Advertisment

ಮದುವೆ ಆದರೂ ಬಾಡದ ಹಳೇ ಪ್ರೀತಿ.. ಟೊಂಕಕ್ಕೆ ವೇಲು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

author-image
Bheemappa
Updated On
ಮದುವೆ ಆದರೂ ಬಾಡದ ಹಳೇ ಪ್ರೀತಿ.. ಟೊಂಕಕ್ಕೆ ವೇಲು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
Advertisment
  • ಇಬ್ಬರ ಮದುವೆಗೆ ಜಾತಿ ನೆಪವೊಡ್ಡಿ ಬೇರೆ ಮಾಡಿದ್ದ ಮನೆಯವರು
  • ಅಜ್ಜಿ ಬಳಿಗೆ ಹೋಗುತ್ತೇನೆಂದು ಪ್ರೇಮಿಯನ್ನು ಮೀಟ್ ಮಾಡಿದ್ದರು
  • ಆಷಾಢಮಾಸಕ್ಕೆ ಮಗಳನ್ನು ಕರೆದುಕೊಂಡು ಬಂದಿದ್ದ ಪೋಷಕರು

ಚಿಕ್ಕಬಳ್ಳಾಪುರ: ವೇಲನ್ನು ಟೊಂಕಕ್ಕೆ ಕಟ್ಟಿಕೊಂಡು ಕೃಷಿ ಹೊಂಡದ ನೀರಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂತಾಮಣಿ ತಾಲೂಕಿನ ಎಂ.ಮುದ್ದಲಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisment

ಇದನ್ನೂ ಓದಿ: ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಭಾರೀ ಪ್ರಮಾಣದ ನೀರನ್ನು ಹರಿಬಿಟ್ಟ ಅಧಿಕಾರಿಗಳು; ಯಾಕೆ?

ಎಂ.ಮುದ್ದಲಹಳ್ಳಿ ಗ್ರಾಮದ ಯುವಕ ವೇಣು (21) ಹಾಗೂ ಕಾಚಹಳ್ಳಿ ಗ್ರಾಮದ ಯುವತಿ ಅನುಷಾ (19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರು ಕಳೆದ ಎರಡು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಈ ಬಗ್ಗೆ ಯುವತಿ ಮನೆಯಲ್ಲಿ ಜಾತಿ ನೆಪವೊಡ್ಡಿ ವಿರೋಧ ವ್ಯಕ್ತಪಡಿಸಿದ್ದರು. ಹೇಗಾದರೂ ಮಾಡಿ ಇಬ್ಬರನ್ನು ಬೇರೆ ಬೇರೆ ಮಾಡಬೇಕೆಂದು ಒಂದು ತಿಂಗಳ ಹಿಂದೆ ಬೇರೊಬ್ಬನ ಜೊತೆ ಯುವತಿಯ ಮದುವೆ ಮಾಡಲಾಗಿತ್ತು. ಮದುವೆ ನಂತರ ಗಂಡನೊಂದಿಗೆ ದಾಬಸ್​ ಪೇಟೆಯ ಬಳಿ ಯುವತಿ ಸಂಸಾರ ಮಾಡುತ್ತಿದ್ದಳು.

ಇದನ್ನೂ ಓದಿ: ವರುಣಾರ್ಭಟಕ್ಕೆ 90 ಜನ ಸಾವು.. 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತ; ಇಂದು ಕೂಡ ಭಾರೀ ಮಳೆ ಎಚ್ಚರಿಕೆ

Advertisment

publive-image

ಆದರೆ ಆಷಾಢಮಾಸ ಹಿನ್ನೆಲೆಯಲ್ಲಿ ಪೋಷಕರು ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಅಜ್ಜಿಯನ್ನು ನೋಡಬೇಕೆಂದು ನೆಪ ಮಾಡಿಕೊಂಡು ಯುವತಿ, ಯುವಕನಿದ್ದ ಊರಿಗೆ ಬಂದು ಭೇಟಿ ಮಾಡಿದ್ದಳು. ಇದೇ ವೇಳೆ ಪ್ರೇಮಿಗಳು ಮತ್ತೆ ಒಂದಾಗಿ ಸಾವಿನ ನಿರ್ಧಾರ ಮಾಡಿದ್ದರು. ಹೀಗಾಗಿ ಗ್ರಾಮದ ಹೊರಹೊಲಯದ ಕಾಡಿನಂಚಿನ ಕೃಷಿ ಹೊಂಡದ ಬಳಿ ಬಂದಿದ್ದಾರೆ.

ಇದನ್ನೂ ಓದಿ: ಕಾವೇರಿ ನೀರಿಗಾಗಿ ಸಿದ್ದು ಒಗ್ಗಟ್ಟಿನ ತಂತ್ರ.. ಸರ್ವ ಪಕ್ಷ ಸಭೆಗೆ ಬಿಜೆಪಿ-ಜೆಡಿಎಸ್ ಸಾಥ್.. ಯಾರೆಲ್ಲ ಬರ್ತಿದ್ದಾರೆ..?

ನಂತರ ತಮ್ಮ ಮೊಬೈಲ್, ಪರ್ಸ್​ ಹಾಗೂ ಇತರೆ ವಸ್ತುಗಳನ್ನು ದಡದ ಮೇಲೆ ಇಟ್ಟು ಇಬ್ಬರು ತಬ್ಬಿಕೊಂಡು ಟೊಂಕಕ್ಕೆ ವೇಲನ್ನು ಕಟ್ಟಿಕೊಂಡು ಕೃಷಿ ಹೊಂಡದ ನೀರಿಗೆ ಹಾರಿದ್ದಾರೆ. ಇದರಿಂದ ಮೇಲೆ ಬರಲಾಗದೇ ಪ್ರೇಮಿಗಳಿಬ್ಬರು ಸಾವನ್ನಪ್ಪಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ 2 ಮೃತದೇಹಗಳನ್ನು ರವಾನೆ ಮಾಡಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment