newsfirstkannada.com

ಪ್ರತಾಪ್ ಸಿಂಹ ಅವರ ಕ್ಷೇತ್ರದ ಮೇಲೆ ಕಣ್ಣಿಟ್ಟ ಮಾಜಿ IPS ಅಧಿಕಾರಿ; ಬಿಜೆಪಿ ಟಿಕೆಟ್ ನೀಡುವಂತೆ ಡಿಮ್ಯಾಂಡ್..!

Share :

Published February 28, 2024 at 7:57am

Update February 28, 2024 at 8:04am

    ಕೊಡಗು ಮೈಸೂರು ಕ್ಷೇತ್ರದ ಬಿಜೆಪಿ ಟಿಕೆಟ್ ಯಾರ ಪಾಲಾಗುತ್ತೆ?

    ನಾನೂ ಕೂಡ ಈ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಎಂಬ ಮಾಜಿ IPS ಅಧಿಕಾರಿ

    2 ಬಾರಿ ಗೆದ್ದ ಪ್ರತಾಪ್​ ಸಿಂಹಗೆ ಈ ಬಾರಿ ಕೊಡಗು-ಮೈಸೂರು ಟಿಕೆಟ್​ ಕೈತಪ್ಪುತ್ತಾ?

ಮಡಿಕೇರಿ: ಬಿಜೆಪಿ ಮುಖಂಡ ಭಾಸ್ಕರ್‌ರಾವ್ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಭಾಸ್ಕರ್ ರಾವ್‌, ನಾನೂ ಕೂಡ ಕೊಡಗು-ಮೈಸೂರು ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಎಂದಿದ್ದಾರೆ.

ಎಸ್‌ಪಿಯಾಗಿ ಮೂರು ವರ್ಷ ಕೊಡಗಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ‌. ರಾಜಕೀಯವಾಗಿ ಕೊಡಗು ಮೈಸೂರಿಗೆ ಇನ್ನಷ್ಟು ಸೇವೆ ಮಾಡಲು ಇಚ್ಚಿಸಿದ್ದೇನೆ. ಮಾತ್ರವಲ್ಲದೇ ನನ್ನ ಟಿಕೆಟ್​ ಆಕಾಂಕ್ಷೆಯ ಕುರಿತು ವರಿಷ್ಠರ ಗಮನಕ್ಕೂ ತಂದಿದ್ದೇನೆ, ವರಿಷ್ಠರೂ ಏನು ತೀರ್ಮಾನ ತೆಗೆದುಕೊಂಡ್ರು ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ. ಬೇರೆ ಅಭ್ಯರ್ಥಿಯನ್ನ ನಿಲ್ಲಿಸಿದ್ರು ಅವರ ಪರವಾಗಿ ನಾನು ಕೆಲಸ ಮಾಡ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ, ಈ ಬಾರಿಯ ಲೋಕಸಭಾ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್​ ಸಿಂಹ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದಾರೆ. ಆದರೀಗ ಅದೇ ಕ್ಷೇತ್ರದ ಮೇಲೆ ಮಾಜಿ ಐಪಿಎಸ್​ ಅಧಿಕಾರಿಯ ಕಣ್ಣಿದೆ. ಆದರೀಗ ಹೈಕಮಾಂಡ್​ ನಿರ್ಧಾರದಂತೆ ಈ ಬಾರಿ ಟಿಕೆಟ್​ ಯಾರಿಗೆ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

ಇನ್ನು ಬಿಜೆಪಿಯಲ್ಲಿ ಈಗಾಗಲೇ ಕೆಲವು ಅಭ್ಯರ್ಥಿಗಳು ತಮ್ಮನ್ನು ತಾವೇ ಅಭ್ಯರ್ಥಿಗಳು ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಕೆಲವರು ನಿಧಾನಗತಿಯಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ರಮೇಶ್​ ಜಿಗಜಿಗಣಿ ನಾನೇ ಅಭ್ಯರ್ಥಿಯೆಂದು ಸ್ವಯಂ ಘೋಷಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತಾಪ್ ಸಿಂಹ ಅವರ ಕ್ಷೇತ್ರದ ಮೇಲೆ ಕಣ್ಣಿಟ್ಟ ಮಾಜಿ IPS ಅಧಿಕಾರಿ; ಬಿಜೆಪಿ ಟಿಕೆಟ್ ನೀಡುವಂತೆ ಡಿಮ್ಯಾಂಡ್..!

https://newsfirstlive.com/wp-content/uploads/2023/10/PRATAP.jpg

Load More