/newsfirstlive-kannada/media/post_attachments/wp-content/uploads/2024/06/OYO.jpg)
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ಓಯೋ ರೆಡ್​ ಬಿಲ್ಡಿಂಗ್ ಗೆಸ್ಟ್​ ಹೌಸ್​ನಲ್ಲಿ ಕೊಠಡಿ ಒಂದರಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಮೃತ ಯುವತಿ ಬಾರಾಬಂಕಿ ನಿವಾಸಿ ಎಂದು ತಿಳಿದುಬಂದಿದೆ. ಮಾಹಿತಿ ಮೇರೆಗೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸರ ತನಿಖೆಯಲ್ಲಿ ಗೊತ್ತಾಗಿದ್ದು ಏನು..?
ಕೊಲೆ ಆರೋಪಿ ಆಕೆಯ ಸ್ನೇಹಿತ. ಯುವತಿ ವಾಸವಿದ್ದ ಗ್ರಾಮದ ನಿವಾಸಿಯಾಗಿದ್ದ ತ್ರಿಭುವನ್ ಸಿಂಗ್ ಮೇ 30 ರಂದು ಗೆಸ್ಟ್​ಹೌಸ್​ನಲ್ಲಿ ಕೊಠಡಿ ಬುಕ್ ಮಾಡಿದ್ದ. ಜೂನ್ 3 ರಂದು ಯುವತಿ ಓಯೋ ರೆಡ್​ ಬಿಲ್ಡಿಂಗ್ ಗೆಸ್ಟ್​ ಹೌಸ್​ನಲ್ಲಿ ತ್ರಿಭುವನ್ ಸಿಂಗ್ ಭೇಟಿಗೆ ಬಂದಿದ್ದಳು. ಇಬ್ಬರು ಜೊತೆಯಲ್ಲೇ ಇದ್ದರು. ಜೂನ್ 4 ರಂದು ತ್ರಿಭುವನ್ ತಾವು ವಾಸವಿದ್ದ ಕೊಠಡಿಗೆ ಬೀಗ ಹಾಕಿ ಔಟ್​ ಸೈಡ್ ಹೋಗಿದ್ದಾನೆ. ಆದರೆ ಆಕೆ ಕೋಣೆಯಲ್ಲೇ ಇದ್ದಳು.
ಇತ್ತ ಯುವತಿಯ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ಬಾರಾಬಂಕಿಯ ಔರಂಗಾಬಾದ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಇತ್ತ ಓಯೋ ಗೆಸ್ಟ್ ಹೌಸ್​ನಲ್ಲಿ ತ್ರಿಭುವನ್ ಬುಕ್ ಮಾಡಿದ್ದ ರೂಮ್​ನಿಂದ ದುರ್ವಾಸನೆ ಬರಲು ಶುರುವಾಗಿತ್ತು. ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದಾಗ ಯುವತಿ ಬೆಡ್​​ ಮೇಲೆ ಶವವಾಗಿ ಮಲಗಿರೋದು ಬೆಳಕಿಗೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us