/newsfirstlive-kannada/media/post_attachments/wp-content/uploads/2024/09/Varun-Aradya.jpg)
ಬೆಂಗಳೂರು: ಬೃಂದಾವನ ಸೀರಿಯಲ್ ನಟ, ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್​ ಆರಾಧ್ಯ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದೆ. ಪ್ರೀತಿಸಿ ವಂಚಿಸಿದ ಆರೋಪದಲ್ಲಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/09/Varun-Aradya-2.jpg)
ಇದನ್ನೂ ಓದಿ: EXCLUSIVE: ಮಾಜಿ ಕಾರ್ಪೊರೇಟರ್ ಮಗನ ಲವ್ ದೋಖಾ.. ಯುವತಿ ಸಾವು; ನ್ಯಾಯಕ್ಕಾಗಿ ತಾಯಿ ಕಣ್ಣೀರು
4 ವರ್ಷದ ಹಿಂದೆ ಕಿರುತರೆ ನಟ ವರುಣ್ ಆರಾಧ್ಯ ಅವರು ಇನ್​ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವತಿಯನ್ನು ಪ್ರೀತಿಸಿ ವಂಚಿಸಲಾಗಿದೆ. ಈ ಕಿರುತೆರೆ ನಟ ಬೇರೊಂದು ಹುಡುಗಿ ಜೊತೆ ಅಫೇರ್ ಕೂಡ ಇಟ್ಟುಕೊಂಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದ ಯುವತಿಗೆ ನಟನಿಂದ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ.
/newsfirstlive-kannada/media/post_attachments/wp-content/uploads/2024/09/Varun-Aradya-1.jpg)
2023ರಲ್ಲೇ ವರುಣ್ ಆರಾಧ್ಯ ಫೋನ್ ನೋಡುವಾಗ ಯುವತಿಗೆ ಆಘಾತವಾಗಿದೆ. ಫೋನ್‌ನಲ್ಲಿ ಮತ್ತೊಂದು ಯುವತಿ ಜೊತೆಗಿದ್ದ ಖಾಸಗಿ ಫೋಟೋಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿ ಬ್ರೇಕ್ ಅಪ್ ಮಾಡಿಕೊಳ್ಳಲು ಯುವತಿ ಮುಂದಾಗಿದ್ದಾಳೆ.
ನಟ ವರುಣ್ ಆರಾಧ್ಯ ಅವರು ಯುವತಿಗೆ ಆಕೆಯ ಖಾಸಗಿ ಫೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನನ್ನ ವಿಚಾರ ಬಾಯ್ಬಿಟ್ಟರೆ ವಿಡಿಯೋ ಕೂಡ ಅಪ್​ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ ಎಂದು ನಟ ವರುಣ್ ಆರಾಧ್ಯ ವಿರುದ್ಧ ದೂರು ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us