ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಲಾರಿ.. ಡ್ರೈವರ್​ ಸೇಫ್ ಆದ್ರಾ?

author-image
Bheemappa
Updated On
ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಲಾರಿ.. ಡ್ರೈವರ್​ ಸೇಫ್ ಆದ್ರಾ? 
Advertisment
  • ರಸ್ತೆ ಬಿಟ್ಟು ಎಡ ಭಾಗಕ್ಕೆ ಹೋಗಿ ಅಪಘಾತವಾದ ಲಾರಿ
  • ಚಾಲಕ ಸೇರಿದಂತೆ ಲಾರಿಯಲ್ಲಿದ್ದ ಇನ್ನಿಬ್ಬರು ಏನಾದರು?
  • ಲಾರಿ ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು, ಎಷ್ಟು ಜನರು ಇದ್ದರು?

ಶಿವಮೊಗ್ಗ: ಕಲ್ಲಿದ್ದಲು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ತೀರ್ಥಹಳ್ಳಿ ಮಾರ್ಗದ ಸಕ್ರೇಬೈಲ್​ನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ:ಗಂಭೀರ್​ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?

publive-image

ಶಿವಮೊಗ್ಗ ಹೊರವಲಯದ ತೀರ್ಥಹಳ್ಳಿ ಮಾರ್ಗದ ಸಕ್ರೇಬೈಲ್ ಬಳಿ ಕಲ್ಲಿದ್ದಲು ಹೊತ್ತುಕೊಂಡು ಲಾರಿ ಸಾಗುತ್ತಿತ್ತು. ಮಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯನ್ನು ಬಿಟ್ಟು ಎಡ ಭಾಗಕ್ಕೆ ಹೋಗಿ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯದಂತವು ಘಟನೆ ನಡೆದಿಲ್ಲ. ಲಾರಿ ಚಲಾಯಿಸುತ್ತಿದ್ದ ಡ್ರೈವರ್ ಹಾಗೂ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment