ಪ್ರೇಮಿಗಳೇ ಹುಷಾರ್​.. ನಿಮ್ಮ ಲವರ್​ಗೆ ಪ್ರಪೋಸ್ ಮಾಡುವಾಗ ಈ ತಪ್ಪು ಮಾತ್ರ ಮಾಡಬೇಡಿ!

author-image
Veena Gangani
Updated On
ಪ್ರೇಮಿಗಳೇ ಹುಷಾರ್​.. ನಿಮ್ಮ ಲವರ್​ಗೆ ಪ್ರಪೋಸ್ ಮಾಡುವಾಗ ಈ ತಪ್ಪು ಮಾತ್ರ ಮಾಡಬೇಡಿ!
Advertisment
  • ಪ್ರಪೋಸ್​ ಮಾಡಲು ಹೋಗಿ ಫಜೀತಿಗೆ ಸಿಕ್ಕಿಹಾಕಿಕೊಂಡ ಪ್ರೇಮಿ 
  • ಮನಸ್ಸಿನಲ್ಲಿರೋ ಪ್ರೀತಿ ವ್ಯಕ್ತಪಡಿಸೋ ಭರದಲ್ಲಿ ಹೀಗೆ ಮಾಡಬೇಡಿ
  • ಪ್ರಿಯತಮೆಗೆ ಸರ್​ರ್ಪ್ರೈಸ್​ ಕೊಡಲು ಹೋಗಿದ್ದ ಯುವಕನಿಗೆ ಬಿಗ್ ಶಾಕ್

ಇದೇ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ ಇದೆ. ಹೀಗಾಗಿ ತಮ್ಮ ಮನಸ್ಸಿನಲ್ಲಿರೋ ಪ್ರೀತಿಯನ್ನ ವ್ಯಕ್ತಪಡಿಸಲು ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರತಿಯೊಬ್ಬರ ತಮ್ಮ ಮನಸ್ಸಿನಲ್ಲಿರೋ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ವಿಭಿನ್ನವಾಗಿರುತ್ತದೆ. ಲವರ್​ಗೆ ಏನೆಲ್ಲಾ ಗಿಫ್ಟ್​ ಕೊಡಬೇಕು, ಹೇಗೆಲ್ಲಾ ಪ್ರಪೋಸ್​ ಮಾಡಬೇಕು, ಆ ಕ್ಷಣವನ್ನು ಖುಷಿಯಿಂದ ಹೇಗೆ ಕಳೆಯುವುದು ಅಂತ ಪ್ಲಾನ್​ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಇದರ ಮಧ್ಯೆ ಪ್ರೇಮಿಯೊಬ್ಬ ಪ್ರಿಯತಮೆಗೆ ಪ್ರಪೋಸ್​ ಮಾಡಲು ಹೋಗಿ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಇದನ್ನೂ ಓದಿ: ಸರಿಗಮಪ ವೇದಿಕೆಗೆ ಶಿವಣ್ಣ ಸಡನ್ ಎಂಟ್ರಿ ಕೊಡಲು ಒಂದು ಬಹುಮುಖ್ಯ ಕಾರಣವಿತ್ತು; ಏನದು?

publive-image

ಹೌದು, ಚೀನಾದ ಸೌತ್ ಗುವಾಂಗ್‌ಆನ್‌ನಲ್ಲಿ ಈ ಘಟನೆ ನಡೆದಿದೆ. ಪ್ರೇಮಿಯೊಬ್ಬ ಲಿಯು ಎಂಬ ಮಹಿಳೆಯನ್ನು ಪ್ರೀತಿಸುತ್ತಿದ್ದನು. ಆದರೆ ಈ ಪ್ರೀತಿಯನ್ನು ಆಕೆಯ ಮುಂದೆ ಹೇಳೋದಕ್ಕೆ ಆಗಿರಲಿಲ್ಲ. ಹೇಗೋ ಧೈರ್ಯ ತಂದುಕೊಂಡು ರೆಸ್ಟೊರೆಂಟ್​ನ ಸಿಬ್ಬಂದಿಯ ಸಹಾಯದಿಂದ ಅಚ್ಚರಿಯ ಪ್ಲಾನ್ ಮಾಡಿದ್ದಾನೆ. ಅವಳು ತಿನ್ನುವ ಕಪ್ ಕೇಕ್​​ ಒಳಗೆ ಉಂಗುರವನ್ನು ಬಚ್ಚಿಟ್ಟಿದ್ದಾನೆ. ಆದರೆ ಈ ಕಪ್​ಕೇಕ್​ ನೋಡುತ್ತಿದ್ದಂತೆ ಲಿಯು ಒಂದೇ ಬಾರಿಗೆ ತಿಂದಿದ್ದಾಳೆ.

publive-image

ಆದ್ರೆ, ಕೇಕ್​ ತಿನ್ನುವಾಗ ಬಾಯಲ್ಲಿ ಸಿಕ್ಕ ಉಂಗುರ ನೋಡಿ ಲಿಯು ಶಾಕ್​ ಆಗಿದ್ದಾಳೆ. ಆ ಕೂಡಲೇ ರೆಸ್ಟೊರೆಂಟ್​ನ ಕಳಪೆ ಗುಣಮಟ್ಟದಿಂದಾಗಿ ಈ ಉಂಗುರವು ಕೇಕ್‌ಗೆ ಸಿಕ್ಕಿದೆ ಅಂತ ದೂರು ನೀಡೋದಕ್ಕೆ ಮುಂದಾಗಿದ್ದಳು. ಆದರೆ ಉಂಗುರವನ್ನು ಸರಿಯಾಗಿ ಗಮನಿಸಿದ ಲಿಯು ಅದು ಪ್ರಪೋಸಲ್ ರಿಂಗ್ ಆಗಿದೆ ಅಂತ ಅರಿತುಕೊಂಡಳು. ಆಗ ಲಿಯು ನುಂಗಲು ಹೊರಟಿದ್ದ ಉಂಗುರವನ್ನು ಎತ್ತಿಕೊಂಡು ಇದು ನಿಮಗೆ ಪ್ರಪೋಸ್ ಮಾಡಲು ಬಚ್ಚಿಟ್ಟಿದ್ದ ಉಂಗುರ ಇದೇ ಎಂದು ಹೇಳಿದ್ದಾನೆ.

publive-image

ಇನ್ನೂ, ಈ ಘಟನೆ ಬಗ್ಗೆ ಲಿಯು ಸಾಮಾಜಿಕ ಜಾಲತಾಣದಲ್ಲಿ ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದು, ಜೊತೆಗೆ ಎಲ್ಲಾ ಪುರುಷರು ಗಮನ ಹರಿಸಬೇಕು, ಆಹಾರ ಪದಾರ್ಥಗಳಲ್ಲಿ ಪ್ರಸ್ತಾಪದ ಉಂಗುರ ಇಡುವುದನ್ನು ಎಂದಿಗೂ ಮರೆಮಾಡಬೇಡಿ ಎಂದು ಸಂದೇಶ ರವಾನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment