newsfirstkannada.com

ಅಂದು ಶಿವ ಕತ್ತರಿಸಿದ ಗಣಪನ ಶಿರ ಈಗೆಲ್ಲಿದೆ? ಈ ಪ್ರದೇಶದಲ್ಲಿ ಕಾಣಬಹುದು ವಿನಾಯಕನ ಮೂಲ ತಲೆ!

Share :

Published September 4, 2024 at 6:26am

Update September 5, 2024 at 11:30pm

    ಅಂದು ಶಿವನು ಕತ್ತರಿಸಿದ ಗಣೇಶನ ಮೂಲ ತಲೆ ಈಗ ಎಲ್ಲಿದೆ ಗೊತ್ತಾ?

    ಗಣಪನ ತಲೆ ನೋಡಬೇಕು ಅಂದ್ರೆ ನೀವು ಹೋಗಬೇಕು ಪಾತಾಳಕ್ಕೆ

    ಉತ್ತರಾಖಂಡ್​​ನ ಪಾತಾಳ ಭವನೇಶ್ವರದಲ್ಲಿ ಇರೋ ವಿಸ್ಮಯ ಏನು?

ದೆಹ್ರಾಡೂನ್: ಇನ್ನೇನು ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿಯಿವೆ. ಮನೆ ಮನೆಯಲ್ಲೂ ವಿಘ್ನ ವಿನಾಶಕ ರಾರಾಜಿಸಲಿದ್ದಾನೆ. ಇಡೀ ಮನೆಯೇ ಮದುವಣಗಿತ್ತಿಯಂತೆ ಸಿಂಗಾರಗೊಂಡು, ತಳಿರು ತೋರಣ ಕಟ್ಟಿಕೊಂಡು ಗಣಪನನ್ನು ಸ್ವಾಗತಿಸುತ್ತವೆ. ಸೊಂಡಿಲು ಇಟ್ಟುಕೊಂಡು ಕೈಯಲ್ಲಿ ಒಂದಿಷ್ಟು ಆಯುದ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಆಶೀರ್ವಾದ ಮಾಡುತ್ತಾ ಮೂಷಿಕ ವಾಹನದೊಂದಿಗೆ ಮನೆಗೆ ಬರಲಿದ್ದಾನೆ ವಕ್ರತುಂಡ. ಎಲ್ಲ ದೇವತೆಗಳ ಪೂಜೆಗೂ ಮೊದಲೇ ಅಗ್ರಪೂಜಕನಾಗಿರುವ ಈ ಗಣಪನ ಸೃಷ್ಟಿಯೇ ಒಂದು ರೋಮಾಂಚನ ಅಧ್ಯಾಯ. ಅದಕ್ಕಿಂತಲೂ ರೋಚಕ ಅಂದ್ರೆ ಆನೆ ತಲೆಗಿಂತಲೂ ಮೊದಲು ಇದ್ದ ಗಣಪನ ತಲೆ ಏನಾಯ್ತು ಅನ್ನೋ ಕಥೆ. ಪುರಾಣಗಳಲ್ಲಿ ನಮಗೆ ಗಣಪ ಹೇಗೆ ಸೃಷ್ಟಿಯಾದ, ಅವನ ಮೇಲೆ ಪರಶಿವನು ಕೋಪಗೊಂಡು ಹೇಗೆ ಶಿರಚ್ಛೇದ ಮಾಡಿದ, ಮತ್ತೆ ಆನೆ ಸೊಂಡಿಲು ತಂದು ಗಣಪನಿಗೆ ಜೋಡಿಸಿ ಹೇಗೆ ಮರುಜೀವ ತುಂಬಿದ ಎಂಬ ಬಗ್ಗೆ ಕಥೆ ಗೊತ್ತಿದೆ. ಆದ್ರೆ ಅಂದು ಶಿವನ ಉಗ್ರರೂಪಕ್ಕೆ ಬಲಿಯಾದ ಗಣಪನ ಮೂಲ ತಲೆ ಈಗ ಎಲ್ಲಿದೆ, ಹೇಗಿದೆ ಅನ್ನೋದು ಹಲವರಿಗೆ ಗೊತ್ತಿಲ್ಲ ಅದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ತನ್ನ ಮೈ ಮಣ್ಣಿನಲ್ಲಿ ಗಣಪನ ಮೂರ್ತಿಯನ್ನು ತಿದ್ದಿ ತೀಡಿ ಅವನಿಗೊಂದು ಆಕಾರ ಕೊಟ್ಟು ಜೀವ ಕೊಟ್ಟು ತನ್ನ ಕಾಯುವಂತೆ ಅಪ್ಪಣೆ ಮಾಡಿ ಅಭ್ಯಂಜನಕ್ಕೆ ತೆರುಳುತ್ತಾಳೆ ಗಿರಿಜೆ, ಅದೇ ವೇಳೆ ಬಂದ ಶಿವನು ದಾರಿಬಿಡುವಂತೆ ಎಷ್ಟು ಕೇಳಿಕೊಂಡರು ತಾಯಿ ಮಾತಿಗೆ ಕಟಿಬದ್ಧನಾಗಿ ನಿಂತ ಗಣಪ ಒಂದಿಂಚೂ ಶಿವನನ್ನು ಕದಲಲು ಬಿಡುವುದಿಲ್ಲ. ಇದರಿಂದ ಸಿಡಿದ ರುದ್ರ, ತ್ರಿಶೂಲದಿಂದ ಗಣಪತಿ ತಲೆಯನ್ನೇ ಕತ್ತರಿಸಿ ಬಿಡುತ್ತಾನೆ. ಅಭ್ಯಂಜನ ಮುಗಿಸಿ ಬಂದ ಗೌರಿ ಶಿರವಿಲ್ಲದ ಗಣಪನ ದೇಹ ನೋಡಿ ಕಂಗಾಲಾಗಿ ಅಳುತ್ತಾ ಕೂರುತ್ತಾಳೆ, ಕೊನೆಗೆ ಶಿವನು ಆನೆಯ ಮುಖವನ್ನು ತಂದು ಗಣಪನಿಗೆ ಜೋಡಿಸಿ ಜೀವ ತುಂಬುತ್ತಾನೆ. ಅಂದಿನಿಂದ ಎಲ್ಲ ಪೂಜೆಯಲ್ಲೂ ನಿನಗೆ ಅಗ್ರಪೂಜೆ ಸಲ್ಲಬೇಕು ಎಂದು ಹೇಳಿ ವರವನ್ನು ನೀಡುತ್ತಾನೆ. ಅಂದು ಶಿವನ ಕತ್ತರಿಸಿದ ತಲೆ ಇಂದು ನಮಗೆ ದೇವಭೂಮಿಯಾದ ಉತ್ತರಾಖಂಡ್​ನ ಪಾತಾಳಭುವನೇಶ್ವರಿಯಲ್ಲಿ ಕಾಣ ಸಿಗುತ್ತದೆ.

ಇದನ್ನೂ ಓದಿ:ಚಾಮುಂಡಿ ಬೆಟ್ಟ ನಮ್ಮ ಆಸ್ತಿ’: ಸಿದ್ದರಾಮಯ್ಯ ನೇತೃತ್ವದ ಸಭೆ ವಿಚಾರದಲ್ಲಿ ಪ್ರಮೋದಾದೇವಿ ದೊಡ್ಡ ನಿರ್ಧಾರ, ಆಕ್ರೋಶ

ಉತ್ತರಾಖಂಡ್​ನ ಪಿಥೋರ್ಗಢ ಜಿಲ್ಲೆಯಲ್ಲಿ ಈ ಪಾತಾಳಭುವನೇಶ್ವರಿ ಇದೆ. ಹೆಸರಿನ ಹಾಗೆ ಪಾತಾಳವೇ ಸರಿ. ಭೂಮಿಯಿಂದ 90 ಅಡಿ ಒಳಗಡೆ ಈ ಪಾತಾಳಭುವನೇಶ್ವರ ಎಂಬ ಗುಹೆ ಹರಡಿಕೊಂಡಿದೆ. ಇಲ್ಲಿ ತೆರಳಿದವರಿಗೆ ಕತ್ತರಿಸಿ ಬಿದ್ದ ಗಣಪನ ತಲೆ ಭಕ್ತರಿಗೆ ನೋಡಲು ಸಿಗುತ್ತದೆ. ಲಿಂಗಾಕಾರದಲ್ಲಿ ಇರುವ ಮೂರ್ತಿಯೇ ಗಣಪನ ತಲೆ ಎಂದು ಹೇಳಲಾಗುತ್ತದೆ. ಸ್ಕಂದ ಪುರಾಣದಲ್ಲಿ ನಮಗೆ ಈ ಪಾತಾಳ ಭುವನೇಶ್ವರದ ಬಗ್ಗೆ ಉಲ್ಲೇಖವಿರುವುದು ಕಾಣ ಸಿಗುತ್ತದೆ. ಹಿಂದಿನ ಕಾಲದಲ್ಲಿ ಈ ಗುಹೆಗೆ ಯಾರೂ ಕೂಡ ಭೇಟಿ ಕೊಟ್ಟಿರಲಿಲ್ಲ. ಈ ಗುಹೆ ಇರುವುದು ಕೂಡ ಅನೇಕರಿಗೆ ಗೊತ್ತಿರಲಿಲ್ಲ.

ಇದನ್ನೂ ಓದಿ: ಅಮೆರಿಕದ ನ್ಯೂಜೆರ್ಸಿಯಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಅಮಾವಾಸ್ಯೆ ಪೂಜೆ; ಏನಿದರ ವಿಶೇಷ?

8ನೇ ಶತಮಾನದಲ್ಲಿ ಶಂಕರಾಚಾರ್ಯರು ಮೊದಲ ಬಾರಿ ಈ ಗುಹೆಯನ್ನು ಪತ್ತೆ ಮಾಡಿ, ಇದಕ್ಕೆ ಹೊಸ ಕಾಯಕಲ್ಪ ಕೊಟ್ಟರು. ಅಂದಿನಿಂದ ಜನರಿಗೆ ಈ ಗುಹೆಯ ಬಗ್ಗೆ ಮಾಹಿತಿ ಸಿಕ್ಕಿತು. ಕೇವಲ ಗಣೇಶನ ಮೂರ್ತಿ ಮಾತ್ರ ಇಲ್ಲಿ ನಮಗೆ ಕಾಣಸಿಗುವುದಿಲ್ಲ, ಹಿಂದೂ ದೇವತೆಗಳಾದ 33 ಕೋಟಿ ದೇವರುಗಳು ಕೂಡ ಇಲ್ಲಿ ಇವೆ ಎಂದು ನಂಬಲಾಗುತ್ತದೆ. ಪಾತಾಳಭುವನೇಶ್ವರಿಯನ್ನು ತಲುಪಬೇಕಾದರೆ ಅತ್ಯಂತ ಕಡಿದಾದ ಹಾದಿಯಲ್ಲಿ ಸಾಗುತ್ತಾ ಹೋಗಬೇಕು. ಒಂದು ಬಾರಿ ಒಬ್ಬರಿಗೆ ಮಾತ್ರ ಇಳಿದು ಹೋಗುವಷ್ಟು ಜಾಗವಿರುವ ಗುಹೆಯದು. ಭೂಮಿಯಿಂದ ಸುಮಾರು 90 ಮೀಟರ್ ಆಳದಲ್ಲಿದೆ. ಅಲ್ಲಿ ಒಂದು ಜಾಗದಲ್ಲಿ ಗಣಪನ ಶಿರ ನಮಗೆ ಕಾಣ ಸಿಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಶಿವ ಕತ್ತರಿಸಿದ ಗಣಪನ ಶಿರ ಈಗೆಲ್ಲಿದೆ? ಈ ಪ್ರದೇಶದಲ್ಲಿ ಕಾಣಬಹುದು ವಿನಾಯಕನ ಮೂಲ ತಲೆ!

https://newsfirstlive.com/wp-content/uploads/2024/09/PATAL-BHUVANESHWARI-1.jpg

Load More