣದ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ವರದಿ ಸಿದ್ಧವಾಗಿದೆ. ಎಲ್ಲಾ ಅಂಶಗಳನ್ನ ಒಳಗೊಂಡ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿಗೆ ಕ್ಲೀನ್​ಚಿಟ್ ನೀಡಿದೆ ಎನ್ನುವ ಮಾಹಿತಿ ನ್ಯೂಸ್​​ಫಸ್ಟ್​ಗೆ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/12/SIDDARAMAIAH-5.jpg)
ವರದಿ ‘ಸಿದ್ಧ’!
- ಕೆಸರೆ ಜಮೀನು ಸರ್ವೇ ನಂ.464ರ 3.16 ಎಕರೆ ಭೂಮಿ ಪರಿವರ್ತನೆ
- 14 ಸೈಟ್​ಗಳನ್ನು ಪಡೆದುಕೊಂಡ ಆರೋಪ ಸಂಬಂಧ ನಡೆದ ತನಿಖೆ
- ಎಲ್ಲಾ ಹಂತದಲ್ಲೂ ಕೂಡ ಲೋಕಾಯುಕ್ತ ಅಧಿಕಾರಿಗಳ ತನಿಖೆ ಮುಕ್ತಾಯ
- ಮುಡಾ ಹಗರಣದಲ್ಲಿ ಅಧಿಕಾರಿಗಳ ಲೋಪವಿದೆ ಎಂದು ವರದಿ ತಯಾರಿ
- ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ & ಪತ್ನಿ ಪಾರ್ವತಿ ಪಾತ್ರವಿಲ್ಲ
- ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಹಾಗು ಅವರ ಪತ್ನಿಗೆ ಕ್ಲೀನ್ ಚಿಟ್
- ತನಿಖೆಯಲ್ಲಿ ಅಧಿಕಾರಿಗಳ ದೋಷ ಕಂಡು ಬಂದಿವೆ ಅಂತ ವರದಿ ಸಿದ್ಧ
ಅದೇನೆ ಇರಲಿ, ಕೋರ್ಟ್​ಗೆ ಜ.25 ಶನಿವಾರ ಲೋಕಾಯುಕ್ತ ತನಿಖಾ ವರದಿ ಸಲ್ಲಿಕೆ ಆಗಲಿದೆ. ವರದಿಯಲ್ಲಿ ಏನೆಲ್ಲಾ ರಹಸ್ಯ ಅಡಗಿದೆ. ಯಾರ ಮೇಲೆಲ್ಲಾ ಆರೋಪ ಹೊರಿಸಲಾಗಿದೆ ಅನ್ನೋದು ಗೊತ್ತಾಗಲಿದೆ. ಅಷ್ಟೇ ಅಲ್ಲ, ಸೋಮವಾರವೇ ಪ್ರಕರಣ ಸಿಬಿಐಗೆ ವಹಿಸಬೇಕಾ, ಬೇಡ್ವಾ ಅನ್ನೋದು ನಿರ್ಧಾರ ಆಗಲಿದೆ. ಪ್ರಕಟ ಆಗುವ ತೀರ್ಪಿನ ಮೇಲೆ ಸಿಎಂ ಸಿದ್ದರಾಮಯ್ಯರ ರಾಜಕೀಯ ಭವಿಷ್ಯವೇ ನಿಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us