ದಿಗ್ವೇಶ್ ರಾಠಿ ಮಂಗಾಟಕ್ಕೆ ಸೊಪ್ಪು ಹಾಕದ ಪಂತ್; ಆರ್​ಸಿಬಿ ಫ್ಯಾನ್ಸ್ ಹೃದಯ ಗೆದ್ದ LSG ನಾಯಕ..! VIDEO

author-image
Bheemappa
Updated On
ದಿಗ್ವೇಶ್ ರಾಠಿ ಮಂಗಾಟಕ್ಕೆ ಸೊಪ್ಪು ಹಾಕದ ಪಂತ್; ಆರ್​ಸಿಬಿ ಫ್ಯಾನ್ಸ್ ಹೃದಯ ಗೆದ್ದ LSG ನಾಯಕ..! VIDEO
Advertisment
  • ಆರ್​ಸಿಬಿ ಗೆಲ್ಲುವ ಹಂತದಲ್ಲಿದ್ದಾಗ ದಿಗ್ವೇಶ್ ರಾಠಿ ಮಾಡಿದ್ದು ಏನು?
  • ಪಂದ್ಯದಲ್ಲಿ ನಾಟಕೀಯ ಬೆಳವಣಿಗೆಗೆ ಕಾರಣವಾಗಿದ್ದ ದಿಗ್ವೇಶ್ ರಾಠಿ
  • ಆ ಸಮಯದಲ್ಲಿ ಜಿತೇಶ್ ಶರ್ಮಾ ಔಟ್ ಆಗಿದ್ರೆ ಪಂದ್ಯ ಏನಾಗ್ತಿತ್ತೋ?

ಲೀಗ್​​ನ ಅಂತಿಮ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಗೆಲುವು ಸಾಧಿಸಿ ಕ್ವಾಲಿಫೈಯರ್‌- 1ಗೆ ಅರ್ಹತೆ ಪಡೆದಿದೆ. ಬೃಹತ್​ ರನ್​ಗಳ ಟಾರ್ಗೆಟ್ ನೀಡಿದ್ದ ಲಕ್ನೋ ತಂಡ ಗೆಲ್ಲಲು ಸಾಕಷ್ಟು ಪ್ರಯತ್ನ ಮಾಡಿದರೂ ಕೈಗೂಡಲಿಲ್ಲ. ಜೊತೆಗೆ ಸ್ಪಿನ್ನರ್ ದಿಗ್ವೇಶ್ ರಾಠಿ ಅವರು ಜಿತೇಶ್ ಶರ್ಮಾರನ್ನ ಔಟ್ ಮಾಡಲು ಮಂಕಡಿಂಗ್ ಮಾಡಿದರೂ ಪಂತ್ ಸೊಪ್ಪು ಹಾಕಲಿಲ್ಲ.

ಪ್ರತಿ ಪಂದ್ಯದಲ್ಲೂ ದಿಗ್ವೇಶ್ ರಾಠಿ ಏನಾದರೂ ಮಾಡಿ ಸುದ್ದಿಯಾಗುತ್ತಿರುತ್ತಾರೆ. ಅದೇ ರೀತಿ ನಿನ್ನೆಯ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಯಡವಟ್ಟನ್ನು ಮಾಡಿ ಕೈಸುಟ್ಟುಕೊಂಡರು. ದಿಗ್ವೇಶ್ ರಾಠಿ ಪ್ರಯತ್ನಿಸಿದ್ದು ವಿವಾದಕ್ಕೆ ಕಾರಣವಾದರೂ ಆದರೆ ಅದು ನಿಯಮಗಳ ಪ್ರಕಾರ ಜಿತೇಶ್ ಶರ್ಮಾ ನಾಟೌಟ್ ಆಗಿಯೇ ಉಳಿಯುತ್ತಿದ್ದರು ಎಂದು ಹೇಳಲಾಗುತ್ತಿದೆ.

ಆರ್​ಸಿಬಿ 199 ರನ್​ ಗಳಿಸಿ ಗೆಲುವಿನಡೆಗೆ ಮುನ್ನುಗ್ಗುತ್ತಿತ್ತು. ಕ್ರೀಸ್​ನಲ್ಲಿದ್ದ ಮಯಾಂಕ್ ಅಗರ್ವಾಲ್ 38 ರನ್ ಹಾಗೂ ನಾಯಕ ಜಿತೇಶ್ ಶರ್ಮಾ 57 ರನ್​ಗಳಿಂದ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಈ ವೇಳೆ ಮಯಾಂಕ್ ಅಗರ್ವಾಲ್​ಗೆ 17ನೇ ಓವರ್​ನ ಕೊನೆ ಬಾಲ್ ಮಾಡುತ್ತಿದ್ದ ದಿಗ್ವೇಶ್ ರಾಠಿ ಕ್ರೀಸ್​ನಲ್ಲಿ ಚಮಕ್ ಕೊಟ್ಟರು. ನಾನ್​​ ಸ್ಟ್ರೈಕ್​​ನಲ್ಲಿದ್ದ ಜಿತೇಶ್ ಶರ್ಮಾರನ್ನ ಔಟ್ ಮಾಡಲು ಮಂಕಡಿಂಗ್ ಮಾಡಿದರು.

ಇದನ್ನೂ ಓದಿ:RCB ವಿರುದ್ಧ ಸೆಂಚುರಿ, ಆದರೂ ರಿಷಭ್​ ಪಂತ್​ಗೆ ಬಿಸಿಸಿಐ ಬಿಗ್ ಶಾಕ್​​.. ಲಕ್ನೋ ಪ್ಲೇಯರ್ಸ್​ ಏನ್ ಮಾಡಿದ್ರು?

publive-image

17ನೇ ಓವರ್​ನ ಕೊನೆ ಬಾಲ್ ಮಾಡುತ್ತಿದ್ದ ದಿಗ್ವೇಶ್ ರಾಠಿ ಆ ಬಾಲ್ ಹಾಕದೇ ತಕ್ಷಣ ಹಿಂದಕ್ಕೆ ಬಂದು ವಿಕೆಟ್​ಗಳಿಗೆ ಬಾಲ್​ ಅನ್ನು ಟಚ್ ಮಾಡಿ (ಮಂಕಡಿಂಗ್) ಔಟ್​ಗಾಗಿ ಅಂಪೈರ್​​ಗೆ ಅಫೀಲ್ ಮಾಡಿದರು. ಈ ವೇಳೆ ನಾನ್​​ ಸ್ಟ್ರೈಕ್​​ನಲ್ಲಿದ್ದ ಜಿತೇಶ್ ಶರ್ಮಾ ಸಂಪೂರ್ಣವಾಗಿ ಕ್ರೀಸ್​ನ ಲೈನ್​ನಿಂದ ಹೊರಗಿದ್ದರು. ಮೈದಾನದಲ್ಲಿ ಅಂಪೈರ್​ 3ನೇ ಅಂಪೈರ್​ಗೆ ಮನವಿ ಮಾಡಿದರು. ಇದರಿಂದ ಇಡೀ ಆರ್​ಸಿಬಿ ಅಭಿಮಾನಿಗಳೆಲ್ಲ ಬಿಗ್​ ಶಾಕ್​ಗೆ ಒಳಗಾಗಿದ್ದರು.

ಆದರೆ ದಿಗ್ವೇಶ್ ರಾಠಿ ಮಾಡಿದ ಕೆಲಸಕ್ಕೆ ಲಕ್ನೋ ತಂಡದ ನಾಯಕ ರಿಷಭ್ ಪಂತ್ ಸ್ವಲ್ಪನೂ ಸೊಪ್ಪು ಹಾಕಲಿಲ್ಲ. ಇದು ಔಟ್ ಇಲ್ಲ ಎಂದು ತಲೆ, ಕೈ ಅಲ್ಲಾಡಿಸಿದರು. ಮತ್ತೆ ಬ್ಯಾಟಿಂಗ್ ಮಾಡುವಂತೆ ಜಿತೇಶ್​ ಶರ್ಮಾಗೆ ಹೇಳಿದರು. ಇದರಿಂದ ಸಂತಸಗೊಂಡ ಜಿತೇಶ್ ಶರ್ಮಾ, ಕೀಪಿಂಗ್ ಮಾಡಲು ಹೋಗ್ತಿದ್ದ ಪಂತ್​​ರನ್ನ ಕರೆದು ತಬ್ಬಿಕೊಂಡು ಧನ್ಯವಾದ ಹೇಳಿದರು. ತಂಡದಲ್ಲಿ ಈ ಎಲ್ಲ ನಾಟಕೀಯ ಬೆಳವಣಿಗೆಗೆ ಕಾರಣವಾದ ದಿಗ್ವೇಶ್ ರಾಠಿಗೆ ಭಾರೀ ಮುಖಭಂಗವಾದಂತೆ ಆಯಿತು.


">May 27, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment