newsfirstkannada.com

ಮದುವೆ ದಿಬ್ಬಣದ ಲಾರಿ ಅಪಘಾತ; ಇಬ್ಬರು ಮಹಿಳೆಯರು ದಾರುಣ ಸಾವು

Share :

Published April 28, 2024 at 7:19pm

Update April 28, 2024 at 7:20pm

  ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದ ಬಳಿ ನಡೆದ ದುರ್ಘಟನೆ

  ಟ್ರಾಮಾಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿರೋ ಗಾಯಾಳುಗಳು

  ಈ ಘಟನೆ ಸಂಬಂಧ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲು

ಬಳ್ಳಾರಿ: ಮದುವೆ ದಿಬ್ಬಣದ ಲಾರಿ ಪಲ್ಟಿಯಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿರೋ ಘಟನೆ ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದ ಬಳಿ ನಡೆದಿದೆ. ಭಾಗ್ಯಮ್ಮ (44) ಮತ್ತು ಮಾರೆಮ್ಮ(45) ಮೃತ ದುರ್ದೈವಿಗಳು.

ಚಾಲಕನ ನಿಯಂತ್ರಣ ತಪ್ಪಿ ಮದುವೆ ದಿಬ್ಬಣದ ಲಾರಿ ಏಕಾಏಕಿ ಪಲ್ಟಿಯಾಗಿದೆ. ಪರಿಣಾಮ ಲಾರಿಯಲ್ಲಿದ್ದ 50ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಈ ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ

ಕೂಡಲೇ ಗಂಭೀರವಾಗಿ ಗಾಯಾಗೊಂಡ ಗಾಯಾಳುಗಳನ್ನು ಬಳ್ಳಾರಿಯ ಟ್ರಾಮಾಕೇರ್ ಸೆಂಟರ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ದಿಬ್ಬಣದ ಲಾರಿ ಅಪಘಾತ; ಇಬ್ಬರು ಮಹಿಳೆಯರು ದಾರುಣ ಸಾವು

https://newsfirstlive.com/wp-content/uploads/2024/04/accident12.jpg

Load More