Advertisment

Lovers Suicide: ಒಂದೇ ಒಂದು ತಪ್ಪು ಗ್ರಹಿಕೆ.. ಆತ ನೇಣು ಹಾಕೊಂಡ, ಆಕೆ ಕಟ್ಟಡದಿಂದ ಜಿಗಿದಳು

author-image
Harshith AS
Updated On
Lovers Suicide: ಒಂದೇ ಒಂದು ತಪ್ಪು ಗ್ರಹಿಕೆ.. ಆತ ನೇಣು ಹಾಕೊಂಡ, ಆಕೆ ಕಟ್ಟಡದಿಂದ ಜಿಗಿದಳು
Advertisment
  • 15 ಗಂಟೆಗಳ ಅಂತರದಲ್ಲಿ ಪ್ರೇಮಿಗಳಿಬ್ಬರ ದುರಂತ ಅಂತ್ಯ
  • ಗೆಳೆಯರಿಗೆ ಗುಡ್​ ಬೈ ಹೇಳಿ ನೇಣು ಹಾಕಿಕೊಂಡ ಯುವಕ
  • ಪ್ರಿಯಕರ ಸತ್ತ ಸುದ್ದಿ ಕೇಳಿ ಕಟ್ಟಡದಿಂದ ಜಿಗಿದ ಯುವತಿ

ಬೆಂಗಳೂರು: ಹದಿನೈದು ಗಂಟೆಗಳ ಅಂತರದಲ್ಲಿ ಪ್ರೇಮಿಗಳಿಬ್ಬರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾರತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದೇ ಒಂದು ತಪ್ಪು ಗ್ರಹಿಕೆಯಿಂದ ಯುವಕ ದಿಪೇಂದ್ರ ಕುಮಾರ್ ಮತ್ತು ಯುವತಿ ಧಾರ ಸಂಶುಕಾ ಆತ್ಮಹತ್ಯೆ ಮಾಡುವ ಮೂಲಕ ಬದುಕು ಮುಗಿಸಿದ್ದಾರೆ.

Advertisment

‘ಗುಡ್ ಬೈ’

ಧಾರ ಸಂಶುಕಾ ಹಾಗೂ ದಿಪೇಂದ್ರ ಕುಮಾರ್ ಇಬ್ಬರು ಪ್ರೀತಿಸುತ್ತಿದ್ದರು. ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಪ್ರೇಯಸಿಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದುಕೊಂಡು ದಿಪೇಂದ್ರ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 16ನೇ ತಾರೀಖು ಮಧ್ಯಾಹ್ನ ದಿಪೇಂದ್ರ ಕುಮಾರ್ ನೇಣು ಬಿಗಿದುಕೊಂಡು ಸಾವನಪ್ಪಿದ್ದಾನೆ. ಸಾವಿಗೂ ಮುನ್ನ ಗೆಳೆಯರಿಗೆ ಗುಡ್ ಬೈ ಎಂದು ಮೆಸೇಜ್ ಹಾಕಿ ನೇಣಿಗೆ ಶರಣಾಗಿದ್ದಾನೆ.

ಪ್ರೇಮ ವೈಫಲ್ಯ

ದಿಪೇಂದ್ರ ಕುಮಾರ್ ಸಾವಿನ ಬಗ್ಗೆ ಪರಿಶೀಲನೆ ನಡೆಸಿದಾಗ ಪ್ರೇಮ ವೈಫಲ್ಯ ಹಿನ್ನಲೆ ಎಂದು ತಿಳಿದುಬಂದಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದೆ. ಅದಕ್ಕೂ ಮೊದಲು ದಿಪೇಂದ್ರ ಕುಮಾರ್ ಪ್ರೀತಿಸಿದ ಯುವತಿಯನ್ನು ಆಕೆಯ ಮನೆಯವರು ಕರೆದೊಯ್ದರು ಅಂದುಕೊಂಡು ಮತ್ತು ಆಕೆಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದು ನೇಣಿಗೆ ಶರಣಾಗಿದ್ದಾನೆ.

publive-image

ಸಾಕ್ಷಿ ಹೇಳ್ತು ಫೋಟೋಗಳು

ಅತ್ತ ಪ್ರಿಯಕರ ಸಾವಿನ ಸುದ್ದಿ ಕೇಳಿ ಇತ್ತ ಅದೇ ಕಟ್ಟಡದ ಮೇಲಿಂದ ಧಾರ ಸಂಶುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರಿಶೀಲನೆ ವೇಳೆ ಆಕೆ ಸಹ ಪ್ರೇಮವೈಫಲ್ಯಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನು ಯುವತಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಜೊತೆಗಿನ ಫೋಟೊ ಗಳು ಸಿಕ್ಕಿವೆ.

Advertisment

ದಿಪೇಂದ್ರ ಕುಮಾರ್ ಮತ್ತು ಧಾರ ಸಂಶುಕಾ ಇಬ್ಬರು ಪಶ್ಚಿಮ ಬಂಗಾಳ ಮೂಲದವರು. ಒಂದೇ ಒಂದು ತಪ್ಪು ಗ್ರಹಿಕೆಯಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಮಾರತ್ ಹಳ್ಳಿ ಪೊಲೀಸ್ ಠಾಣೆ ಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment