Advertisment

BREAKING: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆ; ಚಾಲಕನ ಸುಳಿವು?

author-image
admin
Updated On
ಶಿರೂರು ಗುಡ್ಡ ಕುಸಿತ;​ 29 ದಿನಗಳ ಬಳಿಕ ಅರ್ಜುನ್​ಗಾಗಿ  ಮತ್ತೆ ಹುಡುಕಾಟಕ್ಕಿಳಿದ ಈಶ್ವರ್​ ಮಲ್ಪೆ
Advertisment
  • ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಲಾರಿ
  • 6 ದಿನಗಳ ಬಳಿಕ ಕೊನೆಗೂ ಕೇರಳದ ಲಾರಿ ಇರುವ ಜಾಗ ಪತ್ತೆ
  • ಲಾರಿ ಪತ್ತೆಯಾದ ಜಾಗಕ್ಕೆ ಜಿಲ್ಲಾಧಿಕಾರಿ, ಕಾರವಾರ ಶಾಸಕರು ಭೇಟಿ

ಕಾರವಾರ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಲಾರಿ ಕೊನೆಗೂ ಪತ್ತೆಯಾಗಿದೆ. ಕಳೆದ ಜುಲೈ 16ರಂದು ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಗುಡ್ಡ ಕುಸಿತದ ಸ್ಥಳದಲ್ಲಿ 7 ಮಂದಿ ಮೃತದೇಹ ಪತ್ತೆಯಾಗಿದ್ರೆ, ಲಾರಿಯ ಸುಳಿವೇ ಸಿಕ್ಕಿರಲಿಲ್ಲ. ಹೀಗಾಗಿ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇಂದು ನದಿಯಲ್ಲಿ ಲಾರಿ ಬಿದ್ದಿರುವುದು ಪತ್ತೆಯಾಗಿದೆ.

Advertisment

ಗುಡ್ಡದ ಮಣ್ಣಿನಲ್ಲಿ ಕಾಣೆಯಾಗಿದ್ದ ಲಾರಿ ಹಾಗೂ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇಂದು ಕಾರ್ಯಾಚರಣೆ ವೇಳೆ ಕಬ್ಬಿಣ ತಾಗಿದ ಅನುಭವ ಆಗಿದ್ದು, ಸಿಬ್ಬಂದಿಗಳು ಇಲ್ಲಿ ಲಾರಿ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅರ್ಜುನ್ ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರೋದು ಕನ್ಫರ್ಮ್​​.. CCTV ದೃಶ್ಯದಲ್ಲಿ ಸೆರೆ 

ಶಿರೂರಿನಲ್ಲಿ ಪೋಕ್ಲೈನ್‌ನಲ್ಲಿ ಕಾರ್ಯಾಚರಣೆ ಮಾಡುವಾಗ ಲಾರಿ ಪತ್ತೆಯಾಗಿದೆ. ಲಾರಿ ಪತ್ತೆಯಾದ ಹಿನ್ನೆಲೆಯಲ್ಲಿ ಬೋಟ್‌ನಲ್ಲಿ ಸ್ಥಳಕ್ಕೆ ಹೋದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಕಾರವಾರ ಶಾಸಕ ಸತೀಶ್ ಸೈಲ್ ಅವರು ಸಹ ಬೋಟ್‌ನಲ್ಲಿ ಸ್ಥಳಕ್ಕೆ ಹೋಗಿ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

Advertisment

publive-image

ಕೇರಳ ಮೂಲದ ಭಾರತ್ ಬೆಂಜ್‌ ಲಾರಿ ಗುಡ್ಡ ಕುಸಿತದಲ್ಲಿ ಸಿಲುಕಿತ್ತು. ಅರ್ಜುನ್ ಎನ್ನುವ ಚಾಲಕ ಇನ್ನೂ ಸಹ ನಾಪತ್ತೆಯಾಗಿದ್ದಾನೆ. ಸದ್ಯ ಮಳೆ‌ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಡಕು ಉಂಟಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment