newsfirstkannada.com

Lok Sabha Election: ಮೊದಲ ಹಂತದ ಚುನಾವಣೆ.. ಅತಿ ಶ್ರೀಮಂತ ಅಭ್ಯರ್ಥಿ ಯಾರು? ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

Share :

Published April 19, 2024 at 1:26pm

Update April 19, 2024 at 1:32pm

  ಕಾಂಗ್ರೆಸ್​​ನ ಈ ಅಭ್ಯರ್ಥಿ ಶ್ರೀಮಂತ ವ್ಯಕ್ತಿ ಅಂದ್ರೆ ನಂಬ್ತೀರಾ?

  ಒಂದಲ್ಲಾ ಎರಡಲ್ಲಾ, ಬರೋಬ್ಬರಿ ಎಷ್ಟು ಕೋಟಿ ಆಸ್ತಿ ಹೊಂದಿದ್ದಾರೆ ಗೊತ್ತಾ?

  ಮೊದಲ ಹಂತದ ಚುನಾವಣೆಯಲ್ಲಿ 10 ಮಂದಿ ಅಭ್ಯರ್ಥಿಯ ಆಸ್ತಿ ಶೂನ್ಯ!

ದೇಶದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಸಮಯದಲ್ಲಿ ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​​ ಅತ್ಯಂತ ಶ್ರೀಮಂತ್ರ ಮತ್ತು ಬಡ ಅಭ್ಯರ್ಥಿಯ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ 716 ಕೋಟಿ ಮೌಲ್ಯದಿಂದ ಹಿಡಿದು ಬರೀ 320 ಮೌಲ್ಯದ ಆಸ್ತಿಯಿರುವ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್​ ಮಾಡಿದೆ.

ಶುಕ್ರವಾರದಂದು ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​​ 1625 ಅಭ್ಯರ್ಥಿಗಳ ಪೈಕಿ 1618 ಅಭ್ಯರ್ಥಿಗಳನ್ನು ವಿಶ್ಲೇಷಿಸಿದೆ. ಅವರಲ್ಲಿ 10 ಮಂದಿ ತಮ್ಮ ಆಸ್ತಿ ಶೂನ್ಯ ಎಂದು ಘೋಷಿಸಿದ್ದಾರೆ.450 ಅಭ್ಯರ್ಥಿಗಳು ಅಂದರೆ ಒಟ್ಟು ಶೇ28ರಷ್ಟು ಮಂದಿ 1 ಕೋಟಿಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ.

ಅತಿ ಶ್ರೀಮಂತ ಅಭ್ಯರ್ಥಿಗಳು

1) ಮಧ್ಯಪ್ರದೇಶದ ಚಿಂದ್ವಾರದ ಕಾಂಗ್ರೆಸ್​ ಅಭ್ಯರ್ಥಿ ನಕುಲ್​ ನಾಥ್​ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಸುಮಾರು 716 ಕೋಟಿ ಆಸ್ತಿಯನ್ನು ಇವರು ಹೊಂದಿದ್ದಾರೆ.

2) ಎಐಎಡಿಎಂಕೆ ಅಶೋಕ್​​ ಕುಮಾರ್​ ಅವರು 662 ಕೋಟಿ ಆಸ್ಥಿಯನ್ನು ಘೋಷಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇವರು ತಮಿಳುನಾಡಿಮ ಈರೋಡ್​​ನಿಂದ ಸ್ಪರ್ಧಿಸುತ್ತಿದ್ದಾರೆ.

3) ಮೂವರೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ದೇವನಾಥ್ನ್​ ಯಾದವ್​ ಗುರುತಿಸಿಕೊಂಡಿದ್ದಾರೆ. ಸುಮಾರು 304 ಕೋಟಿ ಆಸ್ತಿ ಹೊಂದಿದ್ದಾರೆ. ಇವರು ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

4) ಉತ್ತರಾಖಂಡದ ತೆಹ್ರಿ ಗರ್ಲಲ್​ನಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮಾಲಾ ರಾಜ್ಯ ಲಕ್ಷ್ಮೀ ಶಾ ಅವರು 206 ಕೋಟಿ ಮೌಲ್ಯದ ಆಸ್ಥಿ ಹೊಂದುವ ಮೂಲಕ 4ನೇ ಸ್ಥಾನದಲ್ಲಿದ್ದಾರೆ.

5) ಉತ್ತರ ಪ್ರದೇಶದ ಸಹರಾನ್​ಪುರದಿಂದ ಸ್ಪರ್ಧಿಸುತ್ತಿರುವ ಬಿಎಸ್​ಪಿಯ ಮಜೀದ್​ ಅಲಿ 159 ಕೋಟಿ ಆಸ್ತಿಯನ್ನು ಹೊಂದುವ ಮೂಲಕ 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: VIDEO: ಜಪಾನ್​ ಸುತ್ತಾಟ.. ಸ್ನೇಹಿತರೊಂದಿಗೆ ತುಂಟಾಟ.. ಯೂಟ್ಯೂಬ್​ನಲ್ಲಿ ವ್ಲಾಗ್​ ಹರಿಬಿಟ್ಟ ರಶ್ಮಿಕಾ

ಇನ್ನು ತಮಿಳುನಾಡಿದ ತೂತುಕುಡಿಯ ಸ್ವತಂತ್ರ ಅಭ್ಯರ್ಥಿ ಫೊನ್​ ರಾಜ್​ ಕೆ 320 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ನು ಮಹಾರಾಷ್ಟ್ರದ ರಾಮ್​ಟೆಕ್​​ ಕ್ಷೇತ್ರ ಮತ್ತು ಚೆನ್ನೈ ಉತ್ತರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಗಳಾದ ಕಾರ್ತಿಕ್​ ಮತ್ತು ಸೂರ್ಯಮುತ್ತು 500 ಕೋಟಿ ಆಸ್ತಿ ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lok Sabha Election: ಮೊದಲ ಹಂತದ ಚುನಾವಣೆ.. ಅತಿ ಶ್ರೀಮಂತ ಅಭ್ಯರ್ಥಿ ಯಾರು? ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/04/Nakul-Nath-Congress.jpg

Load More