625 ಅಡಿ ಎತ್ತರದಿಂದ ಹಾಸ್ಟೆಲ್ ಮೇಲೆ ಬಿದ್ದ ವಿಮಾನ.. ಭಯಾನಕ ವಿಡಿಯೋ ಹೇಗಿದೆ..? Video

author-image
Ganesh
Updated On
ವಿಮಾನ ದುರಂತದಲ್ಲಿ ಮೃತರ ಸಂಖ್ಯೆ 133ಕ್ಕೆ ಏರಿಕೆ.. ಮತ್ತಷ್ಟು ಪ್ರಾಣಹಾನಿಯ ಆತಂಕ..
Advertisment
  • ವಿಮಾನದಲ್ಲಿ CM ವಿಜಯ್ ರೂಪಾನಿ ಕೂಡ ಇದ್ದರು
  • ಗುಜರಾತ್​ನಿಂದ ಅಹ್ಮದಾಬಾದ್​ಗೆ ಹೋಗ್ತಿದ್ದ ವಿಮಾನ
  • ವಿಮಾನದಲ್ಲಿ 12 ಸಿಬ್ಬಂದಿ ಸೇರಿ 242 ಪ್ರಯಾಣಿಕರಿದ್ದರು

ಗುಜರಾತ್​ನ ಅಹ್ಮದಾಬಾದ್​ನಲ್ಲಿ ವಿಮಾನ ಪತನಗೊಂಡಿದೆ. ಅಹ್ಮದಾಬಾದ್​ ಏರ್​ಪೋರ್ಟ್​ನಿಂದ (Ahmedabad airport) ಏರ್ ಇಂಡಿಯಾ ವಿಮಾನ (Air India ) ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್​​ (Meghaninagar)ದಲ್ಲಿ ಪತನಗೊಂಡಿದೆ.

ವಿಮಾನದಲ್ಲಿ ಗುಜರಾತ್​​ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (Vijay Rupani) ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿಯಿದ್ದರು. ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ವಿಮಾನ ದುರಂತದ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಪತನಗೊಳ್ಳುತ್ತಿದ್ದಂತೆಯೇ ದಟ್ಟ ಹೊಗೆ ಆವರಿಸಿದೆ.

ಸದ್ಯದ ಮಾಹಿತಿ ಏನು..?

ಪತ್ರಕರ್ತ ಜಕೀರ್ ಅಲಿ ತ್ಯಾಗಿ ಅನ್ನೋರು ವಿಡಿಯೋ ಒಂದನ್ನ ಶೇರ್ ಮಾಡಿದ್ದಾರೆ. ಅತ್ಯಂತ ಭಯಾನಕ ಮತ್ತು ಗೊಂದಲದ ವಿಡಿಯೋ ಇದಾಗಿದೆ. ಏರ್​ ಇಂಡಿಯಾ ವಿಮಾನ ಅಹ್ಮದಾಬಾದ್​ನಿಂದ ಲಂಡನ್​ಗೆ ಟೇಕ್ ಆಫ್ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಬರೋಬ್ಬರಿ 625 ಅಡಿ ಎತ್ತರದಿಂದ ಕಂಟ್ರೋಲ್ ಕಳೆದುಕೊಂಡು ನೆಲಕ್ಕೆ ಬಿದ್ದಿದೆ. ಜನಬಿಡ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಪತನಗೊಂಡ ವಿಮಾನ ಮನೆ ಮೇಲೆ ಬಿದ್ದಿದೆ. ವಿಮಾನದಲ್ಲಿ 242 ಪ್ರಯಾಣಿಕರು ಇದ್ದರು. ಭಾರೀ ಜೀವಹಾನಿ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ವಿಮಾನವು ಅಹ್ಮದಾಬಾದ್​ನ ಮೆಡಿಕಲ್ ಸ್ಟೂಡೆಂಟ್ ಹಾಸ್ಟೆಲ್ ಮೇಲೆ ಪತನಗೊಂಡಿದೆ ಎಂದು ವರದಿಯಾಗಿದೆ.

ವಿಮಾನವು ಅಹ್ಮದಾಬಾದ್​ನಿಂದ ಲಂಡನ್​ಗೆ ಪ್ರಯಾಣಿಸುತ್ತಿತ್ತು. ಏರ್​ ಇಂಡಿಯಾದ ‘ಏರ್​ ಇಂಡಿಯಾ-171’ ( Air India 171) ಎಂಬ ಹೆಸರಿನ ವಿಮಾನ ಪತನಗೊಂಡಿದೆ. ಸರ್ದಾರ್​ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Sardar Vallabhbhai Patel International Airport) ಮಧ್ಯಾಹ್ನ 1.10ಕ್ಕೆ ಟೇಕ್ ಅಫ್ ಆಗಿತ್ತು. ವಿಮಾನವು ಲಂಡನ್​​ನ ಗೆಟ್ವಿಕ್ ವಿಮಾನ ನಿಲ್ದಾಣ (Gatwick Airport in London) ತಲುಪಬೇಕಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment