newsfirstkannada.com

×

ಅಬ್ಬಬ್ಬಾ ಇದು ಕಣ್ರಿ ಲಾಟರಿ ಅಂದ್ರೆ.. 8 ನಿಮಿಷಗಳಲ್ಲೇ ₹8.5 ಕೋಟಿ ಗೆದ್ದ ಬಡ ಕಾರ್ಮಿಕ!

Share :

Published October 25, 2024 at 2:55pm

Update October 25, 2024 at 4:04pm

    ಜಸ್ಟ್‌ 8 ನಿಮಿಷಗಳಲ್ಲೇ ₹8.5 ಕೋಟಿ ಗೆದ್ದ ಬಡ ಕಾರ್ಮಿಕ

    ಎಲ್ಲರೂ ಗೇಲಿ ಮಾಡಿದರೂ 13 ವರ್ಷ ಬಿಡಲೇ ಇಲ್ಲ ಪಟ್ಟು

    ಗೆದ್ದೇ ಗೆಲ್ಲುವೆ ಒಂದು ದಿನ ಅಂದವನದ್ದು ಸಂಭ್ರಮವೋ ಸಂಭ್ರಮ

ಆತ ಪ್ರತಿ ದಿನ ಲಾಟರಿ ಟಿಕೆಟ್​ ಖರೀದಿಸುತ್ತಿದ್ದ. ಪ್ರತಿ ಸಲವೂ ಆತನನ್ನ ಗೇಲಿ ಮಾಡುತ್ತಿದ್ದರು. ಇಂದಲ್ಲ ನಾಳೆ ಗೆದ್ದೇ ಗೆಲ್ಲುವೆ ಅನ್ನೋ ಮಾತನ್ನಷ್ಟೇ ಹೇಳುತ್ತಿದ್ದ. ಸತತ 13 ವರ್ಷಗಳ ಬಳಿಕ 8 ನಿಮಿಷಗಳಲ್ಲೇ ಕೋಟ್ಯಾಧಿಪತಿ ಆಗಿದ್ದಾನೆ. ಅನುದಿನವೂ ಸಾಮಾನ್ಯ ದರ್ಜೆಯ ಕೆಲಸ ಮಾಡ್ತಿದ್ದವನು 8 ನಿಮಿಷದಲ್ಲಿ ಕೋಟ್ಯಾಧೀಶ್ವರ ಆಗಿದ್ದಾನೆ.

8 ನಿಮಿಷಗಳಲ್ಲೇ ₹8.5 ಕೋಟಿ ಗೆದ್ದ ಬಡ ಕಾರ್ಮಿಕ
ಅಮೆರಿಕಾದ ವರ್ಜೀನಿಯಾದ ರೋನೋಕ್​ನಲ್ಲಿ ಬಡ ಕಾರ್ಮಿಕನೊಬ್ಬ ನಿಮಿಷಗಳಲ್ಲೇ ಕೋಟ್ಯಾಧಿಪತಿ ಆಗಿದ್ದಾನೆ. ಇಲ್ಲಿನ 604 ಮಿನಿಟ್ ಮಾರ್ಕೆಟ್​​ನ ಶಾಪಿಂಗ್​ ಮಾಲ್​ನಲ್ಲಿ ಲಾಟರಿ ಕೌಂಟರ್​ ಇತ್ತು. ಕಳೆದ 13 ವರ್ಷದಿಂದ ಇಲ್ಲಿನ ಮಾರ್ಕೆಟ್​​ ಸಿಬ್ಬಂದಿಗೂ ಚಿರಪರಿಚಿತನಾಗಿದ್ದವನು ಜಾರ್ಜ್​ ಹರ್ಟ್. ಯಾಕಂದ್ರೆ ಸೂರ್ಯ ಒಂದು ದಿನ ಉದಯಿಸುತ್ತಿದ್ದನೋ? ಇಲ್ಲವೋ? ಹರ್ಟ್ ಬಂದು ಲಾಟರಿ ಟಿಕೆಟ್​ ಖರೀದಿಸುತ್ತಿದ್ದ. ಅದೃಷ್ಟ ನೋಡಿ ಟಿಕೆಟ್​ ಖರೀದಿಸಿದ 8 ನಿಮಿಷಗಳಲ್ಲೇ ₹8.5 ಕೋಟಿ ಹಣವನ್ನು ಗೆದ್ದಿದ್ದಾನೆ.

ಇದನ್ನೂ ಓದಿ: 25 ಕೆಜಿ ಅಕ್ಕಿ ಚೀಲದಲ್ಲಿ ₹15 ಲಕ್ಷ ಹಣ.. ಕಂತೆ, ಕಂತೆ ನೋಟು ನೋಡಿ ಉಲ್ಟಾ ಹೊಡೆದ ಗ್ರಾಹಕ; ಆಮೇಲೇನಾಯ್ತು? 

6 ಲಕ್ಷ ಮಂದಿಯಲ್ಲಿ ಜಾರ್ಜ್​​ ಹರ್ಟ್​ ಅದೃಷ್ಟವಂತ!
ಭಾರತೀಯ ಮೂಲದ ಮಾಲೀಕ ತಿಮಿರ್​ ಪಟೇಲ್​​ 604 ಮಿನಿಷ ಮಾರ್ಕೆಟ್​​​ ನೋಡಿಕೊಂಡು ಬರುತ್ತಿದ್ದರು. ಪಟೇಲ್​​ ಸಹ ಅನುದಿನವೂ ಜಾರ್ಜ್​​ ಹರ್ಟ್​ ನನ್ನ ನೋಡಿ ನಗುತ್ತಿದ್ದರು. ಇದೀಗ ಹರ್ಟ್​ $1 ಮಿಲಿಯನ್ ಗೆದ್ದಿದ್ದಾನೆ ಅನ್ನೋದು ಗೊತ್ತಾದ ಕೂಡಲೇ ಆತನ ನಮ್ಮ ಪ್ರಾಮಾಣಿಕ ಗ್ರಾಹಕ. 6 ಲಕ್ಷ ಮಂದಿ ಟಿಕೆಟ್​ ಖರೀದಿಸಿದ್ದರು. ಈ ಪೈಕಿ ಜಾರ್ಜ್ ಹರ್ಟ್​ ಅದೃಷ್ಟವಂತನಾಗಿದ್ದಾನೆ ಎಂಬುದು ಖುಷಿಯ ವಿಚಾರ ಎನ್ನುತ್ತಿದ್ದಾರೆ ತಿಮಿರ್​ ಪಟೇಲ್. ಕೊನೆಗೂ ಅವನ ಅದೃಷ್ಟದ ದಿನ ಬಂದೇ ಬಿಟ್ಟಿದೆ. ಅವನ ತಾಳ್ಮೆ ಹಾಗೂ ಅವನ ಆಶಾಭಾವನೆ ಸೋತಿಲ್ಲ ಎನ್ನುತ್ತಿದ್ದಾರೆ ಪಟೇಲ್.

ಜಾರ್ಜ್​ ಹರ್ಟ್​​ ಕೈಗೆ ಕೊನೆಗೆ ಸಿಗುವ ಹಣ ಎಷ್ಟು?
ಲಾಟರಿ ಎಂದ ಕೂಡಲೇ ಗೆದ್ದ ಎಲ್ಲಾ ಹಣವನ್ನು ವಿಜೇತನಿಗೆ ನೀಡುವುದಿಲ್ಲ. ಒಂದಷ್ಟು ತೆರಿಗೆಗಳ ಬಳಿಕ ಜಾಕ್ ಪಾಟ್​ ಹಣ ಗೆದ್ದವನ ಕೈ ಸೇರುತ್ತದೆ. ಸದ್ಯ, $1 ಮಿಲಿಯನ್ ಗೆದ್ದಿರೋ ಹರ್ಟ್​ಗೆ ಎಲ್ಲಾ ಟ್ಯಾಕ್ಸ್​ ತೆಗೆದು ಸುಮಾರು 4 ಕೋಟಿಗೂ ಅಧಿಕ ಹಣ ಕೈ ಸೇರುವ ಸಾಧ್ಯತೆ ಇದೆ. ಊಟಕ್ಕೆ ಅಂತ ಬಂದಿದ್ದವನು ತನ್ನ ಸ್ನೇಹಿತರೊಂದಿಗೆ 1 ಲಾಟರಿ ಟಿಕೆಟ್ ಖರೀದಿಸಿದ್ದ. ಆ ಕ್ಷಣವೂ ಸ್ನೇಹಿತರು ಗೇಲಿ ಮಾಡಿ ನಕ್ಕಿದ್ದರು. ಇದೀಗ ಅದೇ ಸ್ನೇಹಿತರೊಂದಿಗೆ ಬಂದು ತಾನು ವಿಜೇತನಾಗಿರುವ ಸಂಗತಿಯನ್ನು ಖಚಿತಪಡಿಸಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ ಇದು ಕಣ್ರಿ ಲಾಟರಿ ಅಂದ್ರೆ.. 8 ನಿಮಿಷಗಳಲ್ಲೇ ₹8.5 ಕೋಟಿ ಗೆದ್ದ ಬಡ ಕಾರ್ಮಿಕ!

https://newsfirstlive.com/wp-content/uploads/2024/10/Virginia-Lottery.jpg

Load More