ಪಾಕಿಸ್ತಾನದಲ್ಲಿದೆ ಮಹಾಶಿವನ ಪುರಾತನ ಮಂದಿರ; ಮಹಾದೇವನ ಕಣ್ಣೀರಿನಿಂದಲೇ ತುಂಬಿದ ಆ ಕುಂಡ ಹೇಳುವ ಕಥೆಯೇನು?

author-image
Gopal Kulkarni
Updated On
ಪಾಕಿಸ್ತಾನದಲ್ಲಿದೆ ಮಹಾಶಿವನ ಪುರಾತನ ಮಂದಿರ; ಮಹಾದೇವನ ಕಣ್ಣೀರಿನಿಂದಲೇ ತುಂಬಿದ ಆ ಕುಂಡ ಹೇಳುವ ಕಥೆಯೇನು?
Advertisment
  • ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿದೆ ಶಿವನ ಮಹಿಮೆ ಹೇಳುವ ಮಂದಿರ
  • ಶಿವನ ಕಣ್ಣೀರು, ಮಹಾಭಾರತದ ಯಕ್ಷಪ್ರಶ್ನೆಯ ಕಥೆ ಹೇಳುತ್ತದೆ ಈ ಮಂದಿರ
  • ಕಲೆ, ಸಾಹಿತ್ಯ ಸಂಗೀತಕ್ಕೆ ಪ್ರಸಿದ್ಧವಾದ ದೇವಾಲಯ ಗತಿ ಏನಾಯ್ತು ಗೊತ್ತಾ?

ಇಂದು ಮಹಾಶಿವರಾತ್ರಿ. ಇಡೀ ರಾತ್ರಿ ಶಿವನ ಕುರಿತು ಹಾಡು ಗೀತೆಗಳು ನಡೆಯುತ್ತವೆ ಪಾರಾಯಣಗಳು ನಡೆಯುತ್ತವೆ. ನಮ್ಮ ದೇಶದಲ್ಲಿ ಹೆಜ್ಜೆಯಿಟ್ಟ ಊರುಗಳಲ್ಲೆಲ್ಲಾ ಒಂದಲ್ಲ ಒಂದು ಶಿವನ ದೇವಸ್ಥಾನ ನಮಗೆ ಸಿಕ್ಕೆ ಸಿಗುತ್ತದೆ. ಕಾರಣ ಶಿವ ಹಿಂದೂ ಧರ್ಮದಲ್ಲಿ ಅಷ್ಟೊಂದು ಪ್ರಭಾವ ಬೀರಿದ ದೈವ. ಭಕ್ತರಿಗೆ ಯಾವ ವರ ಬೇಕಾದರೂ ನೀಡಲು ಹಿಂದೆ ಮುಂದೆ ನೋಡದ ಬೋಲೆನಾಥ ಅವನು. ತನ್ನ ಭಕ್ತ ರಾವಣನಿಗೆ ತನ್ನ ಆತ್ಮಲಿಂಗವನ್ನೇ ಕೊಟ್ಟ ಭಕ್ತಪ್ರೇಮಿ ಶಿವ. ವೇದ ಪ್ರಿಯನಲ್ಲ ನಮ್ಮ ಶಿವ ನಾದ ಪ್ರಿಯನಲ್ಲ ನಮ್ಮ ಶಿವ ಭಕ್ತ ಪ್ರಿಯ ನೋಡ ಅಂತಲೇ ವಚನಕಾರರು ಹೇಳುತ್ತಾರೆ. ಅಂತಹ ಶಿವನನ್ನು ನೆನಪಿಸಿಕೊಳ್ಳುವ ದಿನ ಇಂದು

ಇಂತಹ ಶಿವನ ಒಂದು ದೇವಸ್ತಾನ ಈಗೀನ ಪಾಕಿಸ್ತಾನದಲ್ಲಿದೆ ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದವು. ಮೊಘಲರ ಹಾಗೂ ವಿದೇಶಿ ಆಕ್ರಮಣಕಾರರ ಕಾರಣದಿಂದಾಗಿ ಅನೇಕ ದೇಶಗಳು ಭಾರತದಿಂದ ಭಿನ್ನಗೊಂಡವು. ಆದರೆ ಅನೇಕ ಹಿಂದೂ ಮಂದಿರಗಳು, ಐತಿಹಾಸಿಕ ಸ್ಥಳಗಳು ಹಾಗೂ ಕೋಟೆಗಳು ಇನ್ನು ಆ ದೇಶದಲ್ಲಿ ಹಿಂದೂಗಳ ಸಂಸ್ಕೃತಿಯನ್ನು ಬಿಂಬಿಸುತ್ತ ಹಾಗೆಯೇ ಇವೆ. ಅದರಲ್ಲಿ ಶಿವನಿಗೆ ಸಮರ್ಪಿತಾದ ಹಾಗೂ ಮಹಾಭಾರತದ ಕಾಲದೊಂದಿಗೆ ಜೋಡಿಸಲ್ಪಟ್ಟ ಕಟಾಸರಾಜ್ ಎಂಬ ಶಿವನ ಮಂದಿರ ಇಂದಿಗೂ ಕೂಡ ಪಾಕಿಸ್ತಾನದಲ್ಲಿದೆ.

ಕಟಾಸರಾಜ್​ ಮಂದಿರ ಪಾಕಿಸ್ತಾನದ ಚಕವಾಲ ಜಿಲ್ಲೆಯಿಂದ ಸುಮಅರು 40 ಕಿಲೋ ಮೀಟರ್ ದೂರದಲ್ಲಿದೆ . ಈ ಒಂದು ಮಂದಿರ ಭಗವಾನ್ ಮಹಾದೇವನು ತನ್ನ ಪತ್ನಿ ಸತಿ ನೆನಪಿನಲ್ಲಿ ಸುರಿಸಿದ ಕಣ್ಣೀರಿನ ಗುರುತಾಗಿ ಪಾಂಡವರ ವನವಾಸದ ಕಥೆ ಹೇಳುವ ಮಂದಿರವಾಗಿ ಇಂದಿಗೂ ಕೂಡ ನೆಲೆನಿಂತಿದೆ.
ಈ ಒಂದು ಮಂದಿರ ಪಾಕಿಸ್ತಾನದ ಪಂಜಾಬ್​ ರಾಜ್ಯದ ಚಕವಾಲಅ ಜಿಲ್ಲೆಯಲ್ಲಿದೆ. ಇದು ಪಾಕಿಸ್ತಾನದ ಅತಿದೊಡ್ಡ ನಗರಗಳಾದ ಲಾಹೋರ್ ಹಾಗೂ ಇಸ್ಲಾಮಾಬಾದ್​ ನಡುವಿನ ಮೊಟರವೆ ಬಳಿ ಸಾಲ್ತ್​ ರೇಂಜ್​​​ನ ಬೆಟ್ಟಗಳ ನಡುವೆ ಇದೆ

publive-image

ಈ ಕಟಾಸರಾಜ್ ಮಂದಿರ ಅತ್ಯಂತ ಪ್ರಾಚೀನ ಕಾಲದ ದೇವಾಲಯ ಎಂದು ಹೇಳಲಾಗುತ್ತದೆ. ಇದು ಶಿವ ಮತ್ತು ಮಾತಾ ಸತಿ ಆತ್ಮಾಹುತಿ ಮಾಡಿಕೊಂಡ ಪೌರಾಣಿಕ ಕಥೆಯೊಂದಿಗಿನ ನಂಟನ್ನು ಹೊಂದಿದೆ. ಯಾವಾಗಾ ಮಾತಾ ಸತಿದೇವಿ ತಮ್ಮ ತಂದೆ ದಕ್ಷಬ್ರಹ್ಮ ಶಿವನನ್ನು ಅಪಮಾನ ಮಾಡುತ್ತಾನೋ ಆಗ ಕೂಡಲೇ ಅಗ್ನಿಕುಂಡಕ್ಕೆ ಜಿಗಿದ ಸತಿ ತನ್ನ ಆತ್ಮದಹನವನ್ನು ಮಾಡಿಕೊಳ್ಳುತ್ತಾಳೆ. ಇದರಿಂದ ದುಃಖದೊದಿಗೆ ಕೆರಳಿದ ಶಿವನು ತಾಂಡವ ನೃತ್ಯ ಮಾಡಲು ಶುರು ಮಾಡಿದ ಆಗ ವಿಷ್ಣು ಸಮೇತ ಎಲ್ಲಾ ದೇವತೆಗಳು ಬಂದ ಆತನನ್ನು ತಡೆದರು.

publive-image

ಇದಾದ ಬಳಿಕ ಸತಿದೇವಿಯ ನೆನಪಲ್ಲಿ ಭಗವಾನ್ ಪರಮೇಶ್ವರನು ಅತ್ಯಂತ ದುಃಖಿತನಾಗಿದ್ದ. ಮೃತ್ಯುಂಜಯನ ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯಲು ಆರಂಭಿಸಿತು. ಮಡದಿ ಸತಿದೇವಿಯ ನೆನಪಿಪನಲ್ಲಿ ಶಿವನು ವಿಪರೀತ ಅಳುವುದಕ್ಕೆ ಶುರು ಮಾಡಿದ ಅವನ ಕಣ್ಣೀರಿನಿಂದಲೇ ಸುರಿದ ಕಣ್ಣೀರಿನಿಂದ ಭೂಮಿಯಲ್ಲಿ ಎರಡು ಪುಷ್ಕರಣಿಗಳು ಸೃಷ್ಟಿಯಾದವು ಅದರಲ್ಲಿ ಒಂದು ಕಟಾಸರಾಜ್ ಮಂದಿರದಲ್ಲಿದೆ ಮತ್ತೊಂದು ರಾಜಸ್ಥಾನದ ಪುಷ್ಕರ್​ನಲ್ಲಿದೆ. ಕಟಾಸರಾಜ್​ನಲ್ಲಿರುವ ಕಣ್ಣೀರಿನ ಕುಂಡ ಕಟಾಕ್ಷ ಕುಂಡ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತದೆ.

ಇದನ್ನೂ ಓದಿ: 45 ದಿನಗಳ ಮಹಾಕುಂಭಮೇಳಕ್ಕೆ ಇಂದು ತೆರೆ.. ಶಿವರಾತ್ರಿ ಪ್ರಯುಕ್ತ ಕೋಟ್ಯಾಂತರ ಭಕ್ತರು ಬರುವ ನಿರೀಕ್ಷೆ

ಇನ್ನು ಈ ದೇವಾಲಯವು ಮಹಾಭಾರತದ ಯುದ್ಧದೊಂದಿಗೂ ಕೂಡ ನಂಟನ್ನು ಹೊಂದಿದೆ. ಪಗಡೆಯಾಟದಲ್ಲಿ ಸೋತ ಪಾಂಡವರು 12 ವರ್ಷ ವನವಾಸ ಹಾಗೂ 1 ವರ್ಷ ಅಜ್ಞಾತವಾಸವನ್ನು ಅನುಭವಿಸಬೇಕಾಗುತ್ತದೆ. ಅವರು ತಮ್ಮ ವನವಾಸದ ಕಾಲದಲ್ಲಿ ಇದೇ ಮಂದಿರದ ಸುತ್ತಮುತ್ತ ಕೆಲವಷ್ಟು ದಿನಗಳ ಕಾಲವನ್ನು ಕಳೆದರು ಎಂದು ಕೂಡ ಹೇಳಲಾಗುತ್ತದೆ. ಕಾಡಿನಲ್ಲಿ ಅಲೆದಾಡುತ್ತ ಬಂದ ಪಾಂಡವರು ದಾಹದಿಂದಾಗಿ ಬಸವಳಿದಾಗಿ ಇದೇ ಕಟಾಕ್ಷ ಕುಂಡಕ್ಕೆ ನೀರನ್ನು ಹುಡುಕುತ್ತಾ ಬಂದಿದ್ದರುಎಂದು ಹೇಳಲಾಗುತ್ತದೆ. ಅದು ಮಾತ್ರವಲ್ಲ ಈ ಜಾಗವನ್ನು ಅಂದು ದ್ವೈತವನ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಕೂಡ ಹೇಳಲಾಗುತ್ತದೆ ಮತ್ತು ಇದು ಪವಿತ್ರ ಸರಸ್ವತಿ ನದಿಯ ಪಕ್ಕದಲ್ಲಿ ಇತ್ತು ಎಂದು ಕೂಡ ಹೇಳಲಾಗುತ್ತದೆ.

publive-image

ಆ ಸಮಯದಲ್ಲಿ ಈ ನೀರಿನ ಕುಂಡದ ಮೇಲೆ ಯಕ್ಷನ ಅಧಿಕಾರವಿತ್ತು. ಅವನು ನೀರನ್ನು ತೆಗೆದುಕೊಂಡು ಹೋಗಲು ಬಂದ ಪ್ರತಿ ಪಾಂಡವರನ್ನು ಪ್ರಶ್ನಿಸಿದ ನಕಲುನಿಂದ ಹಿಡಿದು ಭೀಮನವರೆಗೂ ಯಾರು ಅವನ ಪ್ರಶ್ನೆಗೆ ತಲೆಕೆಡಿಸಿಕೊಳ್ಳದೇ ನೀರನ್ನು ತೆಗೆದುಕೊಂಡು ಹೊಗುವಾಗ ಮೂರ್ಛೆಗೊಂಡು ಬಿದ್ದರು. ಕೊನೆಗೆ ಪಾಂಡವರ ಅಗ್ರಹನಾದ ಧರ್ಮರಾಯನನು ಬಂದು ಯಕ್ಷನ ಎದುರು ನಿಂತು ಯಕ್ಷನ ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ ಇದರಿಂದ ಪ್ರಸನ್ನಗೊಂಡ ಯಕ್ಷನು ಉಳಿದ ಎಲ್ಲಾ ಪಾಂಡವರಿಗೆ ಚೇತನವನ್ನು ನೀಡಿ ಅದರೊಂದಿಗೆ ಈ ಕುಂಡದ ಜಲವನ್ನು ಕೂಡ ನೀಡಿ ಅವರ ದಾಹ ನೀಗುವಂತೆ ಮಾಡಿದನು

ಕಲಿಯುಗದ ಅರಂಭದಲ್ಲಿ ಈ ಕ್ಷೇತ್ರ ಸಂಗೀತ ಮತ್ತು ಉಪನ್ಯಾಸದ ಬಹುದೊಡ್ಡ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಇದರ ಹತ್ತಿರವೇ ಭಾರತದ ವಿಶ್ವಪ್ರಸಿದ್ಧ ತಕ್ಷಶಿಲಾ ಗುರುಕುಲವೂ ಇತ್ತು . ಈ ಕಾರಣದಿಂದಾಗಿ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಲಾಕಾರರು, ಸಂಗೀತಗಾರರು ಹಾಗೂ ವಿದ್ವಾನರು ಇರುತ್ತಿದ್ದರು ಹಾಗೆ ಇಲ್ಲಿಯೇ ಅವರು ಅಧ್ಯಯನವನ್ನು ಮಾಡುತ್ತಿದ್ದರು.

ಇದನ್ನೂ ಓದಿ:Kumbh Mela; ಗಂಗೆಯಲ್ಲಿ ಮಿಂದಿದ್ದು ಎಷ್ಟು ಕೋಟಿ ಭಕ್ತರು.. ಶಿವರಾತ್ರಿಯಂದೇ ವಿದ್ಯುಕ್ತ ತೆರೆ

ಇನ್ನು ಏಳನೇ ಶತಮಾನದಲ್ಲಿ ಪಶ್ಚಿಮ ಸೀಮೆಯಲ್ಲಿ ಮೊಘಲರ ಮಹಾ ಆಕ್ರಮಣ ಶುರುವಾಯಿತು. ಯುದ್ಧದ ಜೊತೆಗೆ ಲೂಟಿಯೂ ಕೂಡ ದೊಡ್ಡಮಟ್ಟದಾಗಿ ನಡೆಯಿತು. ಮೊಘಲರು ಅಂದ್ರೆ ಅವರಿಗೆ ಯಾವ ರೀತಿಯ ಯುದ್ಧದ ನೀತಿಗಳು ಕೂಡ ಇರುತ್ತಿರಲಿಲ್ಲ. ಸಾಮಾನ್ಯ ಜನರನ್ನು ಕೂಡ ಅವರ ಬಿಡದೇ ಲೂಟಿ ಮಾಡಿದ್ದಾರೆ. ಕತ್ತರಿಸಿ ಎಸೆದಿದ್ದಾರೆ. ಮಂದಿರ ಹಾಗೂ ಗುರುದ್ವಾರಗಳನ್ನು ಧ್ವಂಸಗೊಳಿಸಿದದಾರೆ. ಇದೆಲ್ಲವನ್ನು ಮುಗಿಸಿದ ನಂತರವೇ ಅವರ ಯುದ್ಧ ಸಮಾಪ್ತಿಯಾಗುತ್ತಿತ್ತು.

publive-image

ಇದೇ ರೀತಿ ಮೊಘಲರ ಸೇನೆ ಅಂದಿನ ಗಾಂಧಾರ ಇಂದಿನ ಅಫ್ಘಾನಿಸ್ತಾನದಲ್ಲಿದ್ದ ತಕ್ಷಶಿಲಾ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸಿದರು. ಅದಾದ ಬಳಿಕ ಮುಂದೆ ನುಗ್ಗಿ ಬಂದ ಮೊಘಲರ ಸೇನೆ ಕಟಾಸರಾಜ್ ಮಂದಿರವನ್ನು ತಲುಪಿತು ಇಲ್ಲಿದ್ದ ಮಂದಿರವನ್ನು , ಗುರುಕುಲವನ್ನು ಕಲಾಕ್ಷೇತ್ರವನ್ನು ಎಲ್ಲವನ್ನೂ ಕೂಡ ಸರ್ವನಾಶ ಮಾಡಿ ಹೋದರು. ಅವರು ಇಲ್ಲಿ ಸಾವಿರಾರು ಜನರನ್ನು ನಿರ್ದಯವಾಗಿ ಹತ್ಯೆ ಮಾಡಿದರು ಎಂದು ಇತಿಹಾಸದಲ್ಲಿ ದಾಖಲಿಸಲಾಗಿದೆ, ಇಷ್ಟು ಮಾತ್ರವಲ್ಲ ಇಲ್ಲಿದ್ದ ಸಾವಿರಾರು ಸ್ತ್ರೀಯರನ್ನು ಅರಬ್ ದೇಶಕ್ಕೆ ಎತ್ತಿಕೊಂಡು ಹೋದರು ಎಂಬ ದಾಖಲೆಯೂ ಕೂಡ ಇದೆ. ಆ ಆಕ್ರಮಣದ ಬಳಿಕ ಇಲ್ಲಿ ಅಳಿದುಳಿದಿದ್ದ ಕಲಾಕಾರರು, ಸಂಗೀತಗಾರರು ಹಾಗೂ ವಿದ್ವಾನರು ಇಲ್ಲಿಂದ ಪಲಾಯನ ಮಾಡಿ ಯುರೋಪ್​ನತ್ತ ಓಡಿ ಹೋದರು ಅವರಲ್ಲಿ ಹೆಚ್ಚಿನವರು ಸಂಗೀತಗಾರರೇ ಇದ್ದರು ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment