newsfirstkannada.com

ಯಾದಗಿರಿಯಲ್ಲಿ ಸಿಕ್ತು ಶ್ರೀರಾಮನ ಬಾಣ.. ಎಷ್ಟು ಎತ್ತರವಿದೆ ಗೊತ್ತಾ ಸೀತಾಪತಿಯ ಅಸ್ತ್ರ?

Share :

Published January 21, 2024 at 1:44pm

Update January 21, 2024 at 1:47pm

    ಅಯೋಧ್ಯೆಯಲ್ಲಿ ನಾಳೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ

    ಯಾದಗಿರಿಯಲ್ಲಿ ಘನಘಾತ್ರದ ಉಕ್ಕಿನ ರಾಮ ಬಾಣ ಪತ್ತೆ

    ಶ್ರೀರಾಮ ಲಂಕೆಗೆ ಬಿಟ್ಟಿದ್ದ ಬಾಣ ಯಾದಗಿರಿಯಲ್ಲಿ ಹೆಂಗೆ ಸಿಕ್ತು?

ಯಾದಗಿರಿ: ಅಯೋಧ್ಯೆಯಲ್ಲಿ ನಾಳೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿಕ್ಕಿದೆ. ಈಗಾಗಲೇ ಅದಕ್ಕೆ ಬೇಕಾದ ಸಕಲ ತಯಾರಿಗಳು ನಡೆದಿದೆ. ಅದರೆ ಈ ಸಂತಸದ ಸಂಗತಿಯ ಮಧ್ಯವೇ ಇತ್ತ ಯಾದಗಿರಿ ಜಿಲ್ಲೆಯಲ್ಲಿ ಶ್ರೀರಾಮ ಪ್ರಭುವಿನ ಬಾಣ ಪ್ರತ್ಯಕ್ಷವಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಿಬರಬಂಡಿ ಗ್ರಾಮದಲ್ಲಿ ರಾಮ ಬಾಣ ದೇವಸ್ಥಾನವಿದೆ. ರಾಮನ ಬಾಣ ಪ್ರತ್ಯಕ್ಷವಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ಬಾಣಕ್ಕೆ ನಿತ್ಯವು ಪೂಜೆ ನಡೆಯುತ್ತದೆ. 7 ಫೀಟ್​ಗಿಂತಲೂ ಎತ್ತರದ ಘನಘಾತ್ರದ ಉಕ್ಕಿನ ಅದಿರು ಹಾಗೂ ಕಬ್ಬಿಣ ಮಿಶ್ರಿತ ಲೇಪನ ಹೊಂದಿರುವ ರಾಮ ಬಾಣ ಇದಾಗಿದೆ.

ರಾಮ ಬಾಣ ಪತ್ತೆಯಾದ ಹಿನ್ನೆಲೆ ಗ್ರಾಮಸ್ಥರು ತಲೆತಲಾಂತರದಿಂದ ದೇವಸ್ಥಾನ ನಿರ್ಮಿಸಿ ಪೂಜಿಸುತ್ತಿದ್ದಾರೆ. ಅಂದಹಾಗೆಯೇ ಇದನ್ನು ರಾಮನು ಬಾಗಲಕೋಟೆ ಜಿಲ್ಲೆಯ ಸೀತಾಮಾತೆ ನೆಲೆಸಿದ್ದ ಶೀತಿಮನಿಯಿಂದ ಲಂಕೆಗೆ ಬಿಟ್ಟಿದ್ದ ಬಾಣ ಎನ್ನಲಾಗುತ್ತಿದೆ. ಆದರೆ ಈ ಬಾಣ ಲಂಕೆಗೆ ತಲುಪದೇ ಶಿಬರಬಂಡಿ ಗ್ರಾಮದಲ್ಲಿ ಬಿದ್ದಿತ್ತು ಎನ್ನಲಾಗುತ್ತಿದೆ. ಅಂದೇ ಶಿಬಿರಬಂಡಿ ಗ್ರಾಮಸ್ಥರು‌ ರಾಮನ ಕುಲ ಸಮಾಪ್ತಿಯಾಗಿದೆ ಅಂತಾ ಹೇಳುತ್ತಿದ್ದಾರೆ.

ರಾಮನ ಪ್ರತೀಕವಾದ ಬಾಣ ಸಿಕ್ಕಿರೋ ಸ್ಥಳದಲ್ಲೇ ದೇವಸ್ಥಾನ ಉದಯಿಸಿದೆ. ಶಿಬರಬಂಡಿ ಗ್ರಾಮ ಶ್ರೀರಾಮನ ಬಾಣ ಐತಿಹಾಸಿಕ ಸ್ಥಳ ಎಂದೇ ಪ್ರಸಿದ್ಧಿ ಪಡೆದಿದೆ. ಗ್ರಾಮಸ್ಥರು ದೇವಸ್ಥಾನದಲ್ಲಿ ರಾಮನ ಬಾಣಕ್ಕೆ ಪೂಜೆ ಸಲ್ಲಿಸಿ ರಾಮನನ್ನ ಆರಾಧಿಸುತ್ತಿದ್ದಾರೆ.

ಮತ್ತೊಂದೆಡೆ ಗ್ರಾಮಸ್ಥರು ತೇತ್ರಾಯುಗದಲ್ಲಿ ರಾಮ ಬಳಸಿರುವ ಬಾಣ ಎಂದು ಹೇಳುತ್ತಿದ್ದಾರೆ. ತಲೆತಲಾಂತರದಿಂದ ಗ್ರಾಮದ ಹಿರಿಯರು ಬಾಣ ಸಿಕ್ಕಿರುವ ಬಗ್ಗೆ ಹೇಳುತ್ತಾ ಬಂದಿದ್ದಾರೆ ಎಂದು ಗ್ರಾಮಸ್ಥರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾದಗಿರಿಯಲ್ಲಿ ಸಿಕ್ತು ಶ್ರೀರಾಮನ ಬಾಣ.. ಎಷ್ಟು ಎತ್ತರವಿದೆ ಗೊತ್ತಾ ಸೀತಾಪತಿಯ ಅಸ್ತ್ರ?

https://newsfirstlive.com/wp-content/uploads/2024/01/rama-Arrows.jpg

Load More