newsfirstkannada.com

ಆರ್​ಸಿಬಿ ಫ್ಯಾನ್ಸ್​ಗೆ ವಿಲ್​ ಜಾಕ್ಸ್ ರಿಚಾರ್ಜ್​.. ಹೀಗೂ ಇದೆ ಪ್ಲೇ ಆಫ್​ ಲೆಕ್ಕಾಚಾರ..!

Share :

Published May 1, 2024 at 12:31pm

    ಸಿಡಿದೆದ್ದು ನಿಂತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಸೋಲಿನ ಪ್ರಪಾತಕ್ಕೆ ಬಿದ್ದಿದ್ದ RCBಯ ಭರ್ಜರಿ ಕಮ್​ಬ್ಯಾಕ್​

    ವಿಲ್​ ಜಾಕ್ಸ್​ - ವಿರಾಟ್​ ಕೊಹ್ಲಿ ಮಾಡ್ತಾರಾ ಮೋಡಿ..?

ಸತತ ಸೋಲಿನಿಂದ ಕುಗ್ಗಿ ಹೋಗಿದ್ದ ಆರ್​​ಸಿಬಿ 2 ಗೆಲುವಿನ ಬಳಿಕ ಸಿಡಿದೆದ್ದಿದೆ. ಬೇಸರಗೊಂಡಿದ್ದ ಫ್ಯಾನ್ಸ್​ ಕೂಡ ಫುಲ್​ ರಿಚಾರ್ಜ್​ ಆಗಿದ್ದಾರೆ. ಅಸಾಧ್ಯ ಅಂದುದನ್ನ ಸಾಧಿಸಿ ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡುತ್ತೆ ಅನ್ನೋ ವಿಶ್ವಾಸ ಫ್ಯಾನ್ಸ್​ದ್ದಾಗಿದೆ. ಏಕಾಂಗಿಯಾಗಿದ್ದ ಕೊಹ್ಲಿಗೆ ಜೊತೆಗಾರನಾಗಿ ವಿಲ್​ ಜಾಕ್ಸ್​ ಸಿಕ್ಕಿರೋದೆ ಈ ಆತ್ಮವಿಶ್ವಾಸದ ಹಿಂದಿನ ಸೀಕ್ರೆಟ್​​.

ಐಪಿಎಲ್​​ ಸೀಸನ್​ 17ರಲ್ಲಿ ಸೋಲಿನ ಪ್ರಪಾತಕ್ಕೆ ಬಿದ್ದಿದ್ದ ಆರ್​​ಸಿಬಿ ಸಿಡಿದೆದ್ದು ನಿಂತಿದೆ. ಕಳಪೆ ಆಟವನ್ನ ನೋಡಿ ಇದು ಹೊಸ ಅಧ್ಯಾಯ ಅಲ್ಲ, ಇದು ಅಂತಿಮ ಅಧ್ಯಾಯ ಅನ್ನೋ ತಿರ್ಮಾನ ಮಾಡಿದವರೆಲ್ಲರೂ ಇದೀಗ ಆರ್​​ಸಿಬಿ ಕಮ್​ಬ್ಯಾಕ್​ ಕಂಡು ಶಾಕ್​ ಆಗಿದ್ದಾರೆ. ಹೊಸ ಹುರುಪಿನೊಂದಿಗೆ ಅಭಿಮಾನಿಗಳು ಆರ್​​ಸಿಬಿಗೆ ಜೈ ಅಂತಿದ್ದಾರೆ. ಇಷ್ಟೇ ಅಲ್ಲ.. ಈ ಹಿಂದಿನಂತೆ ಕಾಲ್ಕ್ಯುಲೇಟರ್​ ಹಿಡಿದು ಪ್ಲೇ ಆಫ್ ಲೆಕ್ಕಾಚಾರ ಹಾಕೋಕು ಶುರುವಿಟ್ಟುಕೊಂಡಿದ್ದಾರೆ.

2 ಪಂದ್ಯಗಳಲ್ಲಿ ಜಯ, ಶುರುವಾಯ್ತು ಪ್ಲೇ ಆಫ್​ ಲೆಕ್ಕಾಚಾರ
ಸನ್​ರೈಸರ್ಸ್​ ಹೈದ್ರಾಬಾದ್​, ಗುಜರಾತ್​​ ಟೈಟನ್ಸ್​ ಎದುರು ಜಯಭೇರಿ ಬಾರಿಸಿದ ಬೆನ್ನಲ್ಲೇ ಆರ್​​ಸಿಬಿ ಪಾಳಯದಲ್ಲಿ ಪ್ಲೇ ಆಫ್​ನ ಕನಸು ಚಿಗುರೊಡೆದಿದೆ. ಉಳಿದೆ ಎಲ್ಲಾ ಪಂದ್ಯಗಳನ್ನ ಜಯಿಸಿದ್ರೆ, ಆರ್​​ಸಿಬಿಗೆ ಪ್ಲೇ ಆಫ್​ಎಂಟ್ರಿಗೆ ಒಂದು ಅವಕಾಶ ಇನ್ನೂ ಇದೆ. ಸಾಮಾನ್ಯ ಗೆಲುವು ಸಾಕಾಗಲ್ಲ. ಭಾರೀ ಅಂತರದ ಗೆಲುವು ಅತ್ಯಗತ್ಯ..!

ಎಲ್ಲಾ ಪಂದ್ಯ ಗೆಲ್ಬೇಕು.. ಅದೃಷ್ಟ RCB ಕೈಹಿಡಿಬೇಕು
ಆಡಿದ 10 ಪಂದ್ಯಗಳಲ್ಲಿ ಕೇವಲ 3 ಪಂದ್ಯ ಗೆದ್ದಿರುವ ಆರ್​​ಸಿಬಿ ಸದ್ಯ 6 ಪಾಯಿಂಟ್​​ಗಳನ್ನ ಹೊಂದಿದೆ. ಮುಂದಿನ 4 ಪಂದ್ಯಗಳನ್ನ ಗೆದ್ದರೆ 14 ಅಂಕಗಳನ್ನು ಕಲೆ ಹಾಕಲಿದೆ. ಭಾರೀ ಅಂತರದಲ್ಲಿ ಜಯಭೇರಿ ಭಾರಿಸಿದ್ರೆ, ರನ್​​ರೇಟ್​ ಕೂಡ ಹೆಚ್ಚಲಿದೆ. ಹಾಗಾದ್ರೂ ಉಳಿದ ತಂಡಗಳ ಸೋಲು-ಗೆಲುವು ಆರ್​​ಸಿಬಿಯ ಪ್ಲೇ ಆಫ್​ ಹಣೆಬರಹ ನಿರ್ಧರಿಸಲಿದೆ. ಎಲ್ಲಾ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಅದೃಷ್ಟದ ಅವಕಾಶಕ್ಕಾಗಿ ಕಾಯೋದಷ್ಟೇ ಆರ್​​ಸಿಬಿ ಮುಂದಿರೋ ಆಯ್ಕೆಯಾಗಿದೆ.

ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ ವಿಲ್​​​ ಜಾಕ್ಸ್​-ಕಿಂಗ್​ ಕೊಹ್ಲಿ
ಆರ್​​ಸಿಬಿಯಿಂದ ಉಳಿದ ತಂಡಗಳ ಸೋಲು-ಗೆಲುವನ್ನ ನಿರ್ಧರಿಸೋಕೆ ಆಗಲ್ಲ. ಹೀಗಾಗಿ ತನ್ನ ಪಾಲಿನ ಉಳಿದ ಪಂದ್ಯಗಳನ್ನ ಗೆಲ್ಲೋದಷ್ಟೇ ಸದ್ಯ ಆರ್​​ಸಿಬಿಯ ಗುರಿಯಾಗಿದೆ. ಗುಜರಾತ್​​ ಎದುರಿನ ಗೆಲುವಿನ ಬೆನ್ನಲ್ಲೇ ಅಭಿಮಾನಿಗಳ ವಲಯದಲ್ಲಿ ಆರ್​​ಸಿಬಿ ಉಳಿದ ಪಂದ್ಯಗಳನ್ನ ಗೆದ್ದೇ ಗೆಲ್ಲುತ್ತೆ ಅನ್ನೋ ಅಪಾರ ನಿರೀಕ್ಷೆ ಹುಟ್ಟಿದೆ. ಈ ನಿರೀಕ್ಷೆ ಹುಟ್ಟು ಹಾಕಿರೋದು ಕಿಂಗ್​ ಕೊಹ್ಲಿ ಹಾಗೂ ವಿಲ್​ ಜಾಕ್ಸ್​ ಜೋಡಿ.

ಗುಜರಾತ್​​ ಎದುರು ದರ್ಬಾರ್​ ನಡೆಸಿದ ಜೋಡೆತ್ತು
ಈ ಸೀಸನ್​ನ ಫಸ್ಟ್​ ಹಾಫ್​ನಲ್ಲಿ ವಿರಾಟ್​ ಕೊಹ್ಲಿ ಏಕಾಂಗಿಯಾಗಿದ್ರು. ವಿರಾಟ್​ ಹೊರತುಪಡಿಸಿದ್ರೆ ಉಳಿದೆಲ್ಲಾ ಬ್ಯಾಟ್ಸ್​ಮನ್​ಗಳು ಇನ್​ಕನ್ಸಿಸ್ಟೆಂಟ್​​ ಪರ್ಫಾಮೆನ್ಸ್​​ ನೀಡಿದ್ರು. ವಿರಾಟ್​ ಕೊಹ್ಲಿಯೊಬ್ಬರೇ ಏಕಾಂಗಿಯಾಗಿ ತಂಡದ ಬ್ಯಾಟಿಂಗ್​ನ ಜವಾಬ್ದಾರಿ ಹೊತ್ತಿದ್ರು. ಇದೀಗ ಸೆಕೆಂಡ್​ ಹಾಫ್​ನಲ್ಲಿ ವಿಲ್​ ಜಾಕ್ಸ್​ ಕೊಹ್ಲಿಗೆ ಸಾಥ್​​ ಕೊಡೋ ಸೂಚನೆ ಕೊಟ್ಟಿದ್ದಾರೆ. ಗುಜರಾತ್​ ವಿರುದ್ಧ ವಿಲ್​ ಜಾಕ್ಸ್ ಶತಕ ಸಿಡಿಸಿದ ರೀತಿ, ಅಭಿಮಾನಿಗಳಲ್ಲಿ ಹೊಸ ಭರವಸೆ ಹುಟ್ಟು ಹಾಕಿದೆ.

ಏಕಾಂಗಿ ಕೊಹ್ಲಿಗೆ ಕೊನೆಗೂ ಸಿಕ್ಕ ಜೊತೆಗಾರ?
ಈ ಹಿಂದಿನ ಸೀಸನ್​ಗಳಲ್ಲಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿ, ವಿರಾಟ್​ ಕೊಹ್ಲಿ ಜೋಡೆತ್ತುಗಳಂತೆ ತಂಡದ ಬ್ಯಾಟಿಂಗ್​ಗೆ ಬಲ ತುಂಬಿದ್ರು. ಆದ್ರೆ, ಈ ಸೀಸನ್​ನಲ್ಲಿ ಫಾಫ್​ ಡುಪ್ಲೆಸಿ ರನ್​ಗಳಿಕೆಗೆ ಪರದಾಡ್ತಿದ್ದಾರೆ. ಹೀಗಾಗಿ ಕೊಹ್ಲಿ ಏಕಾಂಗಿಯಾಗಿದ್ರು. ಇದೀಗ ವಿಲ್​ ಜಾಕ್ಸ್​ ಧಮ್​ದಾರ್​ ಪರ್ಫಾಮೆನ್ಸ್​ ನೀಡಿದ್ದಲ್ಲದೇ, ಕೊಹ್ಲಿ ಜೊತೆಗೆ ಒಳ್ಳೆ ಪಾರ್ಟನರ್​ಶಿಪ್​ ಕಟ್ಟಿದ್ದಾರೆ. ಇವರಿಬ್ಬರ ಜೊತೆಯಾಟವೇ ಗುಜರಾತ್​ ಎದುರು ಗೆಲುವಿನ ಗರಿ ತಂದುಕೊಟ್ಟಿದ್ದು ಅಂದ್ರೆ ತಪ್ಪಾಗಲ್ಲ.

ಒಟ್ಟಿನಲ್ಲಿ, ಗುಜರಾತ್​​ ಎದುರು 74 ಎಸೆತಗಳಲ್ಲಿ 166 ರನ್​ ಸಿಡಿಸಿದ ಈ ಜೋಡಿ ಆರ್​​​ಸಿಬಿ ಕ್ಯಾಂಪ್​ನಲ್ಲಿ ಹೊಸ ಭರವಸೆ ಹುಟ್ಟು ಹಾಕಿದೆ. ವಿರಾಟ್​ ಕೊಹ್ಲಿ – ವಿಲ್​ ಜಾಕ್ಸ್​ ಆಟ ಅಭಿಮಾನಿಗಳ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಇವರಿಬ್ಬರ ಜುಗಲ್​​ಬಂಧಿ ಮುಂದಿನ ಪಂದ್ಯಗಳಲ್ಲೂ ಹೀಗೆ ಮುಂದುವರೆಯಲಿ ಅನ್ನೋದು ಅಭಿಮಾನಿಗಳ ಆಸೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​ಸಿಬಿ ಫ್ಯಾನ್ಸ್​ಗೆ ವಿಲ್​ ಜಾಕ್ಸ್ ರಿಚಾರ್ಜ್​.. ಹೀಗೂ ಇದೆ ಪ್ಲೇ ಆಫ್​ ಲೆಕ್ಕಾಚಾರ..!

https://newsfirstlive.com/wp-content/uploads/2024/04/Will-Jacks-3.jpg

Load More