/newsfirstlive-kannada/media/post_attachments/wp-content/uploads/2025/02/THREE-PEOPLE-TRAGEDY-END.jpg)
ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಜನರು ಅಸುನೀಗಿದ ಘಟನೆ ಅರಬೈಲ್ ಘಟ್ಟದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯಯ ಲ್ಲಾಪುರ ತಾಲೂಕಿನ ಅರರಬೈಳ್ ಘಟ್ಟದಲ್ಲಿ ಈ ಒಂದು ಭೀಕರ ಅಪಘಾತ ನಡೆದಿದ್ದು, ಒಂದೇ ಕುಟುಂಬದ ಮೂವರು ಸದಸ್ಯರು ದಾರುಣ ಅಂತ್ಯ ಕಂಡಿದ್ದಾರೆ.
ಕೊಪ್ಪಳದಿಂದ ಪ್ರವಾಸಕ್ಕೆಂದು ಅಂಕೋಲಾ ಕಡೆಗೆ ಕುಟುಂಬ ಹೊರಟಿತ್ತು. ಓವರ್ಟೇಕ್ ಮಾಡುವ ಭರದಲ್ಲಿ ಯಮವೇಗದಲ್ಲಿ ಬಂದ ಲಾರಿ ಕಾರಿಗೆ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ಹೋಗಿದೆ. ಕಾರು ಚಲಾಯಿಸುತ್ತಿದ್ದ ವೆಂಕಟೇಶ್, ಕಾರಿನಲ್ಲಿದ್ದ ಶ್ರೀಕಾಂತ್ ರೆಡ್ಡಿ ಅವರ ಪತ್ನಿ ಚೈತ್ರಾ ನಾಲ್ಕು ವರ್ಷದ ಮಗು ಶ್ರೀಹಾನ್ ಅಸುನೀಗಿದ ದುರ್ದೈವಿಗಳು ಎಂದು ಹೇಳಲಾಗಿದೆ.
ಇದನ್ನೂ ಓದಿ: 3, 2, 1 ಕೌಂಟ್ ಮಾಡಿ ತುಂಗಭದ್ರಾ ನದಿಗೆ ಜಿಗಿದ ವೈದ್ಯೆ; ಹೈದರಾಬಾದ್ನ ಡಾಕ್ಟರ್ ಕೊಪ್ಪಳದಲ್ಲಿ ಹುಚ್ಚಾಟ..!
ಇನ್ನು ಶ್ರೀಕಾಂತ್ ರೆಡ್ಡಿಯವರ ಎರಡು ಕಾಲೆಗೆ ಭೀಕರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ