Ek Love Story! ವಿಷಯ ತಿಳಿದು ಓಡಿ ಹೋಗಲಿಲ್ಲ.. ಲಿವರ್ ದಾನ ಮಾಡಿ ಪತಿಯ ಜೀವ ಉಳಿಸಿದ ಪತ್ನಿ..

author-image
Ganesh
Updated On
Ek Love Story! ವಿಷಯ ತಿಳಿದು ಓಡಿ ಹೋಗಲಿಲ್ಲ.. ಲಿವರ್ ದಾನ ಮಾಡಿ ಪತಿಯ ಜೀವ ಉಳಿಸಿದ ಪತ್ನಿ..
Advertisment
  • ಗಂಡ-ಹೆಂಡತಿಯ ಬದುಕಿನ ಹೋರಾಟದ ಕತೆ ಇದು
  • ಪತ್ನಿಯನ್ನು ಓದಿಸಲು ಖಾಸಗಿ ಕಂಪನಿಯಲ್ಲಿ ಕೆಲಸ
  • ದಿಢೀರ್ ಸಂಸಾರದಲ್ಲಿ ಹುಳಿ ಹಿಂಡಿತ್ತು ಅದೊಂದು ಮಾರಿ

ಪತಿ-ಪತ್ನಿ ನಿತ್ಯ ಗಲಾಟೆ.. ಮನೆ ಬಿಟ್ಟು ಹೋಗೋದು.. ಡಿವೋರ್ಸ್​ ಕೊಡೋದು, ಯಾವುದೂ ಸಾಧ್ಯವಾಗದಿದ್ದಾಗ ಜೀವವನ್ನೇ ಮುಗಿಸಿಬಿಡುವಂತಹ ಹಂತಕ್ಕೆ ಹೋಗುವುದು.. ಯಾರೋ ಒಬ್ಬರು ಅನಾರೋಗ್ಯಕ್ಕೆ ಒಳಗಾದಾಗ, ಕೈ-ಕಾಲು ಅಥವಾ ದೇಹದ ಅಂಗವನ್ನ ಕಳೆದುಕೊಂಡಾಗ ಕಟ್ಟಿಕೊಂಡವರು ದೂರ ಆಗೋದನ್ನೂ ನೋಡಿದ್ದೇವೆ.. ಇಂತಹ ಅಹಿತಕರ ಪ್ರಕರಣಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಇದರ ಮಧ್ಯೆ ತೆಲಂಗಾಣದ ಹಳ್ಳಿ ಒಂದರಲ್ಲಿ ಗಂಡ-ಹೆಂಡತಿಯ ಬದುಕಿನ ಹೋರಾಟದ ಕತೆ ನಿಮಗೆ ಗೊತ್ತಾದರೆ ಸೆಲ್ಯೂಟ್ ಹೊಡೆಯುತ್ತೀರಿ! ಗ್ರೇಟ್ ಎನ್ನುತ್ತೀರಿ.. ಬದುಕಿನ ಹೋರಾಟಕ್ಕೆ ಹೊಸ ಹುಮ್ಮಸ್ಸು ಪಡೆಯುತ್ತೀರಿ..

ಏನಿದು ಪ್ರಕರಣ..?
ಖಮ್ಮಂ (Khammam) ಜಿಲ್ಲೆಯ ಎರ್ಲಪುಡಿಯ ದಾರಾವತ್ ಸೀನು ಮತ್ತು ಲಾವಣ್ಯ ದಂಪತಿಗೆ ಸಂಬಂಧಿಸಿದ ‘ಹೃದಯ ಮೆಚ್ಚಿದ ಕತೆ’ಯಾಗಿದೆ. ಈ ಜೋಡಿ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಮದುವೆಯ ನಂತರವೂ ವಿದ್ಯಾಭ್ಯಾಸದಲ್ಲಿ ಲಾವಣ್ಯ ಆಸಕ್ತಿ ಹೊಂದಿದ್ದಳು. ಲಾವಣ್ಯಳ ವಿದ್ಯಾರ್ಜನೆಯ ಕನಸಿಗೆ ಜೀವ ತುಂಬಲು ಸೀನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಓದಿಸಿದರು. ಇಬ್ಬರ ಈ ಪ್ರೀತಿಯ ಸಂಸಾರದ ಬಂಡಿ ಮುದ್ದಾಗಿಯೇ ಸಾಗಿತ್ತು..

ಇದನ್ನೂ ಓದಿ:Skin Care Tips: ಬೆವರಿನ ನಂತರ.. ವಿಪರೀತ ತುರಿಕೆ.. ಮನೆಮದ್ದಿನಲ್ಲಿದೆ ಸರಳ ಪರಿಹಾರ..!

publive-image

ಈ ಸುಂದರ ಸಂಸಾರದಲ್ಲಿ ಮಾರಿಯೊಂದು ಹುಳಿ ಹಿಂಡಲು ಶುರುಮಾಡಿತ್ತು. ಇದ್ದಕ್ಕಿದ್ದಂತೆ ಸೀನು ಹುಷಾರು ತಪ್ಪಿದರು. ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋದಾಗ ಬರಸಿಡಿಲಿ ವರದಿ ದಂಪತಿಗೆ ಸಿಕ್ಕಿತು. ಸೀನು ಸೀವಿಯರ್ ಜಾಂಡೀಸ್​ನಿಂದ ಬಳಲುತ್ತಿದ್ದು ಲಿವರ್ ಸಂಪೂರ್ಣ ಹಾಳಾಗಿದೆ ಅನ್ನೋ ವಿಚಾರದ ಅದಾಗಿತ್ತು. ಒಂದು ವೇಳೆ ಯಕೃತು ಕಸಿ ಮಾಡದಿದ್ದರೆ ಬದುಕುವುದೇ ಕಷ್ಟ ಎಂದು ವೈದ್ಯರು ಹೇಳಿ ಬಿಡುತ್ತಾರೆ. ನಂಬಿದ್ದ ಜೀವ ಕಣ್ಣಾರೆ ಹೋಗುತ್ತಿರುವಾಗ ಲಾವಣ್ಯ ಒಂದು ಕ್ಷಣ ಅಲ್ಲೇ ಕುಸಿಯುತ್ತಾರೆ.

ಪತಿಯನ್ನು ಹೇಗೆ ಬದುಕಿಸಿಕೊಳ್ಳಬೇಕು ಎಂಬ ದಾರಿ ಹುಡುಕುತ್ತ ಹಠಕ್ಕೆ ಬೀಳುತ್ತಾಳೆ. ವೈದ್ಯರು ಹೇಳಿರೋದು ಒಂದೇ ಆಪ್ಷನ್ ಆಗಿತ್ತು. ಜೀವ ಉಳಿಸಿಕೊಳ್ಳಬೇಕು ಎಂದರೆ ಲಿವರ್ ಕಸಿ ಮಾಡೋದು. ಆದರೆ ಲಾವಣ್ಯಗೆ ಲಿವರ್​ ದಾನಿಗಳು ಎಲ್ಲಿಯೂ ಸಿಗಲಿಲ್ಲ. ಒಂದು ಕಡೆ ಪತಿ ಸಾಯುವ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದರೆ, ಮತ್ತೊಂದೆಡೆ ಲಾವಣ್ಯ ಲಿವರ್ ದಾನಿಗಳಿಗಾಗಿ ಪರದಾಟ ನಡೆಸಿದಳು. ಆದರೆ ಎಲ್ಲಿಯೂ ಲಿವರ್ ದಾನಿಗಳು ಸಿಗಲಿಲ್ಲ. ಕೊನೆಗೆ ಅವರೇ ಲಿವರ್ ದಾನ ಮಾಡಲು ನಿರ್ಧರಿಸುತ್ತಾರೆ. ವೈದ್ಯಕೀಯ ತಪಾಸಣೆ ವೇಳೆ ಲಿವರ್ ದಾನ ಮಾಡುವಷ್ಟು ಆರೋಗ್ಯವಾಗಿರೋದು ದೃಢಪಟ್ಟಿತು. ನನಗೆ ಆರೋಗ್ಯ ಸಮಸ್ಯೆ ಎದುರಾದರೂ ಪರವಾಗಿಲ್ಲ, ಗಂಡನ ಬದುಕು ಮುಖ್ಯ ಎಂದುಕೊಂಡು ಲಾವಣ್ಯ ಲಿವರ್ ದಾನ ಮಾಡಿದ್ದಾರೆ.

ಇದನ್ನೂ ಓದಿ:Skin Care Tips: ಬೆವರಿನ ನಂತರ.. ವಿಪರೀತ ತುರಿಕೆ.. ಮನೆಮದ್ದಿನಲ್ಲಿದೆ ಸರಳ ಪರಿಹಾರ..!

ಎಲ್ಲಾ ಪರೀಕ್ಷೆಗಳು ಪೂರ್ಣಗೊಳಿಸಿದ ನಂತರ ಲಿವರ್ ಕಸಿ ಮಾಡಲಾಯಿತು. ಲಾವಣ್ಯ ಅವರ ಶೇಕಡಾ 65 ರಷ್ಟು ಲಿವರ್ ತೆಗೆದು ಸೀನುಗೆ ಜೋಡಿಸಲಾಗಿದೆ. ಆಪರೇಷನ್ ಯಶಸ್ವಿಯಾಗಿದೆ. ಇದೀಗ ಸೀನು ಚೇತರಿಸಿಕೊಳ್ಳುತ್ತಿದ್ದಾರೆ. ಲಿವರ್ ದಾನ ಮಾಡಿದ ಲಾವಣ್ಯ ಕೂಡ ಆರೋಗ್ಯವಾಗಿದ್ದಾರೆ. ಜೀವವನ್ನೇ ಇಕ್ಕಟ್ಟಿಗೆ ಸಿಲುಕಿಸುವ ಈ ಘಟನೆ ಹಲವರನ್ನು ಕಣ್ಣೀರಿಗೂ ಕಾರಣವಾಗಿದೆ. ದಂಪತಿ ನೂರು ವರ್ಷಗಳ ಸಂತೋಷವಾಗಿರಲಿ ಎಂದು ಅನೇಕರು ಆಶೀರ್ವದಿಸುತ್ತಿದ್ದಾರೆ.

ಇದನ್ನೂ ಓದಿ:‘ರುಚಿ’ ಕಳೆದುಕೊಂಡ ನಾಲಿಗೆ! ತುಂಬಾನೇ ಡೇಂಜರ್​.. ದೊಡ್ಡ ಕಾಯಿಲೆ ಬಂದಿರಬಹುದು ಹುಷಾರ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment