ಲವ್ ಬ್ರೇಕ್ ಅಪ್ ಆಗಿದ್ರೆ ಬೆಂಗಳೂರಿನ ಈ ಕಂಪನಿಯಲ್ಲಿ ಪಕ್ಕಾ ಉದ್ಯೋಗ.. ಲಿಂಕ್ ಇಲ್ಲಿದೆ!

author-image
Bheemappa
Updated On
ಲವ್ ಬ್ರೇಕ್ ಅಪ್ ಆಗಿದ್ರೆ ಬೆಂಗಳೂರಿನ ಈ ಕಂಪನಿಯಲ್ಲಿ ಪಕ್ಕಾ ಉದ್ಯೋಗ.. ಲಿಂಕ್ ಇಲ್ಲಿದೆ!
Advertisment
  • ಪ್ರೀತಿ ವಿಫಲವಾದವರಿಗೆ ಮಹತ್ವದ ಹುದ್ದೆ ಕೊಡುತ್ತಿರುವ ಕಂಪನಿ
  • ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ, ಈ ಅರ್ಹತೆಗಳು ಇರಬೇಕು
  • ಲವ್ ಬ್ರೇಕ್ ಅಪ್ ಆದ ಮೇಲೆ ಕಂಪನಿ ಉದ್ಯೋಗ ಕೊಡುತ್ತದೆ

ನಿಮಗೆ ಏನಾದರೂ ಲವ್ ಬ್ರೇಕ್ ಅಪ್ ಆಗಿದೆಯಾ, ಪ್ರೀತಿಯಲ್ಲಿ ಬಿದ್ದು ಎರಡ್ಮೂರು ಘಟನೆಗಳು ನೋವು ಕೊಡುತ್ತಿದೆಯಾ ಹಾಗಾದ್ರೆ ಇಲ್ಲೊಂದು ನಿಮಗೆ ಒಳ್ಳೆಯ ಉದ್ಯೋಗ ಇದೆ. ಬೆಂಗಳೂರಿನ ಟಾಪ್​ಮೇಟ್​ (Topmate) ಎನ್ನುವ ಕಂಪನಿ ಲವ್ ಬ್ರೇಕ್​ ಅಪ್ ಆದವರಿಂದ ಅರ್ಜಿ ಆಹ್ವಾನ ಮಾಡಿದೆ.

ಟಾಪ್​ಮೇಟ್ ಕಂಪನಿಯಲ್ಲಿ ಮುಖ್ಯಡೇಟಿಂಗ್ ಅಧಿಕಾರಿ (Chief Dating Officer) ಹುದ್ದೆ ಖಾಲಿ ಇದೆ. ಇದಕ್ಕಾಗಿ ಕಂಪನಿಯು ಅರ್ಜಿ ಆಹ್ವಾನ ಮಾಡಿದೆ. ಲವ್​​ನಲ್ಲಿ ಸಾಕಷ್ಟು ಅನುಭವ ಪಡೆದಿರಬೇಕು. ಯಾರು ಲವ್​ನಲ್ಲಿ ಫೇಲ್ ಆಗಿರುತ್ತಾರೋ ಅವರು ಈ ಕೆಲಸಕ್ಕೆ ಅರ್ಹರು ಆಗಿರುತ್ತಾರೆ. ಡೇಟಿಂಗ್ ಬಗ್ಗೆ ಹೊಸದಾಗಿ ಮಾಹಿತಿ ಕೊಡುವ ಕೌಶಲ್ಯ ಹೊಂದಿರಬೇಕು. ಪ್ರೀತಿ, ಡೇಟಿಂಗ್ ಕುರಿತು ಹೊಸ ಪದಗಳನ್ನು ಸೃಷ್ಟಿಸುವ ಚಾಣಕ್ಷತೆ ನಿಮ್ಮಲ್ಲಿ ಇರಬೇಕು.

ಇದು ಅಲ್ಲದೇ 2 ರಿಂದ 3 ವೈವಾಹಿಕ ವೆಬ್​ಸೈಟ್ ಬಳಕೆ ಮಾಡಿದ ಅನುಭವ ಇರಬೇಕು. ಅಂದರೆ ಆನ್‌ಲೈನ್ ಡೇಟಿಂಗ್ ಕುರಿತು ಮಾಹಿತಿ ತಿಳಿದಿರಬೇಕು ಎಂದು ಕಂಪನಿ ಹೇಳಿದೆ. ಈ ಎಲ್ಲ ಅರ್ಹತೆಗಳು ನಿಮ್ಮಲ್ಲಿ ಇದ್ದರೇ ಟಾಪ್​ಮೇಟ್ ಕಂಪನಿಯ ಮುಖ್ಯಡೇಟಿಂಗ್ ಅಧಿಕಾರಿ ಹುದ್ದೆಗೆ ಅಪ್ಲೇ ಮಾಡಬಹುದು.

publive-image

ಇದನ್ನೂ ಓದಿ:608 ಉದ್ಯೋಗ ಆಹ್ವಾನ ಮಾಡಿರುವ ESIC.. ಆರಂಭದಲ್ಲೇ 56,100 ರೂಪಾಯಿ ಸಂಬಳ

ಯಾವುದೇ ಹುದ್ದೆಗಳಿಗೆ ಆಹ್ವಾನ ಮಾಡಬೇಕಾದರೆ ಶೈಕ್ಷಣಿಕ ಹಿನ್ನೆಲೆ, ಎಷ್ಟು ಅಂಕ ಪಡೆದಿದ್ದೀರಿ, ಈ ಮೊದಲು ಯಾವ ಕೆಲಸ ಮಾಡುದ್ದೀರಿ, ಎಷ್ಟು ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ ಎಂದು ಕೇಳಬೇಕು. ಆದರೆ ಟಾಪ್​ಮೇಟ್ ಕಂಪನಿ ಮಾತ್ರ ಲವ್​ನಲ್ಲಿ ಬ್ರೇಕ್ ಅಪ್ ಆಗಿದ್ದರೇ ಕೆಲಸ ಕೊಡಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ.

ಅರ್ಹತೆಗಳು

  • 1 ಲವ್ ಬ್ರೇಕ್ ಆಗಿರಬೇಕು, ಪ್ರೀತಿಯಲ್ಲಿ 2 ಘಟನೆಗಳು ನಡೆದಿರಬೇಕು, 3 ಡೇಟ್ಸ್ ಆಗಿರಬೇಕು. (ಸಂದರ್ಶನದಲ್ಲಿ ಕೇಳುತ್ತಾರೆ ಅಷ್ಟೇ, ಅನುಭವ ಹೇಳಬೇಕು.)
  • ಡೇಟಿಂಗ್ ನಿಯಮಗಳು ಹಾಗೂ ಹೊಸದನ್ನು ರಚಿಸಲು ಗೊತ್ತಿರಬೇಕು. ಇದರ ಬಗ್ಗೆ ಮಾಹಿತಿ ಇದ್ದರೇ ಸಾಕು
  • 2-3 ಡೇಟಿಂಗ್ ಆಪ್​ಗಳಲ್ಲಿ ಡೇಟಿಂಗ್​ಗೆ ಪ್ರಯತ್ನ ಮಾಡಿರಬೇಕು.

ಅರ್ಜಿ ಸಲ್ಲಿಕೆ ಮಾಡಲು ಲಿಂಕ್- https://app.youform.com/forms/ddee111y?utm_source=LinkedIn&utm_medium=hito&utm_campaign=dating_campaign_youform


">January 29, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment