/newsfirstlive-kannada/media/post_attachments/wp-content/uploads/2025/06/Flight-Crashes9.jpg)
ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಘನಘೋರ ವಿಮಾನ ದುರಂತದಲ್ಲಿ ಒಟ್ಟು 265 ಮಂದಿ ನಿಧನರಾಗಿದ್ದಾರೆ. ತಾಂತ್ರಿಕ ದೋಷದಿಂದ ವಿಮಾನದ ಸಿಗ್ನಲ್ ಕಡಿತಗೊಂಡು ಕಟ್ಟಡದ ಮೇಲೆ ಬಿದ್ದು ವಿಮಾನ ಪತನಗೊಂಡಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ:265 ಮಂದಿಯ ಜೀವ ತೆಗೆದ ಏರ್ ಇಂಡಿಯಾ ವಿಮಾನ.. ದುರಂತಕ್ಕೆ ಕಾರಣವಾಯ್ತಾ ಈ 8 ಸಂಗತಿಗಳು..?
ಈ ಭೀಕರ ವಿಮಾನ ದುರಂತದಲ್ಲಿ 229 ಪ್ರಯಾಣಿಕರು, 12 ಮಂದಿ ವಿಮಾನದ ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ವಿಮಾನ ದರಂತದಲ್ಲಿ ಗುಜರಾತ್ ಸಹೋದರಿಯರು ಜೀವಬಿಟ್ಟಿದ್ದಾರೆ. ಧೀರ್ ಮತ್ತು ಹೀರ್ ಬಾಕ್ಸಿ ಎಂಬ ಇಬ್ಬರು ಸಹೋದರಿಯರು ಅಜ್ಜಿಯ ಹುಟ್ಟುಹಬ್ಬಕ್ಕೆಂದು ಭಾರತಕ್ಕೆ ಬಂದಿದ್ದರು.
ಅಜ್ಜಿಯ ಬರ್ತ್ ಡೇ ಸೆಲೆಬ್ರೇಷನ್ನಲ್ಲಿ ಗುಜರಾತ್ ಮೂಲದ ಧೀರ್ ಮತ್ತು ಹೀರ್ ಬಾಕ್ಸಿ ಇಬ್ಬರು ಭಾಗಿಯಾಗಿ ಖುಷಿ ಖುಷಿಯಲ್ಲಿ ಕುಟುಂಬಸ್ಥರ ಜೊತೆಗೆ ಕಾಲ ಕಳೆದಿದ್ದರು. ಈ ಇಬ್ಬರು 17J ಮತ್ತು 17H ಸೀಟುಗಳಲ್ಲಿ ಕುಳಿತುಕೊಂಡಿದ್ದರು. ಆಗ ವಿಮಾನ ಟೇಕ್ ಆಫ್ ಆಗಿ ಕೊಂಚ ದೂರ ಹೋಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಮೇಘಾನಿ ನಗರದ ಬಳಿ ಅಪಘಾತಕ್ಕೀಡಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ