ಲಾಸ್​​ ಏಂಜಲೀಸ್ ಬೆಂಕಿಯಲ್ಲೂ ಸುಡದೇ ಉಳಿದ ಒಂದೇ ಒಂದು ಮನೆ ಇದು! ಏನಿದರ ರಹಸ್ಯ?

author-image
admin
Updated On
ಲಾಸ್​​ ಏಂಜಲೀಸ್ ಬೆಂಕಿಯಲ್ಲೂ ಸುಡದೇ ಉಳಿದ ಒಂದೇ ಒಂದು ಮನೆ ಇದು! ಏನಿದರ ರಹಸ್ಯ?
Advertisment
  • ಲಾಸ್​​ ಏಂಜಲೀಸ್​​ನಲ್ಲಿ ಸುಡದೇ ಉಳಿದ ಮನೆ ರಹಸ್ಯ!
  • ಲಾಸ್​​ ಏಂಜಲೀಸ್​​ನ ಮಲಿಬು ಪಟ್ಟಣದಲ್ಲಿ ಅಚ್ಚರಿಯ ಮನೆ
  • ಬೆಂಕಿ ಅನಾಹುತಕ್ಕೆ ಇದೊಂದು ಮನೆ ಮಾತ್ರವೇ ಉಳಿದಿದೆ

ಅಮೆರಿಕಾದ ಲಾಸ್​​ ಏಂಜಲೀಸ್​​ನಲ್ಲಿ 40,000 ಎಕರೆ ಭಸ್ಮಾಸುರನ ಬೆಂಕಿಗೆ ಸುಟ್ಟು ಬೂದಿ ಆಗಿದೆ. 90 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ರು. ಇಲ್ಲಿನ 13 ಸಾವಿರ ಮನೆಗಳು ಸುಟ್ಟು ಕರಕಲಾಗಿವೆ. ಆದರೆ ಅದೊಂದೇ ಒಂದು ಮನೆ ಮಾತ್ರ ಬೂದಿಯ ಮಧ್ಯೆ ಫಿನೀಕ್ಸ್​ ಪಕ್ಷಿಯಂತೆ ಎದ್ದು ನಿಂತಿದೆ. ಬೆಂಕಿ ಅನಾಹುತಕ್ಕೆ ಇದೊಂದು ಮನೆ ಮಾತ್ರ ಬಲಿ ಆಗದೇ ಉಳಿದಿರುವುದು ಅಚ್ಚರಿ ಮೂಡಿಸುತ್ತಿದೆ.

ಇದನ್ನೂ ಓದಿ: ಲಾಸ್​ ಏಂಜಲೀಸ್​​ ಅಗ್ನಿ ಪ್ರಮಾದಕ್ಕೆ ಈ ಮೀನು ಕಾರಣವೇ? ಡೆಲ್ಟಾ ಸ್ಮೆಲ್ಟ್​ ಫಿಶ್‌ ಮಾಡಿದ್ದೇನು ಗೊತ್ತಾ? 

ಮಲಿಬುನಲ್ಲಿ ಉಳಿದಿದ್ದು ಒಂದೇ ಮನೆ!
ಲಾಸ್​​ ಏಂಜಲೀಸ್​​ನ ಮಲಿಬು ಪಟ್ಟಣದಲ್ಲಿ ಅಚ್ಚರಿ ಎನ್ನುವಂತೆ ಒಂದೇ ಒಂದು ಮನೆ ಬೆಂಕಿಗೆ ಬಲಿ ಆಗದೇ ಉಳಿದಿದೆ. ಆದರೇ ಆ ಇಡೀ ಪಟ್ಟಣದ ಎಲ್ಲಾ ಮನೆಗಳು ಸುಟ್ಟು ಕರಕಲಾಗಿವೆ. ಆದರೇ. ಇದೊಂದೇ ಒಂದು ಮನೆ ಸುಡದೇ ಉಳಿದಿದ್ದು ಹೇಗೆ ಅನ್ನೋ ಚರ್ಚೆ ಇದೀಗ ನಡೀತಿದೆ. ಇದು ಟೆಕ್ಸಾಸ್​​ನಿಂದ ಇತ್ತೀಚೆಗೆ ವಲಸೆ ಬಂದು ನೆಲೆಸಿದ ಡೇವಿಡ್​ ಸ್ಟೈನರ್​ ಅವರಿಗೆ ಸೇರಿದ್ದು ಎನ್ನಲಾಗುತ್ತಿದೆ. ವೇಸ್ಟ್​​ ಮ್ಯಾನೇಜ್ಮೆಂಟ್​​ ಎಕ್ಸಿಕ್ಯೂಟೀವ್ ಆಗಿ ನಿವೃತ್ತಿ ಹೊಂದಿದ್ದ ಡೇವಿಡ್​ ಭರ್ತಿ ₹58.5 ಕೋಟಿ ಕೊಟ್ಟು ಈ ಮನೆಯನ್ನು ಖರೀದಿಸಿದ್ರು.

publive-image

ಅದೊಂದು ಪದಾರ್ಥವೇ ಮನೆ ಉಳಿಸಿತಾ?
ಸ್ಟಕ್ಕೋ ಅನ್ನೋ ವಿಶಿಷ್ಟ ಮಾದರಿಯ ಪ್ಲಾಸ್ಟರ್​​, ಕಲ್ಲು ಹಾಗೂ ಫೈರ್​ ಪ್ರೂಫ್​​ನಿಂದ ಈ ಮನೆಯನ್ನು ನಿರ್ಮಿಸಲಾಗಿದೆ. 4200 ಚದರ ಅಡಿಗಳ ಮನೆಯಲ್ಲಿ 4 ಬೆಡ್​ ರೂಮ್ ಇವೆ. ಈ ಮನೆಯನ್ನು ಡೇವಿಡ್​ ಓರ್ವ ಬಿಲ್ಡರ್​ನಿಂದ ಖರೀದಿಸಿದ್ರು. ಇದು ಕೇವಲ ಸಣ್ಣ ಪುಟ್ಟ ಅಗ್ನಿ ಪ್ರಮಾದಗಳನ್ನು ಸಹಿಸಬಲ್ಲದು ಅಂದ್ಕೊಂಡಿದ್ರು. ಆದ್ರೀಗ ಮಹಾ ಕಾಡ್ಗಿಚ್ಚನ್ನೂ ಈ ಮನೆ ತಡೆದುಕೊಂಡಿದೆ. ಮನೆಯ ಮೇಲ್ಛಾವಣಿ ಅಗ್ನಿನಿರೋಧಕ ಶಕ್ತಿ ಹೊಂದಿದೆ. ಮನೆಯ ಸುತ್ತಲೂ 4 ಅಡಿ ಎತ್ತರದ ಕಾಂಕ್ರೀಟ್​ ವಾಲ್ ಇದೆ. ಈ ಗೋಡೆಯನ್ನು ಇಟ್ಟಿಗೆ ಹಾಗೂ ಗಾರೆ ಕಲ್ಲಿನಿಂದ ನಿರ್ಮಿಸಲಾಗಿದೆ. ಮನೆಯ ಕಿಟಕಿಗಳಿಗೆ ಟೆಂಪರ್ಡ್ ಗ್ಲಾಸ್​​ ಬಳಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment