/newsfirstlive-kannada/media/post_attachments/wp-content/uploads/2024/10/RISHAB_PANT-5.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಬರೋಬ್ಬರಿ 27 ಕೋಟಿ ನೀಡಿ ಖರೀದಿ ಮಾಡಿದ್ರು. ಈ ಮೂಲಕ 2025ರ ಐಪಿಎಲ್ನಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಕ್ಯಾಪ್ಟನ್ಸಿ ನಿರೀಕ್ಷೆಯಲ್ಲಿದ್ದ ಪಂತ್ಗೆ ಲಕ್ನೋ ತಂಡ ಬಿಗ್ ಶಾಕ್ ನೀಡಿದೆ.
ಪಂತ್ಗೆ ಶಾಕ್ ಕೊಟ್ಟ ಲಕ್ನೋ
ಲಕ್ನೋ ಸೂಪರ್ ಜೈಂಟ್ಸ್ ಮುಂದಿನ ಕ್ಯಾಪ್ಟನ್ ಯಾರು? ಅನ್ನೋದರ ಕುರಿತು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮಾತಾಡಿದ್ದಾರೆ. ನಮ್ಮ ತಂಡದಲ್ಲಿ ಕ್ಯಾಪ್ಟನ್ ಆಗಬಲ್ಲ ಆಟಗಾರರು ನಾಲ್ವರು ಇದ್ದಾರೆ. ನಿಕೋಲಸ್ ಪೂರನ್, ಮಾರ್ಕ್ರಮ್, ಮಿಚೆಲ್ ಮಾರ್ಷ್ ಹಾಗೂ ರಿಷಬ್ ಪಂತ್ ಇದ್ದಾರೆ ಎಂದರು.
ಇನ್ನು, ಯಾರು ಕ್ಯಾಪ್ಟನ್ ಎಂದು ನಿರ್ಧಾರವಾಗಿಲ್ಲ. ಇದು ನಮ್ಮ ಸ್ಟ್ರಾಟರ್ಜಿ ಮೇಲೆ ನಿಂತಿದೆ. ನಾಲ್ವರು ಆಟಗಾರರು ತಂಡವನ್ನು ಗೆಲ್ಲಿಸಲು ಆಟವಾಡುತ್ತಾರೆ. ಪಂತ್ ಒಬ್ಬ ಫೈಟರ್. ಹೀಗಾಗಿ ಮೆಗಾ ಹರಾಜಿನಲ್ಲಿ ಪಂತ್ಗೆ ಮಣೆ ಹಾಕಿದ್ದೇವೆ. ಉತ್ತಮ ತಂಡ ಕಟ್ಟಿದ್ದೇವೆ ಎಂದರು.
ಪಂತ್ ಕೈಗೆ ಸಿಕ್ಕಿದ್ದೆಷ್ಟು?
27 ಕೋಟಿಯಲ್ಲಿ ಪಂತ್ ಅವರಿಗೆ ಎಷ್ಟು ಹಣ ಸೇರುತ್ತದೆ ಎಂಬುದು ಎಲ್ಲರ ಪ್ರಶ್ನೆ. ಕೆಲವು ವರದಿಗಳ ಪ್ರಕಾರ ಎಲ್‌ಎಸ್‌ಜಿ ಫ್ರಾಂಚೈಸಿ ರಿಷಬ್ ಪಂತ್ ಅವರನ್ನು 27 ಕೋಟಿಗೆ ಬಿಡ್ ಮಾಡಿದ್ರೂ ಸಂಪೂರ್ಣ ಮೊತ್ತ ಅವರಿಗೆ ಸಿಗುವುದಿಲ್ಲ. ಭಾರತ ಸರ್ಕಾರದ ಆದಾಯ ತೆರಿಗೆ ಕಾಯ್ದೆ ಪ್ರಕಾರ ರಿಷಬ್ ಪಂತ್ ಅವರು ಸರ್ಕಾರಕ್ಕೆ 8.1 ಕೋಟಿ ತೆರಿಗೆಯಾಗಿ ಪಾವತಿಸಬೇಕು. ಹಾಗಾಗಿ ಪಂತ್ ಅವರಿಗೆ 18.9 ಕೋಟಿ ಮಾತ್ರ ಸಿಗಲಿದೆ ಎಂದು ತಿಳಿದು ಬಂದಿದೆ.
ಮೆಗಾ ಆಕ್ಷನ್ಗೆ ಮುನ್ನ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರ ಹಾಕಲಾಗಿತ್ತು. ಈಗ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿಗೆ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಖರೀದಿ ಮಾಡಿದೆ. ಇವರು 2025ರ ಮೆಗಾ ಹರಾಜಿನಲ್ಲೇ ಸೇಲಾದ ಅತ್ಯಂತ ದುಬಾರಿ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: 3 ಭರ್ಜರಿ ಸಿಕ್ಸರ್.. ಬರೋಬ್ಬರಿ 10 ಫೋರ್.. ಟೆಸ್ಟ್ನಲ್ಲಿ 96 ರನ್ ಚಚ್ಚಿದ ಆರ್ಸಿಬಿಯ ಸ್ಫೋಟಕ ಬ್ಯಾಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ