/newsfirstlive-kannada/media/post_attachments/wp-content/uploads/2025/04/sushma2.jpg)
ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಸುಶ್ಮಿತಾ ಗೌಡ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..
/newsfirstlive-kannada/media/post_attachments/wp-content/uploads/2025/04/sushma4.jpg)
ಲವ್ ಮಾಕ್ಟೇಲ್ ಸಿನಿಮಾ ಮೂಲಕ ಸಖತ್​ ಫೇಮಸ್​ ಆಗಿದ್ದ ನಟಿ ಸುಶ್ಮಿತಾ ಗೌಡ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಖುಷಿಯಲ್ಲಿದ್ದ ಸ್ಟಾರ್​ ನಟಿ ಸುಶ್ಮಿತಾ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2025/04/sushma3.jpg)
ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಜಂಕಿ ಪಾತ್ರದಲ್ಲಿ ನಟಿ ಸುಶ್ಮಿತಾ ಕಾಣಿಸಿಕೊಂಡಿದ್ದರು. ಈಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ನಟಿ ಸಿಂಪಲ್​ ಆಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಈ ಹಿಂದೆ ಪತಿ ಅಶ್ವಿನ್ ಜೊತೆ ಯಕ್ಷಗಾನ ಕಾನ್ಸೆಪ್ಟ್‌ನೊಂದಿಗೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು ನಟಿ ಸುಶ್ಮಿತಾ.
/newsfirstlive-kannada/media/post_attachments/wp-content/uploads/2025/04/sushma1.jpg)
2022ರಲ್ಲಿ ಅಶ್ವಿನ್ ಮತ್ತು ಸುಶ್ಮಿತಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರು ವಿದೇಶದಲ್ಲಿ ಕೆಲವು ವರ್ಷ ನೆಲೆಸಿದ್ದಾರೆ. ಆಗಾಗ ದಂಪತಿ ಬೆಂಗಳೂರು ಮತ್ತು ಫಾರಿನ್ ಅಂತ ಓಡಾಡುತ್ತಿರುತ್ತಾರೆ.
/newsfirstlive-kannada/media/post_attachments/wp-content/uploads/2025/04/sushma.jpg)
ಲವ್ ಮಾಕ್ಟೇಲ್ 2 ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಬದಲಾಗಿ ಸೋಷಿಯಲ್​ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲೇ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಸೀಮಂತ ಶಾಸ್ತ್ರದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಆ ಫೋಟೋದಲ್ಲಿ ನಟಿ ನೀಲಿ ಬಣ್ಣದ ಸೀರಿಯಲ್ಲಿ ಕಂಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us