newsfirstkannada.com

RCB ಟೀಮ್​​ ಸೇರೋ ಸುಳಿವು ಕೊಟ್ಟ ಕೆ.ಎಲ್​​ ರಾಹುಲ್​​.. ಈ ಬಗ್ಗೆ ಕನ್ನಡಿಗ ಏನಂದ್ರು?

Share :

Published May 11, 2024 at 6:01pm

Update May 11, 2024 at 6:04pm

    ಲಕ್ನೋ ಸೂಪರ್​ ಜೈಂಟ್ಸ್​ ತಂಡದಲ್ಲಿ ಮಹತ್ವದ ಬೆಳವಣಿಗೆ

    ಆರ್​​ಸಿಬಿ ಸೇರೋ ಬಗ್ಗೆ ಸುಳಿವು ನೀಡಿದ ಕ್ಯಾಪ್ಟನ್​ ರಾಹುಲ್​​

    ಐಪಿಎಲ್​ ಫೈನಲ್​ಗೆ ಮುನ್ನವೇ ರಾಹುಲ್​ಗೆ ಲಕ್ನೋ ಬಿಗ್​ ಶಾಕ್​​

2024ರ ಇಂಡಿಯನ್​​ ಪ್ರೀಮಿಯರ್​​ ಫೈನಲ್​ಗೆ ಮುನ್ನವೇ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕ್ಯಾಪ್ಟನ್​ ಕೆ.ಎಲ್​ ರಾಹುಲ್​ಗೆ ಬಿಗ್​ ಶಾಕ್​ ಕಾದಿದೆ. ಮುಂದಿನ ವರ್ಷ ನಡೆಯಲಿರೋ ಐಪಿಎಲ್​​ಗೆ ಕ್ಯಾಪ್ಟನ್​ ಕೆ.ಎಲ್​ ರಾಹುಲ್​​​ ಅವರನ್ನು ಲಕ್ನೋ ಸೂಪರ್​ ಜೈಂಟ್ಸ್​​ ರೀಟೈನ್​ ಮಾಡಿಕೊಳ್ಳೋದು ಡೌಟ್​ ಎನ್ನಲಾಗುತ್ತಿದೆ. ಹಾಗಾಗಿ ಕೆ.ಎಲ್​​ ರಾಹುಲ್​ ಆರ್​​ಸಿಬಿಗೆ ಬರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ ಫ್ಯಾನ್ಸ್​. ಈ ಮಧ್ಯೆ ಕೆ.ಎಲ್​ ರಾಹುಲ್​ ಆರ್​​ಸಿಬಿ ಬಗ್ಗೆ ಮಾತಾಡಿದ್ದಾರೆ.

ಮೊದಲು ನನ್ನ ಜನ ಟೆಸ್ಟ್​​ ಪ್ಲೇಯರ್​ ಎಂದು ಕರೆಯುತ್ತಿದ್ದರು. ನಾನು ವೈಟ್​ ಪ್ಲೇಯರ್​ ಅಲ್ಲ ಎಂದು ತೀರ್ಮಾನಿಸಿದ್ದರು. ನಾನು 2016ರಲ್ಲಿ ಆರ್​​​ಸಿಬಿಗೆ ಬಂದ ಮೇಲೆ ಎಲ್ಲರ ಅಭಿಪ್ರಾಯ ಬದಲಾಯ್ತು. ನಾನು ಆರ್​​ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದೆ. ಆಗ ನಾನು ಟಿ20 ಪ್ಲೇಯರ್​ ಆಗಬಹುದು ಎಂದು ಜನ ನಂಬಿದ್ರು ಎಂದಿದ್ದಾರೆ ಕೆ.ಎಲ್​ ರಾಹುಲ್​​. ಈ ಮೂಲಕ ಮತ್ತೆ ಆರ್​​ಸಿಬಿ ಬರೋ ಸುಳಿವು ನೀಡಿದ್ದಾರೆ.

ಆರ್​ಸಿಬಿ ಫ್ಯಾನ್ಸ್​ ಡಿಮ್ಯಾಂಡ್​ ಏನು?

ಎಷ್ಟು ಕೋಟಿ ಆದ್ರೂ ಪರ್ವಾಗಿಲ್ಲ ನಾವು ಕೊಡ್ತೀವಿ. ನಮ್ಮ ಕರ್ನಾಟಕದ ಹುಡುಗ ಆರ್​​ಸಿಬಿಗೆ ಬರಲಿ. ಅವರಿಗೆ ಆಗೋ ಅವಮಾನ ನಾವು ನೋಡಕ್ಕೆ ಆಗ್ತಿಲ್ಲ. ಕೆ.ಎಲ್​​ ರಾಹುಲ್​ ಅವರೊಂದಿಗೆ ಗೋಯೆಂಕಾ ನಡೆಸಿಕೊಂಡ ರೀತಿ ಬಹಳ ಅಮಾನವೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.

2016ರಲ್ಲಿ ಕೆ.ಎಲ್​ ರಾಹುಲ್​ ಆರ್​ಸಿಬಿ ತಂಡದಲ್ಲಿ ಇದ್ದರು. ಆ ಸೀಸನ್​ನಲ್ಲಿ ರಾಹುಲ್​ ಉತ್ತಮ ಬ್ಯಾಟಿಂಗ್​ ಮಾಡಿದ್ರು. ತಾನು ಆಡಿದ್ದ 12 ಇನ್ನಿಂಗ್ಸ್​ನಲ್ಲಿ 397 ರನ್​ ಸಿಡಿಸಿದ್ರು. ಈ ಪೈಕಿ 4 ಅರ್ಧಶತಕಗಳು ದಾಖಲಾಗಿದ್ದವು. ಬರೋಬ್ಬರಿ 16 ಸಿಕ್ಸರ್​​, 37 ಫೋರ್​ ಚಚ್ಚಿದ್ರು ರಾಹುಲ್​​. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ 150ಕ್ಕೂ ಹೆಚ್ಚಿತ್ತು.

ಇದನ್ನೂ ಓದಿ: ’ಎಷ್ಟು ಕೋಟಿಯಾದ್ರೂ ಆಗಲಿ ಕೆ.ಎಲ್​​ ರಾಹುಲ್​​​ ಆರ್​​ಸಿಬಿಗೆ ಬರಲೇಬೇಕು’- ಏನಿದು ಹೊಸ ಸ್ಟೋರಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಟೀಮ್​​ ಸೇರೋ ಸುಳಿವು ಕೊಟ್ಟ ಕೆ.ಎಲ್​​ ರಾಹುಲ್​​.. ಈ ಬಗ್ಗೆ ಕನ್ನಡಿಗ ಏನಂದ್ರು?

https://newsfirstlive.com/wp-content/uploads/2024/03/KL-Rahul_LSG.jpg

Load More