/newsfirstlive-kannada/media/post_attachments/wp-content/uploads/2025/03/Nicholas_Pooran_NEW.jpg)
ವೆಸ್ಟ್ ಇಂಡೀಸ್ ಆಟಗಾರರು ಎಂದರೆ ಐಪಿಎಲ್ನಲ್ಲಿ ವಿಶೇಷ ದಾಖಲೆಗಳನ್ನು ಮಾಡುತ್ತಿರುತ್ತಾರೆ. ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್, ಹೆಟ್ಮರ್, ಸುನಿಲ್ ನರೈನ್ ಸೇರಿ ಇತರೆ ಪ್ಲೇಯರ್ಸ್ ಹೊಡಿಬಡಿ ಬ್ಯಾಟಿಂಗ್ಗೆ ಭಾರೀ ಪ್ರಸಿದ್ಧಿ. ಇವರ ಜೊತೆ ನಿಕೋಲಸ್ ಪೂರನ್ ಕೂಡ ಅಬ್ಬರದ ಬ್ಯಾಟಿಂಗ್ಗೆ ಖ್ಯಾತಿ ಪಡೆದವರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಕೇವಲ 24 ಬಾಲ್ಗೆ ಅರ್ಧ ಶತಕ ಸಿಡಿಸಿದ್ದಾರೆ. ವಿಶೇಷ ಎಂದರೆ ಒಂದೇ ಓವರ್ನಲ್ಲಿ ನಿಕೋಲಸ್ ಪೂರನ್ 28 ರನ್ಗಳನ್ನು ಬಾರಿಸಿದ್ದು ಎಲ್ಲರ ಮನ ಗೆದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಎದುರಾಳಿ ಲಕ್ನೋ ತಂಡದವರನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಅದರಂತೆ ಬ್ಯಾಟಿಂಗ್ಗೆ ಆಗಮಿಸಿದ ಲಕ್ನೋ ಓಪನರ್ಸ್ ಮಿಚೆಲ್ ಮಾರ್ಷ್ ಹಾಗೂ ಮಾರ್ಕರಮ್ ದಾಳಿಗೆ ಇಳಿದರು. ಆದ್ರೆ ಮಾರ್ಕರಮ್ 15 ರನ್ಗೆ ವಿಕೆಟ್ ಒಪ್ಪಿಸಿದರು. ಇವರ ನಂತರ ಕ್ರೀಸ್ಗೆ ಆಗಮಿಸಿದ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ನಿಕೋಲಸ್ ಪೂರನ್ ಬ್ಯಾಟಿಂಗ್ ಬಂದವರೇ ಏಕಾಏಕಿ ಬೌಲರ್ಗಳ ಮೇಲೆ ಸವಾರಿ ಮಾಡಲು ನಿಂತರು. ಪೂರನ್ ಬ್ಯಾಟಿಂಗ್ನಿಂದ ಎದುರಾಳಿಗಳಲ್ಲಿ ಎದೆ ನಡುಕ ಹುಟ್ಟಿತ್ತು ಎನ್ನಬಹುದು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದ ಪೂರನ್, ಕೇವಲ 24 ಬಾಲ್ನಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಇದರ ನಂತರವೂ ಬ್ಯಾಟಿಂಗ್ ಮುಂದುವರೆಸಿದ ಪೂರನ್, ಕೇವಲ 30 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್ ಸಮೇತ 75 ರನ್ಗಳನ್ನು ಬಾರಿಸಿದರು.
ಇದನ್ನೂ ಓದಿ: CSK ಅಂಗಳದಲ್ಲಿ ಮೊಳಗಿದ RCB.. RCB ಘೋಷಣೆ; ವಿರಾಟ್ ಕೊಹ್ಲಿಗೆ ಥಲೈವಾ.. ಥಲೈವಾ ಎಂದ ಫ್ಯಾನ್ಸ್
ಆದರೆ ಕೊನೆಗೆ ಸ್ಟಾರ್ಕ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಅತ್ತ ನಡೆದರು. ಕ್ರೀಸ್ನಲ್ಲಿ ಪೂರನ್ ಹಾಗೂ ಮಿಚೆಲ್ ಮಾರ್ಷ್ ಇರುವವರೆಗೆ ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಅಭಿಮಾನಿಗಳೆಲ್ಲಾ ಸಿಕ್ಸ್, ಬೌಂಡರಿಗಳ ಸುರಿಮಳೆಯನ್ನು ನೋಡಿ ಸಖತ್ ಎಂಜಾಯ್ ಮಾಡಿದರು ಎನ್ನಬಹುದು.
ಇನ್ನು ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಲಕ್ನೋ 20 ಓವರ್ಗಳಲ್ಲಿ 209 ರನ್ಗಳನ್ನು ಗಳಿಸಿತ್ತು. ಇದಕ್ಕೆ ಉತ್ತರವಾಗಿ ಅಶುತೋಶ್ ಶರ್ಮಾ ಅವರ ಅಬ್ಬರ ಬ್ಯಾಟಿಂಗ್ ಇಂದ 9 ವಿಕೆಟ್ಗೆ 211 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಗೆಲುವು ಪಡೆದುಕೊಂಡಿತು. ಇದರಿಂದ ಲಕ್ನೋ ಟೀಮ್ ಸೋತು ಹೋಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ