newsfirstkannada.com

ಮಂಡ್ಯ, ಚಿಕ್ಕಮಗಳೂರು, ತುಮಕೂರಿನಲ್ಲಿ ಕೈ ಕೊಟ್ಟ EVM ಮೆಷಿನ್​, ಮತದಾನ ವಿಳಂಬ: ಆಕ್ರೋಶ ಹೊರಹಾಕಿದ ಜನರು

Share :

Published April 26, 2024 at 8:38am

    ಇವಿಎಂ ತಾಂತ್ರಿಕ ದೋಷದಿಂದ ಮತದಾನ ವಿಳಂಬ

    ಕಳೆದೊಂದು ಗಂಟೆಯಿಂದ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದೆ

    ಅಸಮಾಧಾನ ಹೊರಹಾಕಿದ ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರು

2024ರ ಲೋಕಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ 14 ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದೆ. 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ಆದರೆ ಮತದಾನ ಪ್ರಾರಂಭಕ್ಕೂ ಮುನ್ನ ಕೆಲವೆಡೆ ಇವಿಎಂ ಮೆಷಿನ್​ ಕೈಕೊಟ್ಟಿದೆ. ಇದರಿಂದ ಮತ ಚಲಾವಣೆ ವಿಳಂಬವಾಗಿದೆ.

ಚಿಕ್ಕಮಗಳೂರು, ತುಮಕೂರು, ಮಂಡ್ಯ ಮುಂತಾದೆಡೆ ಇವಿಎಂ ಮೆಷಿನ್​ ಕೈ ಕೊಟ್ಟಿದೆ. ಇದರಿಂದ ಮತದಾರರು ಕೊಂಚ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂದಹಾಗೆಯೇ ಎಲ್ಲಿಲ್ಲಿ ಸಮಸ್ಯೆ ಕಾಡಿದೆ? ನೋಡೋಣ

ಚಿಕ್ಕಮಗಳೂರು

ಇವಿಎಂ ಮೆಷಿನ್​ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಕಳೆದೊಂದು ಗಂಟೆಯಿಂದ ಮತದಾನ ಪ್ರಕ್ರಿಯೇ ಸ್ಥಗಿತಗೊಂಡಿದೆ. ಎನ್.ಆರ್.ಪುರ ತಾಲೂಕಿನ ಮೆಣಸೂರು ಗ್ರಾಮದಲ್ಲಿ ಘಟನೆ ನಡೆದಿದೆ. ಅತ್ತ ಮತದಾರರು ಮತದಾನಕ್ಕಾಗಿ ಕಾದು ಕುಳಿತ್ತಿದ್ದು, ಅಧಿಕಾರಿಗಳ ವಿರುದ್ಧ ಮತದಾರರು ಆಕ್ರೋಶ ಹೊರಹಾಕಿದ್ದಾರೆ. ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರೇನೂರು ಗ್ರಾಮದ ಮತಗಟ್ಟೆಯಲ್ಲೂ ಇವಿಎಂ ಮೆಷಿನ್​ ಕೈಕೊಟ್ಟಿದೆ. ಮತಗಟ್ಟೆ 53 ರಲ್ಲಿ EVM ಮತಯಂತ್ರ ಕೈಕೊಟ್ಟ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ತುಮಕೂರು

ಮಧುಗಿರಿ ತಾಲೂಕಿನ ಹೊನ್ನಾಪುರದಲ್ಲಿ ಮತದಾನ ವಿಳಂಬ. ಮತಗಟ್ಟೆ 49 ರಲ್ಲಿ 45 ನಿಮಿಷಗಳ ಬಳಿಕ ಮತದಾನ ಆರಂಭವಾಗಿದೆ. ವಿವಿ ಪ್ಯಾಡ್ ಸಮಸ್ಯೆ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಿದೆ.

ಇದನ್ನೂ ಓದಿ: ಮತದಾನಕ್ಕೂ ಮುನ್ನ ಮನೆ ದೇವರಿಗೆ ನಮಿಸಲಿರುವ ಸಿಎಂ.. ಹುಟ್ಟೂರಿನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿರುವ ಸಿದ್ದರಾಮಯ್ಯ

ಅತ್ತ ತುಮಕೂರು ನಗರದಲ್ಲೂ ಮತಯಂತ್ರ ಕೈಕೊಟ್ಟಿದೆ. ಮತಗಟ್ಟೆ ಸಂಖ್ಯೆ 66ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮತದಾನ ಆರಂಭವಾಗಿ ಅರ್ಧಗಂಟೆ ಕಳೆದ ಬಳಿಕ ದೋಷ ನಿವಾರಣೆಯಾಗಿದೆ.

ಮಂಡ್ಯ

ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿಯಲ್ಲಿ ಮತಗಟ್ಟೆ 100ರಲ್ಲಿ ಮತದಾನ ಕೊಂಚ ವಿಳಂಬವಾಗಿದೆ. ತಾಂತ್ರಿಕ ದೋಷದಿಂದ ಮತಯಂತ್ರ ಕೈಕೊಟ್ಟಿದೆ. ದುರಸ್ತಿ ಬಳಿಕ 7.40 ಕ್ಕೆ ಆರಂಭವಾದ ಮತದಾನ ಆರಂಭವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ, ಚಿಕ್ಕಮಗಳೂರು, ತುಮಕೂರಿನಲ್ಲಿ ಕೈ ಕೊಟ್ಟ EVM ಮೆಷಿನ್​, ಮತದಾನ ವಿಳಂಬ: ಆಕ್ರೋಶ ಹೊರಹಾಕಿದ ಜನರು

https://newsfirstlive.com/wp-content/uploads/2024/04/EVM-Achine-Problem.jpg

Load More