/newsfirstlive-kannada/media/post_attachments/wp-content/uploads/2024/03/LPG_MODI_1.jpg)
ನವದೆಹಲಿ: ಷೇರು ಮಾರುಕಟ್ಟೆ ಕುಸಿತ, ಬೆಲೆ ಏರಿಕೆಯ ಬೆನ್ನಲ್ಲೇ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ. ಏಪ್ರಿಲ್ 8ರಿಂದ ದೇಶಾದ್ಯಂತ ಪರಿಷ್ಕೃತ ದರ ಜಾರಿಗೆ ಬರುತ್ತಿದೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದಿಪ್ ಸಿಂಗ್ ಪೂರಿ ಅವರು ನಡೆಸಿದ ಸುದ್ದಿಗೋಷ್ಟಿಯಲ್ಲಿ ಸಿಲಿಂಡರ್ ಬೆಲೆ ಏರಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: BREAKING: ಪೆಟ್ರೋಲ್, ಡಿಸೇಲ್ ಲೀಟರ್‌ಗೆ ₹2 ಏರಿಕೆ ಆಗಲ್ಲ! ಕೇಂದ್ರ ಸರ್ಕಾರ ಹೇಳಿದ್ದೇನು?
ನಾಳೆಯಿಂದ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 803 ರಿಂದ 853 ಕ್ಕೆ ಏರಿಕೆ ಆಗಲಿದೆ. ಅಲ್ಲದೇ ಉಜ್ವಲ ಯೋಜನೆಯ ಪ್ರತಿ ಸಿಲಿಂಡರ್‌ಗೆ 500 ರೂಪಾಯಿ ಇಂದ 550ಕ್ಕೆ ಏರಿಕೆ ಆಗಿದೆ ಎನ್ನಲಾಗಿದೆ.
ಗೃಹಿಣಿಯರಿಗೆ ಬಿಗ್ ಶಾಕ್!
ನಾಳೆಯಿಂದ ಗೃಹಿಣಿಯರಿಗೆ ಸಿಲಿಂಡರ್ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ದರ 50 ರೂಪಾಯಿ ಏರಿಕೆ ಮಾಡಲಾಗಿದೆ. ನಾಳೆಯಿಂದ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಗೃಹ ಬಳಕೆಯ LPG ಸಿಲಿಂಡರ್‌ಗೆ 853 ರೂಪಾಯಿ ಪಾವತಿ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ