newsfirstkannada.com

ಜನ್ಮಜನ್ಮಗಳ ನಂಟು.. ಅಯೋಧ್ಯೆಯಲ್ಲಿ ಜನಿಸಿದ ಶ್ರೀರಾಮ; ಭಗವಾನ್ ವಿಷ್ಣು ದ್ವಾರಪಾಲಕರಿಗೆ ಸೃಷ್ಟಿಕರ್ತನ ಮಹಾಶಾಪ!

Share :

Published January 15, 2024 at 11:00pm

  ವಿಷ್ಣುವಿನ ರಾಮಾವತಾರದ ಹಿಂದಿನ ರಣರೋಚಕ ರಹಸ್ಯ!

  ಭೂಮಂಡಲವನ್ನೇ ಕಪಿಮುಷ್ಟಿಗೆ ತೆಗೆದುಕೊಂಡಿದ್ದ ಆ ಅಸುರ!

  ದಶರಥ-ಕೌಸಲ್ಯರಾಗಿ ಮರುಜನ್ಮ..ರಾಮಾವತಾರದ ಮರ್ಮ

ಮರ್ಯಾದಾಪುರುಷೋತ್ತಮ ಶ್ರೀರಾಮ ವಿಷ್ಣುವಿನ ಅವತಾರ ಎಂಬುದನ್ನು ಕೇಳಿದಾಕ್ಷಣವೇ ಮೈ ರೋಮಾಂಚನಗೊಳ್ಳುತ್ತೆ. ಭಗವಾನ್ ಮಹಾವಿಷ್ಣು ರಾಮನಾಗಿ ಜನಿಸಿದ್ದರ ಉದ್ದೇಶ ರಾವಣಸಂಹಾರ ಎಂಬುದು ಎಲ್ಲರಿಗೂ ತಿಳಿದಿದೆಯಾದ್ರೂ.. ರಾವಣಸಂಹಾರದ ಉದ್ದೇಶದ ಜೊತೆ ಜೊತಯಲ್ಲೇ ಹಲವು ಕಾರಣಗಳು, ಉಪಕಥೆಗಳು ರಾಮಾವತಾರದ ಹಿಂದಿವೆ.

ರಾಮಾವತಾರ ರಹಸ್ಯ-03

ಮಹಾವಿಷ್ಣುವಿಗೆ ನಾರದ ಮುನಿಯ ಶಾಪ!
ರಾವಣಾಸುರ ಪ್ರವೇಶ.. ರಾಮನ ವನವಾಸ!

ನಾರದಮುನಿಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ತ್ರಿಲೋಕ ಸಂಚಾರಿ, ಬ್ರಹ್ಮ ಮಾನಸ ಪುತ್ರನೂ ಆಗಿರೋ ನಾರದರು ಒಮ್ಮೆ ತಮ್ಮ ಇಷ್ಟದ ದೇವರಾದ ವಿಷ್ಣುವಿಗೇ ಶಾಪವಿತ್ತಿದ್ದರು. ಆ ಶಾಪದ ಪರಿಣಾಮವಾಗಿಯೇ ವಿಷ್ಣು ರಾಮನಾಗಿ ಅವತಾರವೆತ್ತಿದ್ದರು ಅಂತಲೂ ಪುರಾಣಗಳು ಹೇಳುತ್ತವೆ. ಅಷ್ಟಕ್ಕೂ ನಾರದರು ವಿಷ್ಣುವಿಗೆ ಶಾಪವಿತ್ತ ಕಥೆಯೂ ನಿಜಕ್ಕೂ ರೋಚಕವಾಗಿದೆ. ಒಮ್ಮೆ ಕೈಲಾಸವಾಸಿ ಶಿವ, ನಾರದಮುನಿಗೆ ಶ್ರೀರಕ್ಷೆಯಾಗಿ ನಿಂತನಂತೆ. ನಾರದಮುನಿಗೆ ತಪಸ್ಸು ಮಾಡೋದಕ್ಕೆ ತಪೋವನದಲ್ಲಿ ಸಹಾಯವಿತ್ತ ಶಿವನು. ಯಾರಿಂದಲೂ ನಿನ್ನ ತಪಸ್ಸಿಗೆ ಭಂಗವಾಗೋದಿಲ್ಲ, ಯಾರೂ ನಿನ್ನ ತಪಸ್ಸನ್ನು ಭಂಗಗೊಳಿಸಲು ಸಾಧ್ಯವಿಲ್ಲ ಅಂತ ಶಕ್ತಿ ನೀಡಿದನಂತೆ. ಆದ್ರೆ, ನಾರದಮುನಿ ತಪಸ್ಸಿಗೆ ಕೂತಿದ್ದು ಇಂದ್ರದೇವನ ಆತಂಕಕ್ಕೆ ಕಾರಣವಾಗಿತ್ತು. ಯಾವ ಉದ್ದೇಶಕ್ಕಾಗಿ ಇವ್ರು ತಪಸ್ಸಿಗೆ ಕೂತಿದ್ದಾರೆ ಎಂಬುದು ಗೊತ್ತಾಗದೇ ಆತಂಕಗೊಂಡ ಇಂದ್ರದೇವ ನಾರದಮುನಿಯ ತಪಸ್ಸನ್ನು ಭಂಗಗೊಳಿಸೋಕೆ ಮುಂದಾದನಂತೆ.

ಅಗ್ನಿದೇವ, ವರುಣದೇವ ಮತ್ತು ವಾಯುದೇವರನ್ನು ಕಳುಹಿಸಿದ ಇಂದ್ರದೇವ ನಾರದಮುನಿ ತಪಸ್ಸಿಗೆ ತೊಂದರೆ ಉಂಟುಮಾಡೋಕೆ ನೋಡಿದನಂತೆ. ಆದ್ರೆ, ಎಷ್ಟೇ ತೊಂದರೆ ಕೊಟ್ಟರೂ ಕೂಡ ನಾರದಮುನಿಯ ತಪಸ್ಸಿಗೆ ಭಂಗವನ್ನುಂಟು ಮಾಡಲು ಸಾಧ್ಯವೇ ಆಗಲಿಲ್ವಂತೆ. ನಾರದಮುನಿಗಳು ಯಶಸ್ವಿಯಾಗಿ ತಮ್ಮ ತಪಸ್ಸನ್ನು ಪೂರೈಸಿದ್ರಂತೆ. ತಪಸ್ಸು ಮುಗಿದ ಬಳಿಕ ತಮ್ಮನ್ನು ತಾವು ಹೊಗಳಿಕೊಳ್ಳುತ್ತಾ. ತಮ್ಮ ಮೇಲೆ ತಾವೇ ಹೆಮ್ಮೆ ಪಡುತ್ತಾ ಕೈಲಾಸದ ಶಿವನ ಬಳಿ ಹೋದರಂತೆ. ಶಿವನ ಬಳಿ ಹೋಗಿ.. ಅಗ್ನಿ, ವಾಯು, ವರುಣ ಮತ್ತು ಕಾಮದೇವರೆಲ್ಲರೂ ತಪಸ್ಸಿಗೆ ಭಂಗ ತರಲು ಪ್ರಯತ್ನಪಟ್ಟರೂ ನನ್ನ ಏಕಾಗ್ರತೆ ವಿರುದ್ಧ ಯಾವ ಆಟಗಳೂ ನಡೆಯಲಿಲ್ಲ. ನಾನು ಎಲ್ಲರನ್ನೂ ಸೋಲಿಸಿಬಿಟ್ಟೆ ಅಂತ ತಮ್ಮನ್ನೇ ತಾವು ಹೊಗಳಿಕೊಳ್ಳಲಾರಂಭಿಸಿದ್ರಂತೆ.
ನಾರದಮುನಿಗಳು ತಮ್ಮನ್ನು ತಾವು ಹೊಗಳಿಕೊಳ್ಳುತ್ತಾ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳೋದನ್ನು ನೋಡಿದ ಶಿವ ಸೂಕ್ಷ್ಮವಾಗಿ ಒಂದು ಮಾತು ಹೇಳಿದನಂತೆ. ನೋಡು ನಾರದಮುನಿ.. ನನ್ನ ಬಳಿ ಮಾತನಾಡಿದಂತೆ ವಿಷ್ಣುವಿನ ಬಳಿ ಹೋಗಿ ಹೇಳಬೇಡ ಎಂದು ಶಿವ ನಾರದಮುನಿಗೆ ಎಚ್ಚರಿಸಿದನಂತೆ. ಆದ್ರೆ.. ಶಿವನ ಮಾತು ಕೇಳದ ನಾರದಮುನಿ ವಿಷ್ಣುವಿನ ಬಳಿಯೂ ಹೋಗಿ ತಮ್ಮನ್ನೇ ತಾವು ಹೊಗಳಿಕೊಂಡರಂತೆ. ಆಗ ವಿಷ್ಣು ನಾರದಮುನಿಗೆ ಎಚ್ಚರವಾಗಿರುವಂತೆ ಹೇಳ್ತಾರೆ.. ಆ ಮಾತನ್ನು ಕೇಳಿಸಿಕೊಳ್ಳದ ನಾರದಮುನಿ ಹೊರಟುಬಿಡ್ತಾರೆ. ನಾರದಮುನಿ ವರ್ತನೆಯಿಂದ ಕುಪಿತಗೊಂಡ ವಿಷ್ಣು ಬುದ್ಧಿ ಕಲಿಸಬೇಕೆಂದು ತೀರ್ಮಾನಿಸ್ತಾರೆ. ಆ ಸಂದರ್ಭ ಕೂಡ ಬರುತ್ತೆ.

ಅದೊಂದು ದಿನ ನಾರದಮುನಿ ಲೋಕಸಂಚಾರ ಮಾಡುತ್ತಿದ್ದಾಗ ಸುಂದರವಾದ ಸಾಮ್ರಾಜ್ಯವೊಂದರ ಬಳಿ ಬರ್ತಾರೆ. ಅಲ್ಲಿ ಯುವರಾಣಿಯ ಮದುವೆಯ ತಯಾರಿ ನಡೆಯುತ್ತಿರುತ್ತೆ. ಯುವರಾಣಿಯ ಸೌಂದರ್ಯ ಕಂಡು ಮಾರುಹೋದ ನಾರದಮುನಿಗೆ ಆಕೆಯನ್ನು ವಿವಾಹವಾಗುವ ಆಸೆ ಹುಟ್ಟುತೆ. ಆಗ ವಿಷ್ಣುವಿನ ಬಳಿ ಬಂದ ನಾರದಮುನಿ, ತನಗೆ ಸ್ಪುರದ್ರೂಪಿ ಯುವಕನ ರೂಪ ನೀಡುವಂತೆ ಕೇಳ್ತಾನೆ. ವಿಷ್ಣು ನಗುತ್ತಲೇ ಒಪ್ಪಿಗೆ ಸೂಚಿಸ್ತಾನೆ. ಖುಷಿಯಲ್ಲಿ ವಾಪಸ್ ಯುವರಾಣಿಯ ಎದುರು ಪ್ರತ್ಯಕ್ಷವಾದ ನಾರದಮುನಿ ಯುವರಾಣಿಯನ್ನು ಆಕರ್ಷಿಸೋದಕ್ಕೆ ಮುಂದಾಗ್ತಾರೆ. ಆದ್ರೆ, ನಾರದಮುನಿಯನ್ನು ಕಂಡು ನಕ್ಕು ಯುವರಾಣಿ ಅಪಹಾಸ್ಯ ಮಾಡ್ತಾಳೆ. ಯಾಕಂದ್ರೆ. ನಾರದಮುನಿಗೆ ಸ್ಪುರದ್ರೂಪಿ ಯುವಕನ ರೂಪ ಕೊಡಬೇಕಿದ್ದ ವಿಷ್ಣು ಕೋತಿಯ ರೂಪ ನೀಡಿರುತ್ತಾರೆ.

ವಿಷ್ಣು ತನಗೆ ಬೇಕಂತಲೇ ಕೋತಿಯ ರೂಪ ಕೊಟ್ಟಿದ್ದಾನೆ ಅಂತ ತಿಳಿಯುತ್ತಲೇ ನಾರದಮುನಿ ಕುಪತಿಗೊಳ್ತಾರೆ. ತನಗೆ ಅಪಮಾನಗೊಳಿಸೋದಕ್ಕೆ ವಿಷ್ಣು ಮಾಡಿದ ಪಿತೂರಿಯಿದು ಎಂದು ಗೊತ್ತಾಗಿ ಕೆಂಡಾಮಂಡಲಗೊಂಡು ವಿಷ್ಣುವಿನ ಬಳಿ ಬಂದು ಶಾಪನೀಡ್ತಾರೆ. ವಿಷ್ಟುದೇವ ನೀನು ನಿನ್ನ ಪತ್ನಿಯಿಂದ ಬಹುಕಾಲ ದೂರವಿರುವಂತಹ ಪರಿಸ್ಥಿತಿ ಬರುತ್ತೆ. ಅಂಥಹ ನೋವು ನಿನ್ನ ಕಾಡುತ್ತೆ ಅಂತ ಶಾಪ ನೀಡ್ತಾರೆ. ಆ ಶಾಪದ ಪರಿಣಾಮ ವಿಷ್ಣು ರಾಮನಾಗಿ ಜನಿಸಿ, ರಾಮ ವನವಾಸಕ್ಕೆ ಪತ್ನಿ ಸೀತೆಯಿಂದ ದೂರವಿರಬೇಕಾದ ಸ್ಥಿತಿ ಬಂತು ಅಂತ ಪುರಾಣಗಳು ಹೇಳುತ್ತವೆ.

ರಾಮಾವತಾರ ರಹಸ್ಯ-04

ಭೂಮಂಡಲವನ್ನೇ ಕಪಿಮುಷ್ಟಿಗೆ ತೆಗೆದುಕೊಂಡ ಅಸುರ!

ಭೂಮಂಡಲವನ್ನೇ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿದ್ದ ದೈತ್ಯ ಅಸುರನೊಬ್ಬನಿಗೂ ವಿಷ್ಣುವಿನ ರಾಮಾವತಾರಕ್ಕೂ ಇರೋ ನಂಟಿನ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಗಳಿವೆ. ಆ ಮಹಾಅಸುರ ಇಡೀ ಭೂಮಂಡಲವನ್ನೇ ಗೆದ್ದು, ಎಲ್ಲವನ್ನೂ ತನ್ನ ಹತೋಟಿಗೆ ತೆಗೆದುಕೊಳ್ತಾನಂತೆ. ಇಡೀ ಬ್ರಹ್ಮಾಂಡವನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳೋ ಆತಂಕ ಹುಟ್ಟಿಸ್ತಾನಂತೆ. ಆಗ ದೇವಲೋಕದ ದೇವಾನುದೇವತೆಗಳು ಭಯಗೊಂಡು ಅಸುರನ ಅಟ್ಟಹಾಸಕ್ಕೆ ಮುಕ್ತಿ ಹಾಡಲು ಕೈಲಾಸವಾಸಿ ಶಿವನ ಬಳಿ ಬರ್ತಾರಂತೆ. ಆಗ ಸಾಕ್ಷಾತ್ ಶಿವನೇ ಅಸುರನ ಎದುರು ಘೋರಯುದ್ಧಕ್ಕೆ ಮುಂದಾಗ್ತಾನಂತೆ. ಆದ್ರೆ, ಆತನ ಸಂಹಾರಕ್ಕೆ ಅಡ್ಡಿಯಾಗೋದು ಅಸುರನ ಪತ್ನಿ! ಅದೇ ವೇಳೆಗೆ.. ಆ ರಾಕ್ಷಸನ ಪತ್ನಿ ತಪಸ್ಸಿಗೆ ಕೂತು, ಉಪವಾಸ ಆರಂಭಿಸ್ತಾಳಂತೆ. ಗಂಡನಿಗೆ ಧೀರ್ಘಾಯುಷ್ಯ ಕೊಡುವಂತೆ ದೇವರನ್ನ ತಪಸ್ಸಿಗೆ ಕೂತು ಬೇಡಿಕೊಳ್ತಿದ್ದ ವೇಳೆ, ಮಹಾವಿಷ್ಣು ಆ ಅಸುರನ ರೂಪದಲ್ಲಿ ಆಕೆಯ ಬಳಿ ಹೋಗ್ತಾನೆ. ಪತಿ ವಾಪಸ್ ಬಂದನೆಂದುಕೊಂಡ ಅಸುರನ ಪತ್ನಿ ತಪಸ್ಸನ್ನು ಅರ್ಧಕ್ಕೇ ನಿಲ್ಲಿಸ್ತಾಳೆ. ಆಕೆ ತಪಸ್ಸು ನಿಲ್ಲಿಸುತ್ತಲೇ ಶಿವ ಆ ಅಸುರನನ್ನು ಸಂಹರಿಸ್ತಾನೆ. ಆದ್ರೆ, ಆ ರಾಕ್ಷಸನಿಗೆ ಮೋಕ್ಷ ಸಿಕ್ಕೋದಿಲ್ಲ. ಹಾಗಾಗಿ.. ಆತ ಮತ್ತೆ ರಾವಣನಾಗಿ ಜನಿಸ್ತಾನೆ. ಮತ್ತೆ ವಿಷ್ಣು ರಾಮನ ಅವತಾರ ತಾಳ್ತಾನೆ. ಮುಂದೆ ನಡೆಯೋದು ರಾವಣಾಸುರ ಸಂಹಾರ! ವಿಷ್ಣುವಿನ ರಾಮನ ಅವತಾರದ ಸುತ್ತ ಇಂಥಹ ಹತ್ತಾರು ಕಥೆಗಳು ತಳಕುಹಾಕ್ಕೊಂಡಿವೆ. ಒಂದಂತೂ ಸತ್ಯ.. ವಿಷ್ಣು ರಾಮನಾಗಿ ಧರೆಗಿಳಿದ್ದು ಬಂದಿದ್ದು ಲೋಕಕಲ್ಯಾಣಕ್ಕಾಗಿ.. ಆ ಲೋಕಕಲ್ಯಾಣದ ಒಂದು ಭಾಗ ರಾವಣಾಸುರನ ಸಂಹಾರ.

ರಾಮಾವತಾರ ರಹಸ್ಯ-05

ನಿಜ ಸ್ವರೂಪದಲ್ಲೇ ರಾವಣನ ಸಂಹರಿಸಲಿಲ್ಲವೇಕೆ ವಿಷ್ಣು?

ಭಗವಾನ್ ವಿಷ್ಣುವಿನ ಅವತಾರಗಳ ರಹಸ್ಯಗಳನ್ನು ಕೆದಕುತ್ತಾ ಹೋದಾಗಲೆಲ್ಲಾ ನಮ್ಮೆದುರು ಅಪ್ಪಳಿಸುವ ಪ್ರಶ್ನೆ ಅಂದ್ರೆ, ರಾವಣನನ್ನು ವಿಷ್ಣು ತನ್ನ ನಿಜ ಸ್ವರೂಪದಲ್ಲಿ ಸಂಹಾರ ಮಾಡಲಿಲ್ಲವೇಕೆ ಅನ್ನೋದು. ರಾವಣ ಸೀತೆಯನ್ನು ಅಪಹರಿಸಿದ ನಂತರ ಶ್ರೀರಾಮ ಮತ್ತು ಲಕ್ಷ್ಮಣರು ಲಂಕೆಗೆ ತೆರಳಿ ಆತನೊಂದಿಗೆ ಯುದ್ಧ ಮಾಡ್ತಾರೆ. ಯುದ್ಧದ ಅಂತ್ಯದಲ್ಲಿ ರಾವಣ ಶ್ರೀರಾಮಚಂದ್ರನಿಂದ ಹತನಾಗುತ್ತಾನೆ. ಹೀಗೆ, ಲಂಕಾಧಿಪತಿ ರಾವಣನನ್ನು ಸಂಹಾರ ಮಾಡಲೆಂದೇ ಮಹಾವಿಷ್ಣು ಶ್ರೀರಾಮಚಂದ್ರನಾಗಿ ಏಳನೇ ಅವತಾರವೆತ್ತಿ ತನ್ನ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ. ಆದರೆ ಭಗವಾನ್ ಮಹಾವಿಷ್ಣು, ತನ್ನ ನಿಜ ಸ್ವರೂಪದಲ್ಲೇ ರಾಕ್ಷಸ ರಾವಣನನ್ನು ಸಂಹಾರ ಮಾಡಬಹುದಿತ್ತಲ್ಲ. ಯಾಕೆ ಹಾಗೆ ಮಾಡಲಿಲ್ಲವೇಕೆ ಗೊತ್ತಾ? ರಾವಣನನ್ನು ವಿಷ್ಣು ತನ್ನ ನಿಜ ಸ್ವರೂಪದಲ್ಲಿ ಸಂಹಾರ ಮಾಡದಿರಲು ಅದೊಂದು ಪ್ರಮುಖ ಕಾರಣವಿತ್ತಂತೆ. ಅದುವೇ, ಬ್ರಹ್ಮನಿಂದ ರಾವಣ ಪಡೆದಿದ್ದ ಅದೊಂದು ಶಕ್ತಿಶಾಲಿ ವರ. ಪುರಾಣಗಳ ಪ್ರಕಾರ, ಲಂಕಾಧೀಶ ರಾವಣ ಸತತವಾಗಿ ಹತ್ತು ವರ್ಷಗಳ ಕಾಲ ಘೋರವಾದ ತಪೋನಿರತನಾಗ್ತಾನೆ.

ರಾವಣನ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ ತನ್ನ ಬಳಿ ವರ ಕೇಳುವಂತೆ ಹೇಳ್ತಾನೆ. ಆಗ ರಾವಣ ಶಕ್ತಿಶಾಲಿ ವರವೊಂದನ್ನು ಕೇಳ್ತಾನೆ. ತನಗೆ ದೇವತೆಗಳು, ಗಂಧರ್ವರು, ಯಕ್ಷರು, ಭೂತ-ಪಿಶಾಚಿಗಳು ಹಾಗೂ ರಾಕ್ಷಸರಿಂದ ಮೃತ್ಯು ಬಾರದಿರುವಂತೆ ವರ ನೀಡುವಂತೆ ಕೇಳಿದಾಗ.. ಬ್ರಹ್ಮ ತಥಾಸ್ತು ಎಂದುಬಿಡ್ತಾನಂತೆ. ಹೀಗೆ, ಬ್ರಹ್ಮನಿಂದ ವರ ಪಡೆದ ರಾವಣ ನಂತರ ಅತ್ಯಂತ ದುಷ್ಟನಾಗುತ್ತಾನೆ. ದೇವತೆಗಳು, ಋಷಿ-ಮುನಿಗಳು, ಮಾನವರೆಲ್ಲರಿಗೆ ಕಷ್ಟ ಕೊಡುತ್ತಾ ತನ್ನ ಅಟ್ಟಹಾಸ ಮೆರೆಯುತ್ತಾನೆ. ರಾವಣನ ಅಟ್ಟಹಾಸಗಳು ಹೆಚ್ಚಾಗುತ್ತಿದ್ದಂತೆ, ಆತನನ್ನು ಸಂಹಾರ ಮಾಡಲು ಸಾಕ್ಷಾತ್ ಮಹಾವಿಷ್ಣುವೇ ಭೂಮಿಯ ಮೇಲೆ ಶ್ರೀರಾಮನಾಗಿ ಅವತಾರವೆತ್ತುತ್ತಾನೆ. ಸುಧೀರ್ಘ ಸಂಘರ್ಷದ ತರುವಾಯ ರಾಮನಿಂದ ರಾವಣ ಸಂಹಾರವಾಗ್ತಾನೆ.

ಹೌದು.. ಮಹಾವಿಷ್ಣು ಶ್ರೀರಾಮನಾಗಿ, ಮರ್ಯಾದಪುರುಷೋತ್ತಮನಾಗಿ ಧರೆಗಿಳಿದು ಬಂದಿದ್ದು ಕೇವಲ ಅಸುರಸಂಹಾರಕ್ಕಾಗಿಯಷ್ಟೇ ಅಲ್ಲ.. ಲೋಕಕಲ್ಯಾಣದ ಮಹತ್ಕಾರ್ಯಕ್ಕಾಗಿ ವಿಷ್ಣು ರಾಮನಾಗಿ ಅವತರಿಸಿದ ಎಂಬುದು ಪುರಾಣ ಕಥೆಗಳು ಸಾರಿ ಸಾರಿ ಹೇಳ್ತಿವೆ. ವಿಷ್ಣುವಿನ 7 ನೇ ಅವತಾರವಾಗಿರೋ ರಾಮನ ಅವತಾರ ಬೇರೆಲ್ಲಾ ಅವತಾರಗಳಿಂತಲೂ ಶ್ರೇಷ್ಟವಾಗಿ ನಿಲ್ಲೋದಕ್ಕೆ ರಾಮನ ಬದುಕಿದ ರೀತಿಯೇ ಕಾರಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನ್ಮಜನ್ಮಗಳ ನಂಟು.. ಅಯೋಧ್ಯೆಯಲ್ಲಿ ಜನಿಸಿದ ಶ್ರೀರಾಮ; ಭಗವಾನ್ ವಿಷ್ಣು ದ್ವಾರಪಾಲಕರಿಗೆ ಸೃಷ್ಟಿಕರ್ತನ ಮಹಾಶಾಪ!

https://newsfirstlive.com/wp-content/uploads/2024/01/shri-rama-12.jpg

Load More