newsfirstkannada.com

ಗೆಳತಿಗೆ ಟಾಟಾ ಮಾಡಲು ಖತರ್ನಾಕ್​ ಐಡಿಯಾ! ಕೆಂಪೇಗೌಡ ಏರ್​ಪೋರ್ಟ್​ ಪ್ರವೇಶಿಸಿದ ಪ್ರಿಯಕರ.. ಮುಂದೇನಾಯ್ತು?

Share :

Published March 13, 2024 at 9:40am

  ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದ ಘಟನೆ

  ದೆಹಲಿ ವಿಮಾನ ಏರುವ ಗೆಳತಿಗಾಗಿ ಏರ್​ಪೋರ್ಟ್​ ಪ್ರವೇಶಿಸಿದ ಪ್ರಿಯಕರ

  ವಿಮಾನ ಏರಿಸಿ ಟಾಟಾ ಮಾಡಿ ಬರಲು ಪ್ರಿಯಕರ ಮಾಡಿದ ಪ್ಲಾನ್​ ಏನು ಗೊತ್ತಾ?

ಬೆಂಗಳೂರು: ಪ್ರೀತಿಗಾಗಿ, ಪ್ರೀತಿಸೋರಿಗಾಗಿ ಏನು ಬೇಕಾದ್ರು ಮಾಡಲು ತಯಾರಿರುತ್ತಾರೆ. ಹೆಚ್ಚೇನು ಬೇಡ ಪಾಕ್​ನಿಂದ ಭಾರತಕ್ಕೆ ಸೀಮಾ ಹೈದರ್​ ಇದಕ್ಕೆ ಪ್ರಮುಖ ಉದಾಹರಣೆ ಎನ್ನಬಹುದು. ಆದರೆ ಬೆಂಗಳೂರಲ್ಲೊಬ್ಬ ಪ್ರಿಯಕರ ತನ್ನ ಗೆಳತಿಗಾಗಿ ಏನು ಮಾಡಿದ್ದಾನೆ ಗೊತ್ತಾ? ಏರ್​​ಪೋರ್ಟ್​ನಲ್ಲಿ ನಿಂತು ವಿಮಾನ ಏರುವ ಗೆಳತಿಗೆ ಟಾಟಾ ಬೈ ಬೈ ಮಾಡಲು ಮಾಡಿದ ಖತರ್ನಾಕ್​ ಐಡಿಯಾ ಮಾತ್ರ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ.

ಗೆಳತಿಗಾಗಿ ಏನು ಮಾಡಿದ ಗೊತ್ತಾ?

ಮಾರ್ಚ್ 8 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದ ಘಟನೆ ಇದಾಗಿದೆ. ಪ್ರಕಾರ್ ಶ್ರೀವತ್ಸ ತನ್ನ ಗೆಳತಿ ಸಂಸ್ಕ್ರತಿ ಚೌಧರಿಗೆ ಟಾಟಾ ಮಾಡಲು ಭದ್ರತೆಯನ್ನು ಮೀರಿ ಏರ್​ಪೋರ್ಟ್​ ಒಳಕ್ಕೆ ಹೋಗಿದ್ದಾನೆ. ನಕಲಿ ಟಿಕೆಟ್​ ಮಾಡಿಸಿ ಪ್ರವೇಶ ಪಡೆದು ಭದ್ರತಾ ಸಿಬ್ಬಂದಿಯನ್ನು ಯಾಮಾರಿಸಿದ್ದಾನೆ. ಆದರೆ ಪ್ರಕಾರ್​ ಕಳ್ಳಾಟ ಏರ್​ಪೋರ್ಟ್​ ಸಿಬ್ಬಂದಿಗೆ ತಿಳಿದುಬಂದು ಕೂಡಲೇ ಆತನನ್ನು ಹಿಡಿದಿದ್ದಾರೆ.

ಅಧಿಕಾರಿಗಳಿಗೆ ಚಳ್ಳೆಹಣ್ಣು

ಪ್ರಕಾರ್​​ ತನ್ನ ಪ್ರೇಯಸಿಗಾಗಿ ಆಕಾಸ ಏರ್ಲೈನ್ಸ್ ಟಿಕೇಟ್ ಎಡಿಟ್ ಮಾಡಿ ಸ್ನೇಹಿತೆ ಜೊತೆ ಕೆಂಪೇಗೌಡ ಏರ್ಪೊರ್ಟ್ ಟರ್ಮಿನಲ್ ಪ್ರವೇಶಿಸಿದ್ದನು. ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಯಾಮಾರಿಸಲು ಮುಂದಾಗಿದ್ದನು. ಆದರೆ ಸ್ನೇಹಿತೆಯನ್ನು ಬೆಂಗಳೂರಿನಿಂದ ದೆಹಲಿ ವಿಮಾನಕ್ಕೆ ಹತ್ತಿಸಿ ವಾಪಸ್ಸು ಬರುವಾಗ ತಗ್ಲಾಕಿಕೊಂಡಿದ್ದ್ದಾನೆ.

ಪ್ರಕರಣ ದಾಖಲು

ಪ್ರಕಾರ್​ ಮೇಲೆ ಅನುಮಾನಗೊಂಡು ಮರು ತಪಾಸಣೇ ವೇಳೆ ಆತ ಏರ್ಲೈನ್ಸ್ ಟಿಕೇಟ್​ ನಕಲು ಮಾಡಿರೋದು ಬಯಲಿಗೆ ಬಂದಿದೆ. ಸದ್ಯ ಏರ್ಪೋರ್ಟ್ ಸಿಬ್ಬಂದಿಗಳು ಪ್ರಕಾರ್​ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನಲೆ‌ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೆಳತಿಗೆ ಟಾಟಾ ಮಾಡಲು ಖತರ್ನಾಕ್​ ಐಡಿಯಾ! ಕೆಂಪೇಗೌಡ ಏರ್​ಪೋರ್ಟ್​ ಪ್ರವೇಶಿಸಿದ ಪ್ರಿಯಕರ.. ಮುಂದೇನಾಯ್ತು?

https://newsfirstlive.com/wp-content/uploads/2024/03/Bengaluru-Airport.jpg

Load More