newsfirstkannada.com

Election Special: ಇಲ್ಲಿ ಇಬ್ಬರು ಮಾಜಿ ಸಿಎಂ ಮಕ್ಕಳ ಮಧ್ಯೆ ನೇರ ಫೈಟ್; ಸೋಲು-ಗೆಲುವಿಗೆ ಇರುವ ಪ್ಲಸ್, ಮೈನಸ್ ಏನು?

Share :

Published March 16, 2024 at 6:20am

Update March 16, 2024 at 7:07am

    ಹೈವೋಲ್ಟೇಜ್ ಕದನಕ್ಕೆ ವೇದಿಕೆ ಆಗಿದೆ ಶಿವಮೊಗ್ಗ ಲೋಕಸಭೆ ಕ್ಷೇತ್ರ

    ಕುಟುಂಬ ರಾಜಕಾರಣದ ಅಸ್ತ್ರ, ಜಾತಿಯ ಲೆಕ್ಕಾಚಾರ ಇಲ್ಲಿ ಸಕ್ಸಸ್​ ಆಗುತ್ತಾ?

    ಶಿವಮೊಗ್ಗದ ಲೋಕ ಸಮರದದಲ್ಲಿ ಗೆಲ್ಲೋದ್ಯಾರು? ಸೋಲೋದ್ಯಾರು..?

ಲೋಕ ಸಮರಕ್ಕೆ ಪಕ್ಷಗಳು ಸಜ್ಜಾಗಿವೆ. ಈಗಾಗಲೇ ರಾಷ್ಟ್ರೀಯ ಪಕ್ಷ ಬಿಜೆಪಿ ಮಾರ್ಚ್​ 13ರಂದು 2ನೇ ಅಭ್ಯರ್ಥಿ ಪಟ್ಟಿಯನ್ನು ರಿಲೀಸ್​ ಮಾಡಿದರೆ, ಅತ್ತ ಕಾಂಗ್ರೆಸ್​ ಕೂಡ  ಕರ್ನಾಟಕದ ಲೋಕಸಭಾ ಚುನಾವಣೆಗೆ ಸ್ಫರ್ಧಿಸುವ ಸ್ಪರ್ಧಿಯ ಹೆಸರನ್ನು ಪ್ರಕಟಿಸಿದೆ. ರಾಘವೇಂದ್ರ ವರ್ಸಸ್ ಗೀತಾ ಶಿವರಾಜ್ ಕುಮಾರ್ ಎಂಬ ಚರ್ಚೆ ಬೆನ್ನಲ್ಲೇ ಇದೀಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್​​.ಈಶ್ವರಪ್ಪ ಕಣಕ್ಕೆ ಇಳಿಯೋದಾಗಿ ಘೋಷಣೆ ಮಾಡಿದ್ದು, ಹೀಗಾಗಿ ಶಿವಮೊಗ್ಗ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ. 

ಬಿಜೆಪಿಯಲ್ಲಿ ಅನೇಕ ಹಾಲಿ ಸಂಸದರು ಈ ಬಾರಿ ಲೋಕ ಸಮರದಿಂದ ಕೈ ಬಿಡಲಾಗಿದೆ. ಮತ್ತೊಂದೆಡೆ ಕುಟುಂಬ ರಾಜಕಾರಣವು ಕಂಡಿದೆ. ಅದರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ತಮ್ಮ ಮೊದಲ ಮಗ ಬಿ ವೈ ರಾಘವೇಂದ್ರ ಅವರಿಗೆ ಮತ್ತೆ ಸೀಟು ಕಲ್ಪಿಸಿಕೊಟ್ಟಿರೋದು ಒಂದೆಡೆಯಾದರೆ ಮತ್ತೊಂದೆಡೆ ಶಾಸಕ ಮಧು ಬಂಗಾರಪ್ಪ ತನ್ನ ಸಹೋದರಿಗೆ ಟಿಕೆಟ್​ ನೀಡಿರುವುದು ಮತ್ತೊಂದು ಸಂಗತಿ.

ಪ್ರಬಲ ನಾಯಕರ ತವರೂರು 

ಶಿವಮೊಗ್ಗದ ಶಿಕಾರಿಪುರ ಬಿ ಎಸ್​ ಯಡಿಯೂರಪ್ಪ ಅವರ ಹುಟ್ಟೂರು. ಹಾಗಾಗಿ ಇಲ್ಲಿ ಮಾಜಿ ಸಿಎಂ ಬಿಎಸ್​ವೈ ಹಿಡಿತವಿದೆ. ಶಿವಮೊಗ್ಗದಲ್ಲಿ ಮತ್ತೆ ಕಮಲವನ್ನು ಅರಳಿಸುವ ನಿಟ್ಟಿನಲ್ಲಿ ಬಿಎಸ್​ವೈ ತಮ್ಮ ಮಗ ಬಿ ವೈ ರಾಘವೇಂದ್ರ ಅವರು ಈ ಬಾರಿಯ ಲೋಕ ಸಮರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಎದುರಾಳಿಯಾಗಿ ದೊಡ್ಮನೆ ಸೊಸೆ ನಟ ಶಿವರಾಜ್​ ಕುಮಾರ್ ಅವರ ಪತ್ನಿ ಗೀತಾ ಶಿವ ರಾಜ್​ಕುಮಾರ್ ಸ್ಪರ್ಧಿಸುತ್ತಿದ್ದಾರೆ.​​

ಒಂದೆಡೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ಕಾಂಗ್ರೆಸ್​ ಪಕ್ಷದಿಂದ ಗೆದ್ದು ಆಡಳಿತ ನಡೆಸಲು ಮುಂದಾದರೆ ಇತ್ತ ಬಿಎಸ್​ವೈ ಮಗ ಕೂಡ ಸ್ಪರ್ಧಿಸುತ್ತಿದ್ದಾರೆ. ಇವರಿಬ್ಬರಿಬ್ಬರ ಸ್ಪರ್ಧೆಯ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ. ಶಿವಮೊಗ್ಗದಿಂದ ಸ್ಪರ್ಧಿಸುತ್ತಿರುವ ಬಿ.ವೈ.ರಾಘವೇಂದ್ರ ಅವರಿಗೆ ಈ ಬಾರಿ ಇರುವ ಸವಾಲುಗಳೇನು? ಸೋಲು-ಗೆಲುವಿಗಾಗಿ ಮತ್ತು ದೋಷಗಳು ಯಾವುವು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಬಿ.ವೈ.ರಾಘವೇಂದ್ರ ಗೆಲುವಿಗೆ ಕಾರಣ

ಬಿ.ವೈ.ರಾಘವೇಂದ್ರ ಕ್ಷೇತ್ರದಲ್ಲಿ ಈಗಾಗಲೇ ಚಿರಪರಿಚಿತರಾಗಿದ್ದಾರೆ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಹಾಗೂ ಬಿಜೆಪಿ ರಾಜಾಧ್ಯಕ್ಷ ಸಹೋದರ ವಿಜಯೇಂದ್ರ ಸಹಾಯ ಮತ್ತು ಬೆಂಬಲ ಅವರಿಗಿದೆ. ಇದಲ್ಲದೆ ಹಾಲಿ ಬಿಜೆಪಿ ಸಂಸದರು ಕೈಗೊಂಡ ರೈಲ್ವೆ, ರಸ್ತೆ ಹಾಗೂ ಇತರ ಅಭಿವೃದ್ಧಿ ಯೋಜನೆಗಳು ಇವರ ಮುಂದಿದೆ. ಇವಿಷ್ಟು ಮಾತ್ರವಲ್ಲದೆ ಸಂಪಾದಿಸಿದ ಬೃಹತ್ ಕಾರ್ಯಕರ್ತರ ಪಡೆಯಿದೆ.

ಶಿವಮೊಗ್ಗ ಏರ್ಪೋರ್ಟ್ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಈ ಬಾರಿಯೂ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಸಮೀಕ್ಷಾ ವರದಿಗಳು ಬಹಿರಂಗ ಪಡಿಸಿದೆ. ಇವೆಲ್ಲ ಬಿ.ವೈ.ರಾಘವೇಂದ್ರ ಅವರಿಗೆ ಗೆಲುವಿನ ದಾರಿಯಾಗಲಿವೆ ಎಂದು ಹೇಳಲಾಗುತ್ತಿದೆ.

ಸೋಲಿಗೆ ಕಾರಣಗಳು

ರಾಜ್ಯದಲ್ಲಿ ಬಿಜೆಪಿಯಿಂದ ಅಧಿಕಾರ ಕೈತಪ್ಪಿರುವುದು ಈ ಬಾರಿಯ ಗೆಲುವಿಗೂ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಮತ್ತೊಂದೆಡೆ ಜಾತಿ ರಾಜಕೀಯದ ಆರೋಪವು ಬಿಜೆಪಿ ಅಧಿಕಾರದಲ್ಲಿ ಕೇಳಿಬಂದಿತ್ತು. ಮತ್ತೊಂದೆಡೆ ಕುಟುಂಬ ರಾಜಕಾರಣ,ಅಧಿಕಾರ ಒಂದೇ ಕುಟುಂಬದ ವಶದಲ್ಲಿದೆ ಎಂಬ ಆರೋಪವು ಇದೆ.

ಚುನಾವಣೆಯಿಂದ ಚುನಾವಣೆಗೆ ಘೋಷಿತ ಆಸ್ತಿಯ ಪ್ರಮಾಣ ಹೆಚ್ಚುತ್ತಿರುವುದು ಕಾರಣವಾಗಿದೆ. ರಾಜ್ಯ ಸರ್ಕಾದ ಗ್ಯಾರಂಟಿ ಯೋಜನೆಗಳಿಂದ ಹಿನ್ನಡೆಯಾಗುವ ಲಕ್ಷಣ ಇದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ತಮ್ಮ ಪುತ್ರನಿಗೆ ಹಾವೇರಿ ಟಿಕೇಟ್ ಸಿಗದ ಕಾರಣಕ್ಕೆ ಶಿವಮೊಗ್ಗ ಕ್ಷೇತ್ರದಿಂದ ತಾವೇ ಕಣಕ್ಕಿಳಿಲು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಲೋಚಿಸುತ್ತಿರುವುದು ಕೂಡ ಋಣಾತ್ಮಕ ಪರಿಣಾಮ ಬೀಡುವ ಸಾಧ್ಯತೆ ಇದೆ.

10 ವರ್ಷಗಳ ನಂತರ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ

ಕಾಂಗ್ರೆಸ್​ನ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಸಹಾ ಎರಡನೇ ಬಾರಿಗೆ ಅದೃಷ್ಟದ ಪರೀಕ್ಷೆ ಗೆ ಮುಂದಾಗಿದ್ದಾರೆ. ಸರಿ ಸುಮಾರು 10 ವರ್ಷದ ನಂತರ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಗೀತಾ ಶಿವರಾಜ್ ಕುಮಾರ್ ಈ ಬಾರಿ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಆದರೆ ಅವರಿಗಿರುವ ಧನಾತ್ಮಕ ಮತ್ತು ಋಣಾತ್ಮಕ ಸವಾಲುಗಳ ಬಗ್ಗೆ ತಿಳಿಯೋಣ.

ಗೀತಾ ಶಿವರಾಜ್ ಕುಮಾರ್ ಪ್ಲೆಸ್ ಪಾಯಿಂಟ್ ಏನು?

ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಎನ್ನುವ ಹೆಗ್ಗಳಿಕೆ ಗೀತಾ ಶಿವ ರಾಜ್​ಕುಮಾರ್ಗೆ ಇದೆ. ​ಮತ್ತೊಂದೆಡೆ ರಾಜ್ ಕುಟುಂಬದ ದೊಡ್ಡ ಮನೆಯ ಸೊಸೆ ಎಂಬ ಹೆಗ್ಗಳಿಕೆಯೂ ಅವರ ಮೇಲಿದೆ. ಇದಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇರುವುದು ಕೂಡ ಪ್ಲಸ್​ ಪಾಯಿಂಟ್ ಆಗಿದೆ. ಸಹೋದರ ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಕೂಡ ಈ ಬಾರಿಯ ಗೆಲುವಿಗೆ ಪ್ರಮುಖ ಕರಣವಾಗಿ ಪರಿಣಮಿಸಬಹುದು.

ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ಮೂರು ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುದ್ದಾರೆ. ಇದರೊಂದಿಗೆ ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆ ಕೂಡ ಇವರ ಗೆಲುವಿಗೆ ಸಹಾಯವಾಗಬಹುದು. ಮತ್ತೊಂದೆಡೆ ಬಲಿಷ್ಠ ಈಡಿಗ ಸಮುದಾಯದ ಕೈ ಹಿಡಿಯಲಿದೆ ಎಂಬ ನಂಬಿಕೆ ಅವರಿಗಿದೆ.

ಗೀತಾ ಶಿವರಾಜ್ ಕುಮಾರ್ ಮೈನಸ್ ಪಾಯಿಂಟ್ ಏನು?

ಟಿಕೆಟ್ ಘೋಷಣೆಗೊಂಡು ವಾರ ಕಳೆದರೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೇ ಇರುವುದು ಗೀತಾ ಅವರಿಗೆ ಮೈನಸ್​ ಆಗೋ ಸಾಧ್ಯತೆ ಇದೆ. ಬಿಜೆಪಿಯ ಸರಣಿ ಸಭೆ ಸಮಾವೇಶದ ಮುಂದೆ ಕಾಂಗ್ರೆಸ್ ಮಂಕಾಗಿರುವುದು ಮತ್ತೊಂದು ದೊಡ್ಡ ಮೈನಸ್​. ಮೂಲ ಕಾಂಗ್ರೆಸಿಗರಲ್ಲಿ ಕಂಡು ಬರುತ್ತಿರುವ ನಿರುತ್ಸಾಹ ಕೂಡ ಕಾರಣವಾಗಬಹುದು. ಈ ಹಿಂದೆ ಕ್ಷೇತ್ರದಲ್ಲಿ ಎಲ್ಲೂ ಕಾಣಿಸಿಕೊಳ್ಳಲ್ಲಿಲ್ಲ ಎಂಬ ಚರ್ಚೆ ಕೂಡ ಮುಳುವಾಗಬಹುದು.

ಇನ್ನು ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವಿಲ್ಲ ಎಂಬ ಆರೋಪವಿದೆ.  ಬಿಜೆಪಿಯ ಅಬ್ಬರ ಎದುರು ಮಂಕಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಸಜ್ಜುಗೊಳ್ಳದ ಕಾರ್ಯಕರ್ತರ ಪಡೆ,  ಗ್ಯಾರಂಟಿಯನ್ನೇ ನಂಬಿ ಕುಳಿತಿರುವುದು ಕೂಡ ಈ ಬಾರಿಯ ಸೋಲಿಗೆ ಉತ್ತರವಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Election Special: ಇಲ್ಲಿ ಇಬ್ಬರು ಮಾಜಿ ಸಿಎಂ ಮಕ್ಕಳ ಮಧ್ಯೆ ನೇರ ಫೈಟ್; ಸೋಲು-ಗೆಲುವಿಗೆ ಇರುವ ಪ್ಲಸ್, ಮೈನಸ್ ಏನು?

https://newsfirstlive.com/wp-content/uploads/2024/03/Geetha-Shivaraj-kumar.jpg

Load More