/newsfirstlive-kannada/media/post_attachments/wp-content/uploads/2025/04/Vaibhav_Suryavanshi.jpg)
ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾಧಾರಣ ಮೊತ್ತದ ಟಾರ್ಗೆಟ್ ಅನ್ನು ರಾಜಸ್ಥಾನ್ ರಾಯಲ್ಸ್ ಚೇಸ್ ಮಾಡಲಾಗದೇ ಸೋಲೋಪ್ಪಿಕೊಂಡಿದೆ. ಪಂದ್ಯವನ್ನು ಕೊನೆವರೆಗೆ ಎಳೆದುಕೊಂಡು ಬಂದ ರಾಜಸ್ಥಾನ್ ಕೇವಲ 2 ರನ್ಗಳಿಂದ ಸೋತಿದೆ.
ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಕ್ಯಾಪ್ಟನ್ ರಿಷಭ್ ಪಂತ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆರಂಭದಲ್ಲೇ ಆಘಾತಕ್ಕೆ ಒಳಗಾದರು. ಏಕೆಂದರೆ ತಂಡದ ಪರ ಆರಂಭಿಕರಾದ ಮಿಚೆಲ್ ಮಾರ್ಷ್ ಕೇವಲ 4 ರನ್ಗೆ ಕ್ಯಾಚ್ ನೀಡಿದರು. ಆದರೆ ಮಾರ್ಕ್ರಾಮ್ ಉತ್ತಮ ಬ್ಯಾಟಿಂಗ್ನಿಂದ 45 ಎಸೆತದಲ್ಲಿ 66 ರನ್ ಗಳಿಸಿ ರಿಯಾನ್ ಪರಾಗ್ಗೆ ಕ್ಯಾಚ್ ಕೊಟ್ಟರು.
ನಿಕೋಲಸ್ ಪೂರನ್ 11, ರಿಷಭ್ ಪಂತ್ ಕೇವಲ 3, ಆಯುಷ್ ಬದೋನಿಯ ಅತ್ಯುತ್ತಮ ಬ್ಯಾಟಿಂಗ್ನಿಂದ ಅರ್ಧಶತಕ ಬಾರಿಸಿದರು. ಅಬ್ದುಲ್ ಸಮದ್ 10 ಎಸೆತದಲ್ಲಿ 4 ಸಿಕ್ಸರ್ಗಳಿಂದ 30 ರನ್ಗಳ ಕಾಣಿಕೆ ನೀಡಿದ್ದರಿಂದ ಲಕ್ನೋ ಟೀಮ್ 20 ಓವರ್ಗಳಲ್ಲಿ 5 ವಿಕೆಟ್ಗೆ 181 ರನ್ಗಳ ಟಾರ್ಗೆಟ್ ನೀಡಿತ್ತು.
ಇದನ್ನೂ ಓದಿ:IPL ಪಾಯಿಂಟ್ ಟೇಬಲ್ನಲ್ಲಿ ಭಾರೀ ಬದಲಾವಣೆ.. ಗುಜರಾತ್ಗೆ ಗೆಲುವು, ಕುಸಿದ ಡೆಲ್ಲಿ
ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಭದ್ರ ಅಡಿಪಾಯ ಹಾಕಿತು. 14 ವರ್ಷ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಹಾಗೂ ಜೈಸ್ವಾಲ್ ಈ ಇಬ್ಬರ ಭರ್ಜರಿ ಬ್ಯಾಟಿಂಗ್ ಮೂಡಿ ಬಂದಿತು. 14 ವರ್ಷದ ವೈಭವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 20 ಎಸೆತದಲ್ಲಿ 2 ಬೌಂಡರಿ, 3 ಭರ್ಜರಿ ಸಿಕ್ಸರ್ಗಳಿಂದ 34 ರನ್ ಚಚ್ಚಿದರು. ವೈಭವ್ ಸೂರ್ಯವಂಶಿ ಚೊಚ್ಚಲ ಪಂದ್ಯದಲ್ಲೇ ನಿರರ್ಗಳವಾಗಿ ಬ್ಯಾಟ್ ಬೀಸಿದರು.
ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತೊಂದು ಹಾಫ್ ಸೆಂಚುರಿ ಬಾರಿಸಿ ಸಂಭ್ರಮಿಸಿದರು. ಪಂದ್ಯದಲ್ಲಿ 52 ಎಸೆತಗಳನ್ನ ಎದುರಿಸಿದ ಜೈಸ್ವಾಲ್ 5 ಬೌಂಡರಿ, ಭರ್ಜರಿಯಾಗಿ 4 ಸಿಕ್ಸ್ಗಳಿಂದ 74 ರನ್ಗಳ ಕಾಣಿಕೆ ನೀಡಿದೆ. ಆದರೆ ಆವೇಶ್ ಖಾನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು.
ಇನ್ನು ನಾಯಕ ರಿಯಾನ್ ಪರಾಗ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಹೀಗಾಗಿ 26 ಬಾಲ್ನಲ್ಲಿ 3 ಬೌಂಡರಿ 2 ಸಿಕ್ಸರ್ನಿಂದ 39 ರನ್ ಗಳಿಸಿದರು. ಶಿಮ್ರಾನ್ ಹೆಟ್ಮೆಯರ್ 12ಕ್ಕೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಧೃವ್ ಜುರೆಲ್ 6 ಹಾಗೂ ಶುಭಂ ದುಬೆ 3 ಈ ಇಬ್ಬರು ತಂಡವನ್ನು ದಡ ಸೇರಿಸುವಲ್ಲಿ ವಿಫಲವಾದರು. ಹೀಗಾಗಿ ಮತ್ತೊಂದು ರಣರೋಚಕ ಪಂದ್ಯದಲ್ಲಿ ರಾಜಸ್ಥಾನ್ ಸೋಲಿಗೆ ಶರಣಾಯಿತು. ರಾಜಸ್ಥಾನ್ 5 ವಿಕೆಟ್ಗೆ 178 ರನ್ ಗಳಿಸಿ ಕೇವಲ 2 ರನ್ಗಳಿಂದ ಲಕ್ನೋ ತಂಡದ ವಿರುದ್ಧ ತಲೆ ಬಾಗಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ