ಮೋಸ ಮಾಡಲೆಂದು ನೀನು ಬಂದೆಯಾ.. ₹30 ಕೋಟಿ ಲಾಟರಿ ಟಿಕೆಟ್ ಜೊತೆ ಪ್ರಿಯತಮೆ ಪರಾರಿ!

author-image
admin
Updated On
ಮೋಸ ಮಾಡಲೆಂದು ನೀನು ಬಂದೆಯಾ.. ₹30 ಕೋಟಿ ಲಾಟರಿ ಟಿಕೆಟ್ ಜೊತೆ ಪ್ರಿಯತಮೆ ಪರಾರಿ!
Advertisment
  • ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಪ್ರಿಯತಮೆಯಿಂದ ಮೋಸ
  • ಬರೋಬ್ಬರಿ 30 ಕೋಟಿ ರೂಪಾಯಿ ಲಾಟರಿ ಹಣವನ್ನು ಕೊಟ್ಟಿದ್ದ
  • 30 ಕೋಟಿ ಲಾಟರಿ ಗೆದ್ದ ಮೇಲೆ ಬೇರೊಬ್ಬನ ಜೊತೆ ಪರಾರಿ

ಪ್ರೀತಿಸಿದ ಹುಡುಗಿ ಅಂದ್ರೆ ಹುಡುಗರು ತಮ್ಮ ಸರ್ವಸ್ವವನ್ನು ಧಾರೆ ಎರೆದು ಬಿಡುತ್ತಾರೆ. ಯಾಕೆ ಹೇಳಿ ಪ್ರೀತಿ ಮಧುರ ತ್ಯಾಗ ಅಮರ. ಪ್ರೀತಿ ಕುರುಡು ಪ್ರೇಮ ಕುರುಡು ಅನ್ನೋ ಕಾಲದಲ್ಲಿ ಇಲ್ಲೊಬ್ಬ ಪ್ರೇಮಿ ಮೋಸ ಹೋಗಿ ಪರದಾಡುವಂತಾಗಿದೆ.

ಕೆನಡಾ ಮೂಲದ ವ್ಯಕ್ತಿಯೊಬ್ಬ ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಪ್ರಿಯತಮೆಯಿಂದ ಮೋಸ ಹೋಗಿದ್ದಾನೆ. ಬರೋಬ್ಬರಿ 30 ಕೋಟಿ ರೂಪಾಯಿ ಲಾಟರಿ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ.

ಇದನ್ನೂ ಓದಿ: ರಷ್ಯಾ ಮೇಲೆ ಉಕ್ರೇನ್ ಅತಿ ದೊಡ್ಡ ಡ್ರೋನ್ ದಾಳಿ; 2 ವಾಯುನೆಲೆ, 40 ವಿಮಾನಗಳು ಪೀಸ್‌, ಪೀಸ್‌! 

ನನ್ನ ಹುಡುಗಿ ನನ್ನ ಜೊತೆ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ರೋಮ್ಯಾಂಟಿಕ್ ಪಾರ್ಟನರ್‌ಶಿಪ್‌ಗೆ ಒಪ್ಪಿದ್ದಳು. ಆದರೆ 30 ಕೋಟಿ ರೂಪಾಯಿ ಲಾಟರಿ ಗೆದ್ದ ಮೇಲೆ ಬೇರೊಬ್ಬನ ಜೊತೆ ಪರಾರಿಯಾಗಿದ್ದಾಳೆ. ಈಗ ನನಗೆ ನ್ಯಾಯ ಬೇಕು ಎಂದು ಕೇಳುತ್ತಿದ್ದಾನೆ.

ಈ ವ್ಯಕ್ತಿ ಈಗ ತನ್ನ ಮಾಜಿ ಪ್ರಿಯತಮೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾನೆ. ನನ್ನ ಪ್ರೀತಿ ಜೊತೆಗೆ ಕಳೆದುಕೊಂಡಿರುವ ಲಾಟರಿ ಹಣಕ್ಕಾಗಿ ಹೋರಾಟ ನಡೆಸುತ್ತಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment