newsfirstkannada.com

ಕನ್ನಡಿಗ ರಾಹುಲ್​ಗೆ ಮತ್ತೆ ಅವಮಾನ ಮಾಡಿದ ಲಕ್ನೋ ತಂಡದ ಮಾಲೀಕ; ಈ ಸಲ ಏನಾಯ್ತು?

Share :

Published May 16, 2024 at 5:17pm

  ಲಕ್ನೋ ತಂಡದ ಕ್ಯಾಪ್ಟನ್​​ ಕೆ.ಎಲ್​ ರಾಹುಲ್​ಗೆ ಮತ್ತೆ ಅವಮಾನ

  ರಾಹುಲ್​ಗೆ ಮತ್ತೆ ಅವಮಾನ ಮಾಡಿದ ಲಕ್ನೋ ತಂಡದ ಮಾಲೀಕ

  ಲಕ್ನೋ ತಂಡದ ಮಾಲೀಕ ಸಂಜೀವ್​​ ಯಾವ ಕ್ಷಮೆ ಕೂಡ ಕೇಳಿಲ್ಲ

ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕ್ಯಾಪ್ಟನ್​​ ಕೆ.ಎಲ್​ ರಾಹುಲ್​ಗೆ ಮತ್ತೆ ಅವಮಾನ ಮಾಡಲಾಗಿದೆ. LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್ ಕೆ.ಎಲ್​ ರಾಹುಲ್​ ಅವರನ್ನು ಮನೆಗೆ ಕರೆದಿಲ್ಲ. ರಾಹುಲ್​ಗೆ ಯಾವುದೇ ಸನ್ಮಾನ ಮಾಡಿಲ್ಲ ಎಂದು ತಿಳಿದು ಬಂದಿದೆ. ಬದಲಿಗೆ ಕೆ.ಎಲ್​ ರಾಹುಲ್​ ಮಾತ್ರವಲ್ಲ ಇಡೀ ಟೀಮ್​​ ಅವರ ಮನೆಗೆ ಭೇಟಿ ನೀಡಿದ್ದು, ಇದೊಂದು ನಾರ್ಮಲ್​​​ ಮೀಟಿಂಗ್​ ಎಂದು ಹೇಳಲಾಗುತ್ತಿದೆ. ತಾನು ಮಾಡಿದ ತಪ್ಪಿನ ಅರಿವಿನಿಂದ ಕೆ.ಎಲ್​ ರಾಹುಲ್​ಗೆ ಸನ್ಮಾನ ಮಾಡಿ ಕ್ಷಮೆ ಕೇಳಿದ್ರು ಅನ್ನೋದು ಸುಳ್ಳು ಎಂದು ತಿಳಿದು ಬಂದಿದೆ.

ಏನಿದು ಘಟನೆ..?

ಕಳೆದ ಕೆಲವು ದಿನಗಳ ಹಿಂದೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​​​ ಹೀನಾಯವಾಗಿ ಸೋಲನ್ನಪ್ಪಿತ್ತು.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಲಕ್ನೋ ಸೂಪರ್​ ಜೈಂಟ್ಸ್​​ ನಿಗದಿತ 20 ಓವರ್​​ನಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಸನ್​ರೈಸರ್ಸ್​​ ಹೈದರಾಬಾದ್​ ತಂಡ ಅದ್ಭುತ ಪ್ರದರ್ಶನ ತೋರಿ ಕೇವಲ 9.4 ಓವರ್​​ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಜಯಭೇರಿ ಬಾರಿಸಿತ್ತು.

ಹೈದರಾಬಾದ್​​ ಪರ ಅಗ್ರೆಸ್ಸಿವ್​ ಬ್ಯಾಟಿಂಗ್​ ಮಾಡಿದ ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ 8 ಸಿಕ್ಸರ್​​, 8 ಫೋರ್​ ಸಮೇತ 89 ರನ್​ ಸಿಡಿಸಿದ್ರು. ಇನ್ನೊಂದೆಡೆ ಇವರಿಗೆ ಸಾಥ್​ ನೀಡಿದ ಅಭಿಷೇಕ್ ಶರ್ಮಾ ಕೇವಲ 28 ಬಾಲ್​ನಲ್ಲಿ 8 ಬೌಂಡರಿ, 6 ಸಿಕ್ಸರ್ ಸಮೇತ 75 ರನ್ ಚಚ್ಚಿದ್ರು.

ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್​ ರೂಮ್​ ಬಳಿ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್​​ ಕೆ.ಎಲ್​​ ರಾಹುಲ್​ ಮೇಲೆ ಕೂಗಾಡಿದ್ದರು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದ್ರೂ ಗೋಯೆಂಕಾ ಅಸಭ್ಯ ವರ್ತನೆ ತೋರಿದ್ರು. ಈ‌ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್​​ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಆರ್​​ಸಿಬಿ ಸೇರ್ತೀನಿ ಎಂದ ಬೆನ್ನಲ್ಲೇ ಕನ್ನಡಿಗ ರಾಹುಲ್​ ಕ್ಷಮೆ ಕೇಳಿದ ಲಕ್ನೋ ತಂಡದ ಮಾಲೀಕ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕನ್ನಡಿಗ ರಾಹುಲ್​ಗೆ ಮತ್ತೆ ಅವಮಾನ ಮಾಡಿದ ಲಕ್ನೋ ತಂಡದ ಮಾಲೀಕ; ಈ ಸಲ ಏನಾಯ್ತು?

https://newsfirstlive.com/wp-content/uploads/2024/05/KL-RAHUL-7.jpg

Load More