ತಿರುಪತಿಯಿಂದ ಬರ್ತಿದ್ದ ಬಸ್​, ಲಾರಿ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಮೂವರು ಬಲಿ

author-image
Veena Gangani
Updated On
ತಿರುಪತಿಯಿಂದ ಬರ್ತಿದ್ದ ಬಸ್​, ಲಾರಿ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಮೂವರು ಬಲಿ
Advertisment
  • 16 ಪ್ರಯಾಣಿಕರಿಗೆ ಗಾಯ, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರ
  • ಗೊಟ್ಟಿಪುರ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತ
  • ಅಪಘಾತದ ತೀವ್ರತೆಗೆ ಸಾರಿಗೆ ಬಸ್ ಸಂಪೂರ್ಣ ‌ಜಖಂ

ಹೊಸಕೋಟೆ: ಹೆದ್ದಾರಿಯಲ್ಲಿ‌ ಬೆಳ್ಳಂ‌ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಜೀವಬಿಟ್ಟಿರೋ ಘಟನೆ ತಾಲೂಕಿನ ಗೊಟ್ಟಿಪುರ ಗೇಟ್ ಬಳಿ ನಡೆದಿದೆ. ಕೇಶವರೆಡ್ಡಿ ( 44 ) ತುಳಸಿ ( 21 ) ಪ್ರಣತಿ ( 4 ) ಮೃತ ದುರ್ದೈವಿಗಳು.

ಇದನ್ನೂ ಓದಿ: ವಿಮಾನದ ಬೆಲೆ 2.18 ಸಾವಿರ ಕೋಟಿ ರೂ.. ಪತನಗೊಂಡ Boeing 787 ವಿಶೇಷತೆ ಏನೇನು..?

ಆಂಧ್ರದಿಂದ ಬೆಂಗಳೂರಿಗೆ ಸಾರಿಗೆ ಬಸ್​ನಲ್ಲಿ ಪ್ರಯಾಣಿಕರು ಬರುತ್ತಿದ್ದರು. ಆಗ ಬಸ್​ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಮೂವರು ಜೀವಬಿಟ್ಟಿದ್ದು, 16 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ನಿದ್ದೆ ಮಂಪರಿನಲ್ಲಿ ಓವರ್​ ಟೇಕ್ ಮಾಡಲು ಹೋಗಿ ಬಸ್ ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳಿಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment