/newsfirstlive-kannada/media/post_attachments/wp-content/uploads/2025/05/Mitchell_Marsh_1.jpg)
ಕಳೆದ ಪಂದ್ಯದಲ್ಲಿ ಸೋಲುಂಡಿದ್ದ ರಿಷಭ್ ಪಂತ್ ನೇತೃತ್ವದ ಲಕ್ನೋ ಟೀಮ್ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿದೆ. ಲಕ್ನೋ ತಂಡಕ್ಕೆ ಈ ಗೆಲುವು ಸಮಾಧಾನಕರ ತಂದರೂ ಐಪಿಎಲ್ ಪ್ಲೇ ಆಫ್ ದೃಷ್ಟಿಯಿಂದ ಯಾವುದೇ ಉಪಯೋಗವಿಲ್ಲ.
ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕ್ಯಾಪ್ಟನ್ ಶುಭ್ಮನ್ ಗಿಲ್ ಅವರು ಬೌಲಿಂಗ್ ಆಯ್ಕೆ ಮಾಡಿದರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ ಲಕ್ನೋ ತಂಡದ ಓಪನರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಆರಂಭಿಕರಾಗಿ ಅಖಾಡಕ್ಕೆ ಇಳಿದ ಮಿಚೆಲ್ ಮಾರ್ಷ್ ಭರ್ಜರಿ ಶತಕ ಬಾರಿಸಿದರು.
ಮಾರ್ಕರಮ್ (36) ಔಟ್ ಆದ ಬಳಿಕ ಕ್ರೀಸ್ಗೆ ಬಂದ ನಿಕೋಲಸ್ ಪೂರನ್ ಜೊತೆ ಇನ್ನಿಂಗ್ಸ್ ಕಟ್ಟಿದ ಮಿಚೆಲ್ ಮಾರ್ಷ್ ಕೇವಲ 64 ಬಾಲ್ಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್ಗಳಿಂದ 117 ರನ್ ಚಚ್ಚಿದರು. ಈ ವೇಳೆ ಸೆಂಚುರಿ ಸಿಡಿಸಿ ಆಡುತ್ತಿದ್ದ ಮಾರ್ಷ್ ಆರ್ಷದ್ ಖಾನ್ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆದರು. ಇನ್ನೊಂದರೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಿಕೋಲಸ್ ಪೂರನ್, ಗುಜರಾತ್ ಬೌಲರ್ಗಳಿಗೆ ಚಳಿ ಬಿಡಿಸಿದರು.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಟ್ರಂಪ್ ಸರ್ಕಾರ ಬಿಗ್ ಶಾಕ್.. ಈ ಪ್ರತಿಷ್ಠಿತ ವಿಶ್ವವಿದ್ಯಾಲಯದ ಅಡ್ಮಿಷನ್ಗೆ ಬ್ರೇಕ್!
ನಿಕೋಲಸ್ ಪೂರನ್ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ್ದರಿಂದ ತಂಡದ ಮೊತ್ತ ದೊಡ್ಡದು ಆಯಿತು ಎಂದು ಹೇಳಬಹುದು. ತಂಡದಲ್ಲಿ ಕೇವಲ 27 ಎಸೆತಗಳನ್ನು ಎದುರಿಸಿದ ಪೂರನ್ 4 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್ಗಳಿಂದ 56 ರನ್ ಚಚ್ಚಿದರು. ಇದರಿಂದ ಲಕ್ನೋ ತಂಡ 20 ಓವರ್ಗಳಲ್ಲಿ ಕೇವಲ 2 ವಿಕೆಟ್ 235 ರನ್ಗಳ ಬೃಹತ್ ಟಾರ್ಗೆಟ್ ನೀಡಿತು.
ಈ ಗುರಿ ಹಿಂದೆ ಬಿದ್ದ ಗುಜರಾತ್ ಓಪನರ್ಸ್ ಬೇಗನೆ ಪೆವಿಲಿಯನ್ ಸೇರಿದರು. ಸಾಯಿ ಸುದರ್ಶನ್ 21, ಗಿಲ್ 35 ರನ್. ಇದರಿಂದ ಗುಜರಾತ್ ಮೆಲ್ಲಗೆ ನೆಲಕಚ್ಚಲು ಆರಂಭಿಸಿತು. ಆದರೆ ಕೊನೆವರೆಗೂ ಪೈಪೋಟಿ ನೀಡಿದ್ದು ಮೆಚ್ಚಲೇಬೇಕು. ಜೋಶ್ ಬಟ್ಲರ್ 33, ರುದರ್ಫೋರ್ಡ್ 38 ಹಾಗೂ ಶಾರುಕ್ ಖಾನ್ 57 ಭರ್ಜರಿ ಬ್ಯಾಟಿಂಗ್ ಮಾಡಿದರು. ಉಳಿದವರು 5 ರನ್ಗಳ ಗಡಿ ಕೂಡ ದಾಟಲಿಲ್ಲ ಇದರಿಂದ ಗುಜರಾತ್ 9 ವಿಕೆಟ್ಗೆ 202 ರನ್ ಮಾತ್ರ ಗಳಿಸಿ ಸೋಲೋಪ್ಪಿಕೊಂಡಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ