ಪ್ರೀತಿಸಿದ ಹುಡುಗಿ ಮನೆಯವರಿಂದ ಪೆಟ್ರೋಲ್ ಎರಚಿ ಬೆಂಕಿ.. ಪ್ರಿಯತಮ ಸಾವು; ಆಗಿದ್ದೇನು?

author-image
Veena Gangani
Updated On
ಪ್ರೀತಿಸಿದ ಹುಡುಗಿ ಮನೆಯವರಿಂದ ಪೆಟ್ರೋಲ್ ಎರಚಿ ಬೆಂಕಿ.. ಪ್ರಿಯತಮ ಸಾವು; ಆಗಿದ್ದೇನು?
Advertisment
  • ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಯುವತಿ ಕುಟುಂಬ
  • 2 ವರ್ಷಗಳಿಂದ ಮುದ್ದೇಬಿಹಾಳದ ಹುಡುಗಿಯನ್ನು ಪ್ರೀತಿಸುತ್ತಿದ್ದ ರಾಹುಲ್
  • ಪ್ರಿಯಕರ ರಾಹುಲ್ ನಡತೆ ಸರಿಯಿಲ್ಲ ಅಂತ ಯುವತಿ ಮದುವೆಗೆ ನಿರಾಕಣೆ

ವಿಜಯಪುರ: ಮುದ್ದೇಬಿಹಾಳದಲ್ಲಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಲಾಗಿತ್ತು. ಆದರೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಘಟನೆಯಲ್ಲಿ ಶೇ.70 ರಷ್ಟು ಬೆಂದು ಹೋಗಿದ್ದ ಪ್ರಿಯಕರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಏನಿದು ಪ್ರಕರಣ?

ಮೃತ ರಾಹುಲ್ ಮದರಿ ಮುದ್ದೇಬಿಹಾಳದ ಯುವತಿಯನ್ನು ಪ್ರೀತಿಸುತ್ತಿದ್ದ. ಕಳೆದ ಎರಡು ವರ್ಷಗಳಿಂದ ಇವರಿಬ್ಬರ ಮಧ್ಯೆ ಲವ್ ಬ್ರೇಕ್ ಅಪ್ ಆಗಿತ್ತು. ಕಳೆದ ಮೇ 26ರಂದು ಪ್ರಿಯಕರ ರಾಹುಲ್ ಯುವತಿ ಮನೆಗೆ ಹೋಗಿದ್ದಾನೆ. ಆ ವೇಳೆ ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ ಸಂಭವಿಸಿತ್ತು. ರಾಹುಲ್ ತಂದೆ ರಾಮನಗೌಡ ಅವರು ಯುವತಿ ತಂದೆ ವಿರುದ್ಧ ಮುದ್ದೇಬಿಹಾಳ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಯುವತಿ ತಂದೆ ಅಪ್ಪು ಉರ್ಫ್ ಪರಶುರಾಮ ಮದರಿ ಅವರನ್ನು ಬಂಧಿಸಲಾಗಿತ್ತು. ಪ್ರಿಯಕರ ರಾಹುಲ್ ನಡತೆ ಸರಿಯಿಲ್ಲವೆಂದು ಯುವತಿ ಮದುವೆಗೆ ನಿರಾಕರಿಸಿದ್ದಳಂತೆ. ಇಷ್ಟಾದರೂ ರಾಹುಲ್‌ ಯುವತಿಯ ಬೆನ್ನು ಬಿದ್ದಿದ್ದಾನೆ. ಈ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರೋ ಆರೋಪ ಕೇಳಿ ಬಂದಿತ್ತು.

publive-image

ಇದನ್ನೂ ಓದಿ:ಲವ್ ಬ್ರೇಕ್ ಅಪ್ ಸ್ಟೋರಿ.. ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನ; ಮುಂದೇನಾಯ್ತು?

ಈ ಘಟನೆಯಲ್ಲಿ ಶೇ.70 ರಷ್ಟು ಬೆಂದು ಹೋಗಿದ್ದ ಪ್ರಿಯಕರ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ (25) ಅವರು ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇನ್ನು, ಯುವತಿಯ ಚಿಕ್ಕಪ್ಪ ಮುತ್ತು ಮದರಿ ಕೆಲಸಗಾರ ನೀಲಕಂಠ ಹರ್ನಾಳ ಕೂಡ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಯ ಚಿಕ್ಕಮ್ಮ ಮುತ್ತು ಅವರ ಪತ್ನಿ ಸೀಮಾ ಸಕಾಲಿಕ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಯುವಕ ಮತ್ತು ಯುವತಿ ಇಬ್ಬರ ಕುಟುಂಬದವರಿಂದ ದೂರು ದಾಖಲಾಗಿದೆ. ಸದ್ಯ ಪೊಲೀಸರು ಯುವತಿಯ ತಂದೆಯನ್ನು ಬಂಧಿಸಿ. ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment