newsfirstkannada.com

×

ನೀರವ್ ಮೋದಿಗೆ ಮತ್ತೊಂದು ಬಿಗ್ ಶಾಕ್; ಲಂಡನ್​​ನ ಕೋಟಿ ಕೋಟಿ ಮೌಲ್ಯದ ಮನೆ ಮಾರಾಟಕ್ಕೆ ಗ್ರೀನ್ ಸಿಗ್ನಲ್

Share :

Published March 28, 2024 at 9:06am

Update March 28, 2024 at 9:08am

    ಲಂಡನ್ ನ್ಯಾಯಾಲಯದಿಂದ ಮಹತ್ವದ ಆದೇಶ

    ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜಾರಾಗಿದ್ದ ನೀರವ್ ಮೋದಿ

    ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್​ ನೀರವ್ ಮೋದಿ

ಲಂಡನ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಒಡೆತನದ ಐಷಾರಾಮಿ ಫ್ಲಾಟ್ ಮಾರಾಟವಾಗಲಿದೆ. ನೀರವ್ ಮೋದಿ ಫ್ಲಾಟ್ ಮಾರಾಟಕ್ಕೆ ಬ್ರಿಟನ್ ಕೋರ್ಟ್ ಅನುಮತಿ ನೀಡಿದೆ. ಈ ಮಾರಾಟದಿಂದ 55 ಕೋಟಿಗೂ ಹೆಚ್ಚು ಹಣ ಸಿಗುವ ನಿರೀಕ್ಷೆ ಹೊಂದಲಾಗಿದೆ.

ವೀಡಿಯೋ ಕಾನ್ಫರೆನ್ಸ್​ನಲ್ಲಿ ನೀರವ್ ಮೋದಿ
ನೀರವ್ ಮೋದಿ ಅವರ ಫ್ಲಾಟ್ ಮಾರಾಟ ಮಾಡುವಂತೆ ಟ್ರಸ್ಟ್ ವೊಂದು ಲಂಡನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಲಂಡನ್ ಹೈಕೋರ್ಟ್, ಇದೀಗ ನೀರವ್ ಮೋದಿಗೆ ಸೇರಿದ ಫ್ಲಾಟ್ ಮಾರಾಟ ಮಾಡಲು ಅನುಮೋದಿಸಿದೆ. ವಿಚಾರಣೆ ವೇಳೆ ನೀರವ್ ಮೋದಿಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ: ಟಿಕೆಟ್ ಸಿಕ್ಕಿಲ್ಲ ಎಂದು ಮಾತ್ರೆ ಸೇವಿಸಿದ್ದ ಹಾಲಿ ಸಂಸದ ಚಿಕಿತ್ಸೆ ಫಲಿಸದೇ ಸಾವು

ನೀರವ್ ಮೋದಿ ಹಸ್ತಾಂತರಕ್ಕೆ ಕೋರ್ಟ್ ಒಪ್ಪಿಗೆ

ನೀರವ್ ಮೋದಿ ಭಾರತದ ತನಿಖಾಧಿಕಾರಿಗಳಿಗೆ ಬೇಕಾಗಿರುವ ಮೋಸ್ಟ್​ ವಾಂಟೆಡ್ ವ್ಯಕ್ತಿ. ಒಂದು ಕಾಲದಲ್ಲಿ ವಜ್ರ ವ್ಯಾಪಾರದಲ್ಲಿ ಹೆಸರು ಮಾಡಿದ್ದ ನೀರವ್ ಮೋದಿ, ಬ್ಯಾಂಕ್​​ಗಳಿಂದ ಕೋಟಿ ಕೋಟಿ ಸಾಲ ಮಾಡಿ ಭಾರತದಿಂದ ಪಲಾಯನ ಮಾಡಿದ್ದಾನೆ. ಪ್ರಸ್ತುತ ಆತನನ್ನು ಆಗ್ನೇಯ ಲಂಡನ್‌ನಲ್ಲಿರುವ ಥೇಮ್‌ಸೈಡ್ ಜೈಲಿನಲ್ಲಿ ಬಂಧಿಸಲಾಗಿದೆ. ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಆತನ ಹಸ್ತಾಂತರಕ್ಕೆ ಲಂಡನ್ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಹೀಗಿದ್ದೂ ಕೆಲವು ವಿಚಾರಗಳಲ್ಲಿ ಭಾರತಕ್ಕೆ ಆತನನ್ನು ಕರೆ ತರಲು ಅಡಚಣೆಗಳಿವೆ.

ಲಂಡನ್ ಕೋರ್ಟ್‌ನಿಂದ ಮಾರಾಟಕ್ಕೆ ಅನುಮೋದನೆ ಪಡೆದಿರುವ ಫ್ಲಾಟ್ ನಂಬರ್ 103. ಸೆಂಟ್ರಲ್ ಲಂಡನ್‌ನ ಮ್ಯಾರಥಾನ್ ಹೌಸ್‌ನಲ್ಲಿ ಫ್ಲಾಟ್ ಇದೆ. ಆ ಐಷಾರಾಮಿ ಫ್ಲಾಟ್ ಅನ್ನು ನೀರವ್ ಮೋದಿ ಬಳಸುತ್ತಿದ್ದರು. ಫ್ಲಾಟ್ ಟ್ರೈಡೆಂಟ್ ಟ್ರಸ್ಟ್​ನ (ಸಿಂಗಪುರ) ಸ್ವಾಧೀನದಲ್ಲಿದೆ. ಫ್ಲಾಟ್‌ನ ಮೌಲ್ಯ 55 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀರವ್ ಮೋದಿಗೆ ಮತ್ತೊಂದು ಬಿಗ್ ಶಾಕ್; ಲಂಡನ್​​ನ ಕೋಟಿ ಕೋಟಿ ಮೌಲ್ಯದ ಮನೆ ಮಾರಾಟಕ್ಕೆ ಗ್ರೀನ್ ಸಿಗ್ನಲ್

https://newsfirstlive.com/wp-content/uploads/2024/03/NIRAV-MODI.jpg

Load More