ಜಸ್ಟ್‌ 4 ರನ್‌ನಲ್ಲಿ ಗೆದ್ದು ಬೀಗಿದ ಲಕ್ನೋ.. ಐಪಿಎಲ್‌ನಲ್ಲಿ ಮತ್ತೊಂದು ಲಾಸ್ಟ್‌ ಓವರ್‌ ರೋಚಕ ಪಂದ್ಯ!

author-image
admin
Updated On
ಶ್ರೇಯಸ್​ ಅಯ್ಯರ್ ಮುಂದೆ ರಿಷಭ್ ಪಂತ್​ಗೆ ಮುಖಭಂಗ.. ಪ್ರಭಸಿಮ್ರನ್ ಅರ್ಧಶತಕ, ಲಕ್ನೋಗೆ ಗರ್ವಭಂಗ
Advertisment
  • 239 ರನ್ ಟಾರ್ಗೆಟ್ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್
  • ಮಿಚೆಲ್ ಮಾರ್ಷ್ 81, ನಿಕೋಲಸ್ ಪೂರನ್ 87 ರನ್‌ ಅಬ್ಬರ
  • ತಾನೇ ಮಾಡಿಕೊಂಡ ಮಿಸ್ಟೇಕ್‌ನಿಂದಾಗಿ ಕೊಲ್ಕತ್ತಾ ಸೋಲು

ಐಪಿಎಲ್ 18ನೇ ಆವೃತ್ತಿ ಮತ್ತೊಂದು ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ನಿನ್ನೆ ನಡೆದ ಆರ್‌ಸಿಬಿ ಪಂದ್ಯದಂತೆ ಇವತ್ತೂ ಕೂಡ ಲಕ್ನೋ ಕೊನೇ ಓವರ್‌ ಸೂಪರ್ ಗೆಲುವು ಸಾಧಿಸಿದೆ. ಈಡನ್ ಗಾರ್ಡನ್‌ ಮೈದಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಜಯ ಜಸ್ಟ್ ಮಿಸ್ ಆಗಿದೆ.

ಐಪಿಎಲ್‌ ಹಣಾಹಣಿಯಲ್ಲಿ ಇವತ್ತು ಡಬಲ್ ಧಮಾಕಾ. ಮೊದಲ ಪಂದ್ಯ ಈಡನ್ ಗಾರ್ಡನ್ ಮೈದಾನದಲ್ಲಿ ಲಕ್ನೋ ವಿರುದ್ಧ ಕೊಲ್ಕತ್ತಾ ಕಣಕ್ಕಿಳಿದಿತ್ತು. ತಾನೇ ಮಾಡಿಕೊಂಡ ಮಿಸ್ಟೇಕ್‌ನಿಂದಾಗಿ ಕೊಲ್ಕತ್ತಾ ತಂಡ ತವರಿನಲ್ಲಿ ರೋಚಕ ಪಂದ್ಯವನ್ನು ಕೈ ಚೆಲ್ಲುವಂತಾಗಿದೆ.

publive-image

ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಲಕ್ನೋ ತಂಡವನ್ನ ಬ್ಯಾಟಿಂಗ್‌ಗೆ ಆಹ್ವಾನ ನೀಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ಕೊಲ್ಕತ್ತಾ ತಂಡವನ್ನು ಬಗ್ಗು ಬಡಿದರು. ಮಿಚೆಲ್ ಜೊತೆಗೂಡಿದ ನಿಕೋಲಸ್ ಪೂರನ್ ಅಂತೂ 8 ಸಿಕ್ಸರ್ ಬಾರಿಸೋ ಮೂಲಕ ಕೆಕೆಆರ್ ಬೌಲರ್‌ಗಳನ್ನ ಕಾಡಿದರು.

ಮಿಚೆಲ್ ಮಾರ್ಷ್ 81, ನಿಕೋಲಸ್ ಪೂರನ್ 87 ರನ್‌ಗಳ ಸಹಾಯದಿಂದ ಲಕ್ನೋ ತಂಡ ಕೇವಲ 3 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿತ್ತು.

ಇದನ್ನೂ ಓದಿ: ಮುಂಬೈ ವಿರುದ್ಧ ಗೆದ್ದು ಬೀಗಿದ ಆರ್​ಸಿಬಿ; ಪಾಯಿಂಟ್ಸ್ ಪಟ್ಟಿ ಕತೆ ಏನಾಯ್ತು..? 

239 ರನ್ ಟಾರ್ಗೆಟ್ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿತು. ನಾಯಕ ಅಜಿಂಕ್ಯಾ ರಹಾನೆ ಅವರು 35 ಬಾಲ್‌ ಎದುರಿಸಿ ತಂಡಕ್ಕೆ 61 ರನ್‌ಗಳ ಕಾಣಿಕೆ ನೀಡಿದರು. ಅಜಿಂಕ್ಯಾ ರಹಾನೆ ಅವರ 8 ಬೌಂಡರಿ, 2 ಸಿಕ್ಸರ್ ಸಖತ್ ಆಗಿತ್ತು. ಅಜಿಂಕ್ಯಾ ಜೊತೆಗೆ ವೆಂಕಟೇಶ್ ಅಯ್ಯರ್ 45 ರನ್, ರಿಂಕು ಸಿಂಗ್ 38 ರನ್‌ ಸಿಡಿಸಿದ್ದರು.

publive-image

ರೋಚಕ ಹಂತದಲ್ಲಿದ್ದ ಪಂದ್ಯದಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಮನೆ ಮಾಡಿತ್ತು. ಆದರೆ ಕೊನೆ ಓವರ್‌ನಲ್ಲಿ ಕೊಲ್ಕತ್ತಾ 7 ವಿಕೆಟ್ ಕಳೆದುಕೊಂಡು ಕೇವಲ 234 ರನ್ ಗಳಿಸಲಷ್ಟೇ ಶಕ್ತವಾಯಿತು. ಐಪಿಎಲ್‌ ಫ್ಯಾನ್ಸ್‌ಗಳಿಗೆ ಹಬ್ಬವಾಗಿದ್ದ ಈ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ಲಕ್ನೋ ನಾಯಕ ರಿಷಭ್ ಪಂತ್ ಭರ್ಜರಿ ಜಯ ಸಾಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment