/newsfirstlive-kannada/media/post_attachments/wp-content/uploads/2023/10/LPG_Cylinder_Price.jpg)
ಪ್ರತಿ ತಿಂಗಳದ ಮೊದಲ ದಿನ ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸುತ್ತವೆ. ಅಂತೆಯೇ ಫೆಬ್ರವರಿ 1 ರಂದು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆಯಾಗಿದ್ದು, ಕೇಂದ್ರ ಬಜೆಟ್ಗೂ ಮೊದಲೇ ಗ್ರಾಹಕರಿಗೆ ಗುಡ್ನ್ಯೂಸ್ ಸಿಕ್ಕಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸತತ ಎರಡನೇ ತಿಂಗಳೂ ಕೂಡ ಇಳಿಕೆ ಕಂಡಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆ ರೂ.7 ಇಳಿಕೆಯಾಗಿ ರೂ.1,797ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ 4 ರೂಪಾಯಿ ಇಳಿಕೆ ಕಂಡಿದ್ದು, ಸಿಲಿಂಡರ್ ಬೆಲೆ 1907ಗೆ ಇಳಿಕೆಯಾಗಿದೆ. ಮುಂಬೈ ಮತ್ತು ಚೆನ್ನೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 6.5 ರೂಪಾಯಿ ಇಳಿಕೆಯಾಗಿದೆ.
ಇದನ್ನೂ ಓದಿ: ಬಜೆಟ್ಗೂ ಮೊದಲೇ.. ಆಭರಣ ಪ್ರಿಯರಿಗೆ ಗೋಲ್ಡನ್ ನ್ಯೂಸ್..!
ಮೆಟ್ರೋ ನಗರಗಳಲ್ಲಿ 19 ಕೆಜಿ ಸಿಲಿಂಡರ್ ಬೆಲೆ
- ದೆಹಲಿ: 1797.00 ರೂಪಾಯಿ
- ಕೋಲ್ಕತ್ತಾ: 1907.00 ರೂಪಾಯಿ
- ಮುಂಬೈ: 1749.50 ರೂಪಾಯಿ
- ಚೆನ್ನೈ: 1959.50 ರೂಪಾಯಿ
- ಹೈದರಾಬಾದ್: 2,023 ರೂಪಾಯಿ
- ಬೆಂಗಳೂರು: 1,769.50 ರೂಪಾಯಿ
ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ಸತತ 11ನೇ ತಿಂಗಳಿಗೂ ಬದಲಾಗದೆ ಉಳಿದಿವೆ. ಮಾರ್ಚ್ 2024 ರಲ್ಲಿ ದೇಶೀಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕೊನೆಯ ಬದಲಾವಣೆಯಾಗಿದೆ. ಇನ್ನು OMC ಗಳು ಇಂಧನ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ವಿಮಾನ ಪ್ರಯಾಣ ದುಬಾರಿಯಾಗಬಹುದು. LPG ಸಿಲಿಂಡರ್, ATF ನ ಹೊಸ ಬೆಲೆಗಳು ಇಂದಿನಿಂದ ದೇಶಾದ್ಯಂತ ಜಾರಿಗೆ ಬಂದಿವೆ.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಭರ್ಜರಿ ಗೆಲುವು.. U19 ವಿಶ್ವಕಪ್ ಫೈನಲ್ಗೆ ಎಂಟ್ರಿ ಕೊಟ್ಟ ಯಂಗ್ ಗರ್ಲ್ಸ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್