/newsfirstlive-kannada/media/post_attachments/wp-content/uploads/2023/07/lpg-1.jpg)
ದಸರಾ, ದೀಪಾವಳಿ ಸಂಭ್ರಮದಲ್ಲಿದ್ದ ಜನರಿಗೆ LPG ಶಾಕ್​​ ನೀರಿದೆ. ಸಿಲಿಂಡರ್ ದರ ಏರಿಕೆ ಕಾಣುವ ಮೂಲಕ ಮತ್ತೆ ಬೆರಗಾಗುವಂತೆ ಮಾಡಿದೆ.
ಹೌದು. ವಾಣಿಜ್ಯ ಗ್ಯಾಸ್ ಬಳಕೆದಾರರಿಗೆ ಎಲ್​​ಪಿಜಿ ಶಾಕ್ ನೀಡಿದೆ. ಸಿಲಿಂಡರ್ ದರ ಮತ್ತೆ ಏರಿಕೆ ಕಾಣುವ ಮೂಲಕ ಬಳಕೆದಾರರಿಗೆ ಸಂಕಟ ಮರುಕವಾಗಿದೆ.
ಇದನ್ನೂ ಓದಿ: ತಡರಾತ್ರಿ ಸಿಎಂ ಸಭೆ.. ಮುಡಾ ಕೇಸ್​ ಬಗ್ಗೆ ಸಿದ್ದರಾಮಯ್ಯ ಚರ್ಚೆ.. ಇಂದೇನು ಕತೆ?
ಕಳೆದ ಮೂರು ತಿಂಗಳಿನಿಂದ ಕಮರ್ಷಿಯಲ್ ಸಿಲಿಂಡರ್ ದರ ಸತತ ಏರಿಕೆ ಕಾಣುತ್ತಿದೆ. ಇಂದಿನಿಂದ 19 ಕೆ.ಜಿ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗಿದ್ದಲ್ಲದೆ ಜಾರಿಗೂ ಬಂದಿದೆ. ಬೆಂಗಳೂರಿನಲ್ಲಿ 48.50 ರೂ ದರ ಏರಿಕೆ ಕಂಡಿದೆ.
ಕಳೆದ ಆಗಸ್ಟ್​​ನಲ್ಲಿ 9 ರೂಪಾಯಿ, ಸೆಪ್ಟೆಂಬರ್​​ನಲ್ಲಿ 39 ರೂಪಾಯಿ ಏರಿಕೆ ಕಂಡಿತ್ತು. ಈಗ ಮತ್ತೆ ಅಕ್ಟೋಬರ್ ಆರಂಭದಲ್ಲೇ 48 ರೂಪಾಯಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ತೈಲಬೆಲೆ, ತೆರಿಗೆ ನೀತಿ ಹಿನ್ನೆಲೆ ದರ ಏರಿಕೆಯಾಗಿದೆ. ಒಟ್ಟಿನಲ್ಲಿ 1818 ರೂ.ಗೆ ವಾಣಿಜ್ಯ ಸಿಲಿಂಡರ್​​ ಖರೀದಿಸುವಂತಾಗಿದೆ.
ಯಾವ್ಯಾವ ನಗರದಲ್ಲಿ ನೂತನ ವಾಣಿಜ್ಯ ಸಿಲಿಂಡರ್ ದರ ಎಷ್ಟೆಷ್ಟಿದೆ?
ಮುಂಬೈ - 1693
ಚೆನ್ನೈ - 1903
ಕೊಲ್ಕತ್ತ - 1850
ದೆಹಲಿ - 1740
ಬೆಂಗಳೂರು - 1818
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us