ಪ್ರೀತಿಗಾಗಿ 80 ಲಕ್ಷ ಖರ್ಚು! ಡೈಮಂಡ್ ರಿಂಗ್, iPhone ಎಲ್ಲವೂ ಕೊಡಿಸಿದ್ದ.. ಅಯ್ಯೋ ಪಾಪ!

author-image
Ganesh
Updated On
ಪ್ರೀತಿಗಾಗಿ 80 ಲಕ್ಷ ಖರ್ಚು! ಡೈಮಂಡ್ ರಿಂಗ್, iPhone ಎಲ್ಲವೂ ಕೊಡಿಸಿದ್ದ.. ಅಯ್ಯೋ ಪಾಪ!
Advertisment
  • ಮೂರು ವರ್ಷದ ಪ್ರೀತಿಯಲ್ಲಿ ಎಲ್ಲವೂ ನೀಡಿದ್ದ
  • ಗೊತ್ತಿಲ್ಲದೇ ಮಾಜಿ ಗೆಳೆಯನ ಜೊತೆ ಆಕೆಗೆ ನಿಶ್ಚಿತಾರ್ಥ
  • ಈಗ ಹುಡುಗನ ಪಾಡು ಅಯ್ಯೋ ಪಾಪ!

ಪ್ರೇಮದ ಹೆಸರಲ್ಲಿ ಪ್ರಿಯತಮೆಯಿಂದ ಪ್ರಿಯಕರನ ದರೋಡೆ ಆಗಿದೆ. ಪ್ರಿಯತಮೆಯನ್ನು ಕಳೆದುಕೊಂಡ ಪ್ರಿಯಕರನ ಪ್ರೀತಿ ಇಲ್ಲಿ ಬಡವಾಗಿದೆ. ಆಕಾಶವೇ ತಲೆ ಮೇಲೆ ಬಿದ್ದಂತಾಗಿರುವ ಪ್ರಿಯಕರ ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.

ಆಗಿದ್ದೇನು..?

ವಿವೇಕ್ ಮತ್ತು ಆಸ್ಥಾ ಅನ್ನೋ ಲವ್​ ಬರ್ಡ್ಸ್​ ಕತೆ ಇದು. ಮಧ್ಯಪ್ರದೇಶದ ರೇವಾ ನಗರದಲ್ಲಿ ಮೂರು ವರ್ಷ ಆರು ತಿಂಗಳ ಹಿಂದೆ ಒಬ್ಬರಿಗೊಬ್ಬರು ಪರಿಚಯವಾದರು. ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗಿ ಮದುವೆ ಆಗೋಣ ಎಂದು ನಿರ್ಧರಿಸಿ ಕೈಕೈಹಿಡಿದು ತಿರುಗಾಡಲು ಶುರು ಮಾಡಿದ್ದರು. ಇನ್ನೇನು ಕೆಲವೇ ತಿಂಗಳಲ್ಲಿ ಮದುವೆ ಆಗುವ ಆಸೆಯಲ್ಲಿ ಪ್ರಿಯಕರ ವಿವೇಕ್ ಇದ್ದ.

ಈಗ ಆರೋಪ ಏನು..?

ಮದುವೆ ಆಗೋದಾಗಿ ನಂಬಿಸಿದ್ದ ಆಸ್ಥಾ.. ಭರ್ಜರಿ ಶಾಪಿಂಗ್​ಗೆ ಮುಂದಾಗಿದ್ದಾಳೆ. ತನಗೆ, ತನ್ನ ಸಹೋದರಿಗೆ ಆನ್​ಲೈನ್​​ನಲ್ಲಿ ಶಾಪಿಂಗ್ ಮಾಡಿದ್ದಾಳೆ. ಲಕ್ಷಾಂತರ ರೂಪಾಯಿ ಆನ್​ಲೈನ್ ಶಾಪಿಂಗ್ ಮಾಡಿದ್ದಾಳೆ. ಇದಕ್ಕೆ ಬೇಕಾದ ಎಲ್ಲ ಹಣವನ್ನು ವಿವೇಕ್​ನಿಂದ ಪಡೆದಿದ್ದಾಳೆ. ಅಲ್ಲದೇ ದುಬಾರಿ ಹೋಟೆಲ್​ಗಳಲ್ಲಿ ಬುಕ್ ಮಾಡಿ ಎಂಜಾಯ್ ಮಾಡಿದ್ದಾಳೆ. ಆ ಹಣವನ್ನೂ ವಿವೇಕ್​ನಿಂದಲೇ ಪಡೆದುಕೊಂಡಿದ್ದಾಳೆ ಎಂಬ ಆರೋಪ ಇದೆ.

ಇದನ್ನೂ ಓದಿ: BREAKING; ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್​ನಿಂದ ಬಿಗ್ ರಿಲೀಫ್​

publive-image

ಏನೆಲ್ಲ ಗಿಫ್ಟ್ ಪಡೆದಿದ್ದಳು..?

ವಿವೇಕ್ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಮೂರು ವರ್ಷದ 6 ತಿಂಗಳಲ್ಲಿ ಆತ ಆಕೆಗೆ ಉಡುಗೊರೆ ನೀಡಲು ಬರೋಬ್ಬರಿ 45 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾನೆ. ಡೈಮಂಡ್ ರಿಂಗ್, ಐಫೋನ್, ದುಬಾರಿ ಬೆಲೆಯ ವಸ್ತುಗಳಾದ ಹ್ಯಾಂಡ್ ಬ್ಯಾಗ್, ಕನ್ನಡಕ, ವಾಚ್​​, ಬಟ್ಟೆ, ಸ್ಲಿಪರ್​ಗಳನ್ನು ಉಡುಗೊರೆಯಾಗಿ ನೀಡಿದ್ದಾನೆ ಎನ್ನಲಾಗಿದೆ. ಆತನ ಪ್ರಕಾರ, ಉಡುಗೊರೆ ಸೇರಿ ಒಟ್ಟು 80 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಈಗ ಏನಾಯ್ತು..?

ಮದುವೆ ಆಗೋದಾಗಿ ವಿವೇಕ್ ಕೈಹಿಡಿದು ಸುತ್ತುತ್ತಿದ್ದ ಆಸ್ತಾ, ಮನಸು ಬದಲಿಸಿದ್ದಾಳೆ. ಗೊತ್ತಿಲ್ಲದೇ ಮಾಜಿ ಸ್ನೇಹಿತನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ನೊಂದ ವಿವೇಕ್ ಪೊಲೀಸ ಠಾಣೆ ಮೆಟ್ಟಿಲೇರಿದ್ದಾನೆ. ಅಂದ್ಹಾಗೆ ಈ ಆಸ್ತಾ, ಮಾಜಿ ಶಾಸಕ ರಾಜ್​ ಕುಮಾರ್ ಉರ್ಮಾಲಯಾರ ಸೊಸೆ. ಇವರ ತಂದೆ ಪಕ್ಷವೊಂದರ ಮಾಜಿ ಜಿಲ್ಲಾಧ್ಯಕ್ಷರು ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೆ, ಮುಂದೆ ನೋಡಿದ್ದಾರೆ. ಕೊನೆಗೆ ಕಾನೂನು ತಜ್ಞರ ಸಲಹೆ ಪಡೆದು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗಿಲ್, ಅಯ್ಯರ್, ಪಟೇಲ್ ಬ್ಯಾಟಿಂಗ್ ಅಬ್ಬರ​.. ರೋಹಿತ್, ರಾಹುಲ್​ ಮತ್ತೆ ದುರ್ಬಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment