/newsfirstlive-kannada/media/post_attachments/wp-content/uploads/2025/06/AIR_INDIA_UK_FAMILY_1.jpg)
242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್​ ಇಂಡಿಯಾ ಬೋಯಿಂಗ್- 787 ಡ್ರೀಮ್‌ಲೈನರ್ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲರೂ ಉಸಿರು ಚೆಲ್ಲಿದರೂ ಒಬ್ಬರು ಮಾತ್ರ ಭೀಕರ ವಿಮಾನ ದುರಂತದಿಂದ ಬದುಕಿದ್ದರು. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಂಗ್ಲೆಂಡ್​ನ ಕುಟುಂಬದ ಬದುಕು ಕೊನೆ ಆಗಿದೆ.
ಇಂಗ್ಲೆಂಡ್‌ನ ಸೌತ್​​ವೆಸ್ಟ್​ನಲ್ಲಿರುವ ಗ್ಲೌಸೆಸ್ಟರ್ ನಗರದ ಅಕೀಲ್ ನಾನಾಬಾವಾ ಮತ್ತು ಅವರ ಪತ್ನಿ ಹನ್ನಾ ವೊರಾಜಿ ಹಾಗೂ ಇವರ 4 ವರ್ಷದ ಮಗಳು ಸಾರಾ ಕಣ್ಮುಚ್ಚಿದ್ದಾರೆ. ಬ್ರಿಟನ್ ಪ್ರಜೆಗಳಾಗಿದ್ದ ಇವರಿಗೆ ಮಗಳೇ ದೊಡ್ಡ ಪ್ರಪಂಚವಾಗಿದ್ದಳು. ಈ ದಂಪತಿ ಗ್ಲೌಸೆಸ್ಟರ್ ಹಾಗೂ ಅಹಮದಾಬಾದ್ ಈ ಎರಡು ನಗರದಲ್ಲೂ ಐಸ್‌ಬರ್ಗ್ ಎಂಬ ಹೊರಗುತ್ತಿಗೆ ಸೇವೆಗಳ ವ್ಯಾಪಾರವನ್ನು ನಡೆಸುತ್ತಿದ್ದರು.
ಇದನ್ನೂ ಓದಿ: Ahmadabad Plane Crash; ತಂಗಿಗೆ ಲಂಡನ್​ ತೋರಿಸಲು ಕರೆದುಕೊಂಡು ಹೋಗ್ತಿದ್ದ ಅಣ್ಣ.. ಇಬ್ಬರು ನಿಧನ
ಅಕೀಲ್ ನಾನಾಬಾವಾ ಅವರು ಸ್ಪೋರ್ಟ್ಸ್​ ಮತ್ತು ಸಾಮಾಜಿಕವಾಗಿರುತ್ತಿದ್ದರು. ಇವರ ಹೆಂಡತಿ ಮಿಡ್‌ವೈಫರಿಯಲ್ಲಿ ಪದವಿ ಪಡೆದ ನಂತರ Rec2go ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ದಂಪತಿ ವ್ಯಾಪಾರ ಹಾಗೂ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದರು. ಎಲ್ಲ ಕಾರ್ಯಗಳು ಮುಗಿದ ಮೇಲೆ ಅಹಮದಾಬಾದ್​ನಿಂದ ಲಂಡನ್​ಗೆ ತೆರಳಲು ಏರ್​ ಇಂಡಿಯಾ ವಿಮಾನವನ್ನು ಹತ್ತಿದ್ದರು.
ಆದರೆ ಏರ್​ ಇಂಡಿಯಾ ವಿಮಾನ ಟೇಕ್​ಆಫ್​ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಅಕೀಲ್ ನಾನಾಬಾವಾ ಕುಟುಂಬ ಅಂತ್ಯ ಕಂಡಿದೆ. ಈ ದಂಪತಿಗಳು ತಮ್ಮ ದಾನ-ಧರ್ಮಗಳಿಂದ ಹೆಸರುವಾಸಿಯಾಗಿದ್ದರು. ಗಾಜಾದಲ್ಲಿ ನಿರಾಶ್ರಿತರಿಗೆ ಹಾಗೂ ಭಾರತದ ಬಡ ವ್ಯಕ್ತಿಗಳಿಗೆ ವೈದ್ಯಕೀಯ ಆರೈಕೆಗಾಗಿ ನಿಧಿಸಂಗ್ರಹಣೆಗೆ ಸಹಾಯ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ