ಬೆಳ್ಳಂಬೆಳಗ್ಗೆ ಗುಡ್​​ನ್ಯೂಸ್​; LPG ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ..!

author-image
Ganesh
Updated On
ಬೆಳ್ಳಂಬೆಳಗ್ಗೆ ಗುಡ್​​ನ್ಯೂಸ್​; LPG ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ..!
Advertisment
  • ಬೆಂಗಳೂರಲ್ಲಿ ಪರಿಷ್ಕೃತ ಬೆಲೆ ಎಷ್ಟಿದೆ ಗೊತ್ತಾ..?
  • ಕಮರ್ಷಿಯಲ್ ಸಿಲಿಂಡರ್​ ಬೆಲೆಯಲ್ಲಿ 58.50 ರೂ ಇಳಿಕೆ
  • ಯಾವ ರಾಜ್ಯದಲ್ಲಿ ಒಂದು ಸಿಲಿಂಡರ್ ಬೆಲೆ ಎಷ್ಟು?

ಜುಲೈ ತಿಂಗಳು ಶುಭ ಸುದ್ದಿಯೊಂದಿಗೆ ಆರಂಭವಾಗಿದೆ. ಇಂದು ಬೆಳಗ್ಗೆ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) LPG ಸಿಲಿಂಡರ್‌ಗಳ ಬೆಲೆಗಳನ್ನು ಕಡಿಮೆ ಮಾಡಿವೆ.

ಪ್ರತಿ ತಿಂಗಳ ಮೊದಲ ದಿನದಂದು ತೈಲ ಮಾರುಕಟ್ಟೆ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ತಿಂಗಳು ಸಿಲಿಂಡರ್ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ದೇಶಾದ್ಯಂತ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಕಡಿಮೆ ಮಾಡಿರುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ಘೋಷಿಸಿವೆ.

ಇದನ್ನೂ ಓದಿ: ಇವತ್ತಿನಿಂದ ಟೋಲ್ ದರ ಹೆಚ್ಚಳ.. ಬೆಂಗಳೂರು ಪ್ರಯಾಣಿಕರು ಓದಲೇಬೇಕಾದ ಸ್ಟೋರಿ..!

19 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ರೂ.58.50 ರಷ್ಟು ಕಡಿಮೆ ಮಾಡಲಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಸಿಲಿಂಡರ್ ದರ 1,665 ರೂಪಾಯಿಗೆ ತಲುಪಿದೆ. ಇಂದಿನಿಂದಲೇ ಪರಿಷ್ಕೃತ ಬೆಲೆ ಜಾರಿಯಲ್ಲಿ ಇರಲಿದೆ.

ಇನ್ನು ಗೃಹೋಪಯೋಗಿ ಉದ್ದೇಶಗಳಿಗಾಗಿ ಬಳಸುವ ದೇಶೀಯ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬದಲಾದ ಅನಿಲ ಬೆಲೆಗಳು ಸ್ಥಳೀಯ ತೆರಿಗೆಗಳನ್ನು ಆಧರಿಸಿ ಪ್ರತಿ ರಾಜ್ಯದಲ್ಲಿ ವಿಭಿನ್ನ ದರ ಹೊಂದಿರುತ್ತದೆ.

ಪರಿಷ್ಕೃತ ದರ

  • ದೆಹಲಿ -1665 ರೂಪಾಯಿ
  • ನೋಯ್ಡಾ - 1747.50 ರೂಪಾಯಿ
  • ಕೋಲ್ಕತ್ತ - 1769 ರೂಪಾಯಿ
  • ಮುಂಬೈ - 1616 ರೂಪಾಯಿ
  • ಚೆನ್ನೈ - 1881 ರೂಪಾಯಿ
  • ಬೆಂಗಳೂರು- 1,796 ರೂಪಾಯಿ

ಇದನ್ನೂ ಓದಿ: RSS ಬ್ಯಾನ್ ಬಗ್ಗೆ ಪ್ರಿಯಾಂಕ್ ಖರ್ಗೆ ಹೇಳಿಕೆ.. ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ? ಎಂದ ಬಿಜೆಪಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment