/newsfirstlive-kannada/media/post_attachments/wp-content/uploads/2024/10/LOVE_REDDY_MOVIE.jpg)
ಹೈದರಾಬಾದ್: ತೆಲುಗಿನ ಲವ್ ರೆಡ್ಡಿ ಸಿನಿಮಾದಲ್ಲಿ ಅಭಿನಯ ಮಾಡಿದ್ದ ನಟರೊಬ್ಬರ ಮೇಲೆ ಮಹಿಳಾ ಪ್ರೇಕ್ಷಕಿರೊಬ್ಬರು ಹಲ್ಲೆ ನಡೆಸಿದ ಘಟನೆ ನಗರದ ನಿಜಾಂಪೇಟ್ನಲ್ಲಿರುವ ಜಿಪಿಆರ್ ಮಾಲ್ನಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಲವ್ ರೆಡ್ಡಿ ಸಿನಿಮಾಕ್ಕೆ ಪ್ರೇಕ್ಷಕರಿಂದ ಅನಿರೀಕ್ಷಿತ ಪ್ರತಿಕ್ರಿಯೆ ಪಡೆಯುತ್ತಿದೆ. ನಗರದ ಜಿಪಿಆರ್ ಮಾಲ್ನಲ್ಲಿ ಸಿನಿಮಾ ನೋಡುವಾಗ ಕ್ಲೈಮ್ಯಾಕ್ಸ್ ಸೀನ್ ನೋಡಿದ ನಂತರ ಕೆಲ ವೀಕ್ಷಕರು ಭಾವುಕರಾಗಿದ್ದರು. ಇದೇ ಸಿನಿಮಾದಲ್ಲಿ ನಟ ಎನ್ಟಿ ರಾಮಸ್ವಾಮಿ ಅವರು ತಂದೆ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಆದರೆ ಸಿನಿಮಾದಲ್ಲಿ ಪ್ರೇಮಿಗಳನ್ನ ದೂರ ಮಾಡಿದ್ದಾರೆ ಅಂತ ನಂಬಿ ಮಹಿಳೆಯೊಬ್ಬರು ಕೋಪಗೊಂಡು ಎನ್ಟಿ ರಾಮಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: IND vs NZ; ವಾಷಿಂಗ್ಟನ್ ಸ್ಪಿನ್ ಮ್ಯಾಜಿಕ್ಗೆ ಮಕಾಡೆ ಮಲಗಿದ ಕಿವೀಸ್.. 7 ವಿಕೆಟ್ ಉರುಳಿಸಿದ ಸುಂದರ್
ಸಿನಿಮಾ ಮುಗಿಯುತ್ತಿದ್ದಂತೆ ಮಾಲ್ನಲ್ಲಿನ ಥಿಯೇಟರ್ನ ವೇದಿಕೆ ಮೇಲೆ ಲವ್ ರೆಡ್ಡಿ ಸಿನಿಮಾ ತಂಡ ಆಗಮಿಸಿತ್ತು. ಅಭಿಮಾನಿಗಳಿಗೆಲ್ಲ ಸಿನಿಮಾ ಇಷ್ಟ ಆಯಿತಾ ಎಂದು ಕೇಳುತ್ತಿದ್ದರು. ಆದರೆ ಇದೇ ವೇಳೆ ಸಿನಿಮಾ ನೋಡಿ ಭಾವುಕರಾಗಿದ್ದ ಮಹಿಳಾ ಪ್ರೇಕ್ಷಕಿ ಓಡೋಡಿ ಬಂದು ಎನ್ಟಿ ರಾಮಸ್ವಾಮಿಯ ಎದೆ ಮೇಲಿನ ಶರ್ಟ್ ಹಿಡಿದು 4 ಏಟು ಹಾಕಿದ್ದಾರೆ. ತಕ್ಷಣವೇ ಪಕ್ಕದಲ್ಲಿದ್ದ ನಟ ಅಂಜನ್ ರಾಮಚಂದ್ರ, ನಟಿ ಶ್ರಾವಣಿ, ನಿರ್ದೇಶಕ ಸ್ಮರಣ್ ರೆಡ್ಡಿ ಅವರು ಮಧ್ಯೆ ಪ್ರವೇಶಿಸಿ ಮಹಿಳೆ ಹಲ್ಲೆ ಮಾಡುವುದನ್ನ ತಡೆದಿದ್ದಾರೆ.
ಬಳಿಕ ಆಕೆಯನ್ನ ಸಮಾಧಾನ ಪಡಿಸಿ ಅದು ಸಿನಿಮಾದಲ್ಲಿ ನಟಿಸಿದ್ದು, ನಿಜ ಜೀವನದಲ್ಲಿ ಅವರು ಕೆಟ್ಟವರಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಇದೇ ತಿಂಗಳ 18ರಂದು ಬಿಡುಗಡೆಯಾದ ಲವ್ ರೆಡ್ಡಿ ಮೂವಿಯಲ್ಲಿ ನಟ ಅಂಜನ್ ರಾಮಚಂದ್ರ ಹಾಗೂ ಶ್ರಾವಣಿ ಜೋಡಿಯಾಗಿ ನಟಿಸಿದ್ದರು.
#LoveReddy చిత్ర నటుడిపై ప్రేక్షకురాలి దాడి..
హైదరాబాద్ నిజాంపేట జీపీఆర్ మాల్ లో ఘటనసినిమా క్లైమాక్స్ చూసి ఎమోషనల్ అయిన ఒక ప్రేక్షకురాలు థియేటర్స్ విజిట్ కు వెళ్లిన చిత్రబృందంలోని తండ్రి పాత్రను పోషించిన ఎన్ టీ రామస్వామి అనే నటుడు నిజంగానే ఆ ప్రేమజంటను విడిదీశాడని కోపంతో తిడుతూ… pic.twitter.com/FY9uuXTUlC
— Ramesh Pammy (@rameshpammy)
#LoveReddy చిత్ర నటుడిపై ప్రేక్షకురాలి దాడి..
హైదరాబాద్ నిజాంపేట జీపీఆర్ మాల్ లో ఘటన
సినిమా క్లైమాక్స్ చూసి ఎమోషనల్ అయిన ఒక ప్రేక్షకురాలు థియేటర్స్ విజిట్ కు వెళ్లిన చిత్రబృందంలోని తండ్రి పాత్రను పోషించిన ఎన్ టీ రామస్వామి అనే నటుడు నిజంగానే ఆ ప్రేమజంటను విడిదీశాడని కోపంతో తిడుతూ… pic.twitter.com/FY9uuXTUlC— Ramesh Pammy (@rameshpammy) October 24, 2024
">October 24, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ